Fact Check : ಭಾರತದ ಫುಟ್‌ಬಾಲ್‌ ತಂಡ 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ ಎಂಬ ಸುದ್ದಿ ಸುಳ್ಳು

“2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಈಗ, ಭಾರತ ಅಧಿಕಕೃತವಾಗಿ ಅರ್ಹತೆಯನ್ನು ಪಡೆದುಕೊಂಡಿದೆ. ಆ ಮೂಲಕ ಭಾರತ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎಂಬ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಳ್ಳುತ್ತಿದ್ದಾರೆ.

ಈ ಪೋಸ್ಟ್‌ ಜೊತೆ ಎರಡು ಫೋಟೋಗಳನ್ನು ಸೇರಿಸಿ ಎಡಿಟ್‌ ಮಾಡಿ ಒಂದು ಫೋಟೋವಾಗಿ ಪರಿವರ್ತಿಸಿ ಇದೇ ರೀತಿಯ ತಲೆ ಬರಹವನ್ನು ನೀಡಲಾಗಿದ್ದು. ಇದಕ್ಕೆ ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ ಶೇರ್‌ಗಳನ್ನು ಮಾಡಲಾಗಿದೆ. ಸಾವಿರಾರು ಕಮೆಂಟ್‌ಗಳು ಕೂಡ ಈ ಪೋಸ್ಟ್‌ಗೆ ಹರಿದು ಬಂದಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಕುವೈತ್ ವಿರುದ್ಧ 1-0 ಗೋಲು ಅಂತರದ ಜಯದೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಇದೇ ಮಂಗಳವಾರ ಅಂದರೆ ನವೆಂಬರ್‌ 21 ರಂದು ನಡೆದ ತನ್ನ 2ನೇ ಪಂದ್ಯದಲ್ಲಿ ಕತಾರ್ ವಿರುದ್ಧ ಸೋಲು ಕಂಡಿದೆ. ಇನ್ನು ನಿನ್ನೆಯ ಪಂದ್ಯದ ಕುರಿತು ಸಾಕಷ್ಟು ಜನಕ್ಕೆ ಮಾಹಿತಿ ಇಲ್ಲದ ಕಾರಣ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇನ್ನು, ಭಾರತ ಮುಂದಿನ ವರ್ಷ ಮಾರ್ಚ್ 21 ರಂದು ತಜಕಿಸ್ತಾನದ ದುಶಾನ್ಬೆಯ ತಟಸ್ಥ ಸ್ಥಳದಲ್ಲಿ ಅಫ್ಘಾನಿಸ್ತಾನದ ವಿರುದ್ಧ 2026ರ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಲಿದೆ ಹಾಗಾಗಿ ಭಾರತ ಫಿಫಾ ವಿಶ್ವಕಪ್‌ ಅರ್ಹಾತ ಪಂದ್ಯಗಳಿಂದಲೇ ಹೊರ ಬಂದಿದೆ ಎಂಬುದು ಕೂಡ ಸುಳ್ಳಿನಿಂದ ಕೂಡಿದ ಅಪಾದನೆಯಾಗಿದೆ.


ಇದನ್ನೂ ಓದಿ : ಇದನ್ನು ಓದಿ: Fact Check: ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ | Tippu Sultan | Sword |


ವಿಡಿಯೋ ನೋಡಿ: MP | ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು | BJP


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *