ಮುಸ್ಲಿಂ ಸಮುದಾಯದ ಕುರಿತು ಪ್ರೊಪಗಂಡದ ಸುಳ್ಳು ವಿಡಿಯೋ ಹಂಚಿಕೊಂಡ ಪೋಸ್ಟ್‌ಕಾರ್ಡ್

ಜಗತ್ತಿನ ಯಾವುದೇ ರಾಷ್ಟ್ರದಲ್ಲೇ ಆಗಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ಧರ್ಮಗಳ ಮೇಲೆ, ಅಲ್ಲಿನ ಬಹುಸಂಖ್ಯಾತರು ನಿರಂತರವಾಗಿ ಶೋಷಿಸುತ್ತಾರೆ. ಮತ್ತು ಅವರ ಸಂಸ್ಕೃತಿಯನ್ನು ತುಚ್ಚಿಕರಿಸಿ, ಅವರ ಕಥೆಗಳನ್ನು, ಕೊಡುಗೆಗಳನ್ನು ಮರೆವಿಗೆ ಸರಿಸಿ, ಸಾಧ್ಯವಾದಷ್ಟು ಅವರ ಮೇಲೇ ಸಲ್ಲದ ಆರೋಪಗಳನ್ನು ಹೊರಿಸಿ ನಂತರ ಅವರ ಮೇಲೆ ನೇರ ದಾಳಿ ನಡೆಸುತ್ತವೆ. ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಾಭಲ್ಯದ ದೇಶಗಳಲ್ಲಿ ಯಹೂದಿ ಮತ್ತು ಮುಸ್ಲಿಮರನ್ನು ನಡೆಸಿಕೊಂಡಂತೆ, ಮುಸ್ಲಿಂ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಹಿಂದುಗಳನ್ನು ನಡೆಸಿಕೊಂಡಂತೆ, ಬಹುಸಂಖ್ಯಾತ ಹಿಂದು ಸಮಾಜದ ಭಾರತದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನೂ ಹೀಗೆಯೇ ನಡೆಸಿಕೊಳ್ಳಲಾಗುತ್ತಿದೆ. ಸಾಮರಸ್ಯದ ನೆಲವೀಡು ಎಂದೇ ಖ್ಯಾತಗೊಂಡಿದ್ದ ಭಾರತ, ಪಾಕಿಸ್ತಾನ ಮತ್ತು ಭಾರತದ ಇಬ್ಬಾಗದಂತಹ ಕರಾಳ ನೆನಪುಗಳನ್ನು ಮರೆಯುತ್ತಿದ್ದ ಬೆನ್ನಲ್ಲೇ ಧರ್ಮಾಧಾರಿತ ರಾಜಕಾರಣ ಭಾರತದಲ್ಲಿ ತಲೆ ಎತ್ತತೊಡಗಿತು, ಇದು ಕಳೆದ ಮೂರು ದಶಕಗಳಲ್ಲಿ ಅನೇಕ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಅದರಿಂದಾಗಿ ಹಿಂದು-ಮುಸ್ಲಿಂ ಎರಡೂ ಧರ್ಮಗಳ ನಡುವಿನ ತಿಕ್ಕಾಟಗಳು ಈಗ ತಾರಕ್ಕೇರಿ ಪರಸ್ಪರ ಅನುಮಾನ, ಅಪಪ್ರಚಾರಗಳಿಗೆ ದಾರಿ ಮಾಡಿಕೊಟ್ಟಿದೆ.

ಭಾರತದಲ್ಲಿ ಹಿಂದು-ಮುಸ್ಲಿಂ ಕಲಹ ಹೆಚ್ಚಾಗಲು ಸುಳ್ಳು ಸುದ್ದಿಗಳ ಪಾತ್ರ ಬಹು ದೊಡ್ಡದು. ಇಂದು ಧಾರ್ಮೀಕ ಕಲಹಗಳನ್ನು ರಾಜಕೀಯ ಪಕ್ಷಗಳು ಪೋಷಿಸುತ್ತಾ ಬರುತ್ತಿವೆ. ಆದರೆ ಜನರು ಸತ್ಯವನ್ನು ಪರಮಾರ್ಶಿಸದೆ ಸುಳ್ಳು, ಅಪಪ್ರಚಾರ,  ಪೂರ್ವಾಗ್ರಹ ಪೀಡಿತ ದ್ವೇಷ ಭಾಷಣಗಳನ್ನೇ ಹೆಚ್ಚಾಗಿ ನಂಬುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ “2022 ರಲ್ಲಿ ಶಾಲೆಗೆ ಹಿಜಾಬ್ ಧರಿಸಿಕೊಂಡು ಬರಲು ಅನುಮತಿ ನೀಡಿ, 2023ರಲ್ಲಿ ಶಾಲಾ ಕಾಲೇಜ್‌ಗಳಲ್ಲಿ ನಮಗೆ ನಮಾಜ್ ಮಾಡಲು ಅನುಮತಿ ಕೊಡಿ, 2025ಕ್ಕೆ ಹಲಾಲ್ ಅಹಾರಗಳನ್ನೇ ಕೊಡಬೇಕು, 2026ಕ್ಕೆ ಸರ್ಕಾರಿ ರಜೆಯನ್ನು ಭಾನುವಾರದ ಬದಲಾಗಿ ಶ್ರುಕ್ರವಾರ ಕೊಡಬೇಕು, 2027ಕ್ಕೆ ಮೇ ರಜೆಯನ್ನು ರಂಜಾನ್ ಸಮಯದಲ್ಲಿ ಕೊಡಿ, ಕೊನೆಗೆ 2029ಕ್ಕೆ ಪಠ್ಯ ಪುಸ್ತಕಗಳಲ್ಲಿ ಕೃಷ್ಣ, ಬುದ್ಧರ ಅಧ್ಯಾಯಗಳಿವೆ. ನಾವು ಅವರನ್ನು ದೇವರು ಎನ್ನಲಾಗುವುದಿಲ್ಲ ಅಂದಮೇಲೆ ನಾವು ಅವರ ಬಗ್ಗೆ ಯಾಕೆ ಕಲೀಬೇಕು? ಅವನ್ನ ಪಠ್ಯ ಪುಸ್ತಕದಿಂದ ತೆಗೀಲಿ, ಎಂದು ಮುಸ್ಲಿಮರು ಮುಂಬರುವ ವರ್ಷಗಳಲ್ಲಿ ಕೇಳಲಿದ್ದಾರೆ. ಈಗಾಗಬಾರದು ಎಂದರೆ ಬಿಜೆಪಿಗೆ ಮತ ನೀಡಿ.” ಎಂಬ ಬಲಪಂಥೀಯ ಮಾಧ್ಯಮವಾದ ಪೋಸ್ಟ್‌ಕಾರ್ಟ್‌ ಮಾಡಿರುವ ವಿಡಿಯೋವೊಂದು ಹಲವರು ಹಂಚಿಕೊಳ್ಳುತ್ತಿದ್ದಾರೆ.

ನಮಾಜ್

ಮುಸ್ಲಿಂ

ಫ್ಯಾಕ್ಟ್‌ಚೆಕ್: ಇದು ಮುಸ್ಲಿಂ ಸಮುದಾಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಹರಡುತ್ತಿರುವ ಪ್ರೊಪಗಂಡದ ಸುಳ್ಳು ವಿಡಿಯೋ ಆಗಿದೆ. 2022ರಲ್ಲಿ ಕೆಲವು ವಿದ್ಯಾರ್ಥಿನೀಯರು ಹಿಜಾಬ್ ಧರಿಸಲು ಅನುಮತಿ ಕೋರಿದ್ದನ್ನು ಬಿಟ್ಟರೆ ಎಲ್ಲಿಯೂ ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಲು ಅವಕಾಶ ಕೊಡಿ, ಹಲಾಲ್ ಆಹಾರವನ್ನೇ ಕೊಡಿ, ಮೇ ರಜೆಯನ್ನು ರಂಜಾನ್‌ಗೆ ನೀಡಿ ಎಂದು ಯಾವ ಶಾಲಾ-ಕಾಲೇಜುಗಳನ್ನು ಕೇಳಿರುವುದು ವರದಿಯಾಗಿಲ್ಲ. ಆದ್ದರಿಂದ ಪೋಸ್ಟ್‌ಕಾರ್ಡ್ ಎಂಬ ಬಲಪಂಥೀಯ ಮಾಧ್ಯಮ ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯದ ಮೇಲಿನ ದ್ವೇಷದಿಂದ ಹರಡಿದ ಸುಳ್ಳು ಇದಾಗಿದೆ.


ಇದನ್ನು ಓದಿ: ಟಿಪ್ಪು ಸುಲ್ತಾನನ ಪತ್ರದ ಕುರಿತು ಎಸ್.ಎಲ್ ಭೈರಪ್ಪನವರು ತಪ್ಪಾಗಿ ಅರ್ಥೈಸಿದ್ದಾರೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *