ಭಾರತದಲ್ಲಿ ವಿಶ್ವಕಪ್ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇನ್ನು ಭಾರತದಲ್ಲಿ ಈ ಪಂದ್ಯಾವಳಿಗಳು ಆರಂಭವಾದ ಬೆನ್ನಲ್ಲೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಕೂಡ ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಆಟಗಾರರ ಬಗ್ಗೆ, ಪಂದ್ಯಗಳ ಬಗ್ಗೆ, ತೀರ್ಪುಗಾರರ ಬಗ್ಗೆ ಹೀಗೆ ಸಾಕಷ್ಟು ಮಂದಿಯ ಬಗ್ಗೆ ಮತ್ತು ಹಲವು ವಿಚಾರಗಳ ಬಗ್ಗೆ ಸುಳ್ಳುಗಳು ವ್ಯಾಪಕವಾಗಿ ಹರಡುತ್ತಿವೆ.
ಇದೀಗ ಈ ಸುಳ್ಳುಗಳ ಸರಣಿ ಕ್ರಿಕೆಟ್ ಸ್ಟೇಡಿಯಂವೊಂದರ ಸುತ್ತ ಸುತ್ತಿಕೊಳ್ಳಲು ಪ್ರಾರಂಭವಾಗಿದೆ. ಭಾರತದ ಸ್ಟೇಡಿಯಂವೊಂದರ ಕುರಿತು ಸುಳ್ಳು ಸುದ್ದಿ ಹಬ್ಬಿಸೋದರ ಜೊತೆಗೆ ಕೆನಡಾದ ಸ್ಟೇಡಿಯಂಗೆ ಸಂಬಂಧ ಪಟ್ಟ ವಿಡಿಯೋವೊಂದು ಕೂಡ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವಿಡಿಯೋಗೆ ತಲೆಬರಹಬಾಗಿ
“ಉತ್ತರ ಪ್ರದೇಶದ ಇಕಾನಾ ಸ್ಟೇಡಿಯಂ ಜಗತ್ತಿನ ಮೊಟ್ಟ ಮೊದಲ ಅತ್ಯಾಧುನಿಕ ಸ್ಟೇಡಿಯಂ ಆಗಿದೆ. ಇದು ಯಾವುದೇ ಮಳೆ, ಗಾಳಿಗೂ ಜಗವುದಿಲ್ಲ. ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಲ ಪಂದ್ಯಗಳನ್ನು ಈ ಸ್ಟೇಡಿಯಂನಲ್ಲಿ ಆಯೋಜನೆ ಮಾಡಿರುವುದು ಖುಷಿಯ ವಿಚಾರವಾಗಿದೆ” ಎಂದು ನೀಡಿ ಇದು ಭಾರತದ ಸ್ಟೇಡಿಯಂ ಎಂದು ನಕಲಿ ವಿಡಿಯೋವನ್ನು ಶೇರ್ ಮಾಡಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇನ್ನು ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ ಇವು ಉತ್ತರ ಪ್ರದೇಶದ ಇಕಾನಾ ಸ್ಟೇಡಿಯಂ ಅಲ್ಲ ಎಂಬುದು ತಿಳಿದು ಬಂದಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಆದರೆ ಕೆನಡಾದ ಟೊರೊಂಟೊದಲ್ಲಿರುವ ರೋಜರ್ಸ್ ಸೆಂಟರ್ ಸ್ಟೇಡಿಯಂ ಆಗಿದ್ದು, ಇದನ್ನು1989 ರಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಕ್ರೀಡಾಂಗಣವು ಅನೇಕ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ ಎಂಬ ಕಾರಣಕ್ಕೆ ದಶಕಗಳ ಹಿಂದೆಯೇ ಪ್ರಖ್ಯಾತಿಯನ್ನ ಕೂಡ ಪಡೆದುಕೊಂಡಿತ್ತು. ಇದರ ಜೊತೆಗೆ ಈ ಸ್ಟೇಡಿಯಂನ್ನು ಅಧುನಿಕ ಯುಗಕ್ಕೆ ಹೊಂದಿಕೊಳ್ಳುವಂತೆ ಆಗಾಗ ಸಣ್ಣ ಪುಟ್ಟ ಕಾಮಗಾರಿಯನ್ನು ಹಾಗಾಗಿ ವಿಶ್ವದಲ್ಲೇ ಮೊಟ್ಟ ಮೊದಲ ಅತ್ಯಾಧುನಿಕ ಸ್ಟೇಡಿಯಂ ಇಕಾನಾ ಎಂಬುದು ಸುಳ್ಳು ಸುದ್ದಿಯಾಗಿದೆ.