Fact Check | ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಲೇವಡಿಗಾಗಿ ತಿರುಚಿದ ಬಿಜೆಪಿ..!

ಸಾಮಾಜಿಕ ಜಾಲತಾಣದಲ್ಲಿ “ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದಲ್ಲಿ ದೇಶದ ಏಕತೆಗಾಗಿ ರಾಹುಲ್‌ ಗಾಂಧಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರಿಗೆ ಯಾರು ರಾಹುಲ್‌ ಗಾಂಧಿ ಯಾರು ರಾಜೀವ್‌ ಗಾಂಧಿ ಏಂಬುದೇ ತಿಳಿದಿಲ್ಲ” ಎಂಬ ತಲೆ ಬರಹದೊಂದಿಗೆ ವಿಡಿಯೋ ಕ್ಲಿಪ್‌ವೊಂದು ವೈರಲ್‌ ಆಗಿದೆ.

ಆದರೆ ಇದರ ಪೂರ್ಣ ವಿಡಿಯೋವನ್ನು ಹಂಚಿಕೊಳ್ಳದ  ಬಿಜೆಪಿ ಸೇರಿದ ಹಾಗೆ ಹಲವು ಪಕ್ಷಗಳು ಕ್ಲಿಪ್‌ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಹಬ್ಬಲು ನೇರವಾಗಿ ಕಾರಣವಾಗಿವೆ ಎನ್ನುವ ಆರೋಪವನ್ನು ಕಾಂಗ್ರೆಸ್‌ನ ಕೆಲ ನಾಯಕರು ಮಾಡುತ್ತಿದ್ದಾರೆ. ಈ ಕುರಿತು ಸತ್ಯಾನ್ವೇಷಣೆಯನ್ನು ನಡೆಸಿದಾಗ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ ಪೂರ್ಣ ವಿಡಿಯೋದಲ್ಲಿನ ಸತ್ಯ ಬಹಿರಂಗವಾಗಿದೆ

ಅಸಲಿಗೆ ವೈರಲ್‌ ಆಗಿರುವ ವಿಡಿಯೋ ಇದೇ ನವೆಂಬರ್‌ 20 ರದ್ದಾಗಿದೆ ಎಂಬುದು ಹಲವು ವರದಿಗಳಿಂದಲೇ ಸ್ಪಷ್ಟವಾಗಿದೆ. ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಉದ್ದೇಶಪೂರ್ವಕವಾಗಿ ಹೇಳಿಲ್ಲ ಎಂಬುದು ಕಾಂಗ್ರೆಸ್‌ ಹಂಚಿಕೊಂಡ ಸಂಪೂರ್ಣ ವಿಡಿಯೋದಿಂದಲೇ ಬಹಿರಂಗವಾಗಿದೆ. ಈ ದೇಶದ ಏಕತೆಗಾಗಿ ರಾಹುಲ್‌ ಗಾಂಧಿ  ಅವರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಬಾಯ್ತಪ್ಪಿನಿಂದ ಖರ್ಗೆ ಹೇಳಿಕೆಯನ್ನು ನೀಡಿದ್ದಾರೆ. ಆನಂತರ ಕೂಡಲೇ ಅದನ್ನು ಸರಿಪಡಿಸಿಕೊಂಡಿದ್ದಾರೆ.

ಯಾವಾಗ ಮಲ್ಲಿಕಾರ್ಜುನ ಖರ್ಗ ಅವರು ರಾಹುಲ್‌ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದರೋ ಆಗಲೇ ವೇದಿಯ  ಮೇಲಿದ್ದ ಇತರರು  ಸರಿ ಪಡಿಸಿ ಅವರು ರಾಹುಲ್‌ ಗಾಂಧಿ ಅಲ್ಲಾ ರಾಜೀವ್‌ ಗಾಂಧಿ ಎಂದು ಸ್ಪಷ್ಟ ಪಡಿಸಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಮಲ್ಲಿಕಾರ್ಜುನ ಖರ್ಗೆಯವರು ಜನರ ಬಳಿ ಮತ್ತು ಮಾಧ್ಯಮದವರ ಬಳಿ ಕ್ಷಮೆ ಕೇಳಿದ್ದಾರೆ. ಆ ಪೂರ್ತಿ ವಿಡಿಯೋ ಕೆಳಗಿದೆ ನೋಡಿ.

ಈ ವಿಡಿಯೋವಿನ ಕೆಲ ಸೆಕೆಂಡಿನ ಕ್ಲಿಪ್‌ ಅನ್ನು ಮಾತ್ರ ಹಂಚಿಕೊಂಡಿರುವ ಇತರೆ ಪಕ್ಷದ ಹಲವು ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಹುಲ್‌ ಗಾಂಧಿ ಅವರಿಗೂ ರಾಜೀವ್‌ ಗಾಂಧಿ ಅವರಿಗೂ ವ್ಯತ್ಯಾಸವೇ ಗೊತ್ತಿಲ್ಲ ಎಂದು ಹೇಳುವ ಮೂಲಕ ಲೇವಡಿ ಮಾಡುತ್ತಿದ್ದಾರೆ.


ಇದನ್ನೂ ಓದಿ : ಇದನ್ನು ಓದಿ: Fact Check: ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ | Tippu Sultan | Sword |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *