ವಿಶ್ವಕಪ್ ಮುಗಿದರೂ ಅದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಮಾತ್ರ ನಿಂತಿಲ್ಲ. ಕ್ರಿಕೆಟ್ ಅಭಿಮಾನಿಗಳು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರೆ ಇನ್ನೂ ಕೆಲವು ಬಲಪಂಥೀಯರು ಕ್ರಿಕೆಟ್‌ಗೂ ಧರ್ಮ, ರಾಜಕಾರಣ ಬೆರೆಸಿ ಸುಳ್ಳು ಆರೋಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಸತ್ಯಶೋಧನೆ ನಡೆಸಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು.
ಈಗ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದ್ದು “ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಪಾಕಿಸ್ತಾನ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ 1.5ಲಕ್ಷ ಜನ ಒಟ್ಟಾಗಿ ಹನುಮಾನ್ ಚಾಲಿಸ ಹಾಡಿದ್ದಾರೆ.” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನೂ ಕೆಲವರು ಇದು ಇಂಡಿಯಾ ಆಸ್ಟ್ರೇಲಿಯಾ ಪಂದ್ಯದ ವೇಳೆ ಹನುಮಾನ್ ಚಾಲಿಸ ಹಾಡಲಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ.ಫ್ಯಾಕ್ಟ್‌ಚೆಕ್: ಅಕ್ಟೋಬರ್ 16ರಂದು ಸದಾಶಿವ್ ಎಂಬ ಯೂಟೂಬ್ ಚಾನೆಲ್‌ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಎಡಿಟೆಡ್ ವಿಡಿಯೋ ಆಗಿದೆ. ಸದಾಶಿವ್ ಅವರ ಖಾತೆಯಲ್ಲಿ ಮೂಲ ವಿಡಿಯೋ ಸೇರಿದಂತೆ 1.5ಲಕ್ಷ ಜನ ಹನುಮಾನ್ ಚಾಲಿಸ ಹಾಡಿದ್ದಾರೆ, ಶ್ರೀರಾಮ್ ಜನ್ಕಿ, ಓ ದೇವ, ಓ ದೇವ ಸೇರಿದಂತೆ ಇತರೆ ಹಾಡಗಳನ್ನು ಹಾಡಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ. ಆದರೆ ಮೂಲ ವಿಡಿಯೋವಿನಲ್ಲಿ ದರ್ಶನ್ ರಾವಲ್ ಅವರ “ಚೋಗಡಾ” ಹಾಡು ಹಿನ್ನಲೆಯಲ್ಲಿ ಕೇಳಿಬರುತ್ತದೆ.
ಆದ್ದರಿಂದ ಇಂಡಿಯಾ-ಪಾಕಿಸ್ತಾನ ಪಂದ್ಯದ ವೇಳೆ ಹನುಮಾನ್ ಚಾಲಿಸ ಹಾಡಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check : ಉತ್ತರ ಪ್ರದೇಶದ ಅತ್ಯಾಧುನಿಕ ಸ್ಟೇಡಿಯಂ ಎಂದು ಕೆನಡಾದ ಸ್ಟೇಡಿಯಂನ ಫೋಟೋ ಮತ್ತು ವಿಡಿಯೋ ವೈರಲ್
ವಿಡಿಯೋ ನೋಡಿ: ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ರಾಮಮಂದಿರದ ವಿರುದ್ಧ ಪ್ರತಿಭಟಿಸಿಲ್ಲ | Rahul Gandhi | Rama Mandir | Black
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.