ಟಿಪ್ಪು ಸುಲ್ತಾನನ ಪತ್ರದ ಕುರಿತು ಎಸ್.ಎಲ್ ಭೈರಪ್ಪನವರು ತಪ್ಪಾಗಿ ಅರ್ಥೈಸಿದ್ದಾರೆ

ಟಿಪ್ಪು ಸುಲ್ತಾನ

“ಮೈಸೂರು ಹುಲಿ”, “ರಾಕೆಟ್‌ಗಳ ಜನಕ” ಎಂದೇ ಖ್ಯಾತಗೊಂಡ ಟಿಪ್ಪು ಸುಲ್ತಾನನ ಕುರಿತು ಕಳೆದೊಂದು ದಶಕದಿಂದ ಅನೇಕ ವಾದ ವಿವಾದಗಳು ಮುನ್ನಲೆಗೆ ಬರುತ್ತಿವೆ. ಹಲವರು ಅವನ ಆಡಳಿತದ ದೂರ ದೃಷ್ಟಿ, ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ ಹೋರಡಿದವನೆಂದು ನೆನೆದರೆ, ಇನ್ನೂ ಹಲವರು ಆತ ಮತಾಂಧ, ಕ್ರೂರಿ ಎನ್ನುವಂತಹ ಆರೋಪಗಳನ್ನು ಆತನ ಮೇಲೆ ಹೊರಿಸಿದ್ದಾರೆ. ಆದರೆ ಈ ಎರಡೂ ವಾದಗಳಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಿರುವುದು ಟಿಪ್ಪುವನ್ನು ಹೊಗಳುವ ಸಮೂಹ ಆತ ತನ್ನ ಸಾಮ್ರಾಜ್ಯದ ಹೊರತಾಗಿ ದಾಳಿ ಮಾಡಿದ ಪ್ರದೇಶಗಳಲ್ಲಿ ಆತ ಇತರ ರಾಜರಂತೇ ಕ್ರೌರ್ಯದಿಂದ ನಡೆದುಕೊಂಡಿದ್ದಾನೆಂಬುದನ್ನು  ಪರಮಾರ್ಶಿಸಬೇಕಿದೆ. ಇನ್ನೂ ಟಿಪ್ಪು ಸುಲ್ತಾನನನ್ನು ತೆಗಳುತ್ತಿರುವವರು ಸಂಪೂರ್ಣವಾಗಿ ಟಿಪ್ಪು ಸುಲ್ತಾನನೊಬ್ಬ ಕ್ರೂರಿ, ಮತಾಂಧ ಎಂಬ ತೀರ್ಮಾನಕ್ಕೆ ಬಂದು ಕರ್ನಾಟಕಕ್ಕೆ ಆತನ ಕೊಡುಗೆಯೇ ಇಲ್ಲ ಎನ್ನುವಂತಹ ಬಾಲಿಷವಾದ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಇದರಾಚೆಗೂ ಟಿಪ್ಪು ಸುಲ್ತಾನನ ಇತಿಹಾಸ ಹರಡಿಕೊಂಡಿದೆ. ಆದರೆ ಅನೇಕರು ಆತನ ಇತಿಹಾಸವನ್ನು ನಿರಂತರವಾಗಿ ತಿರುಚುವ ಕಾರ್ಯದಲ್ಲಿ ಮುಳುಗಿದ್ದಾರೆ.

ಇದಕ್ಕೆ ನಿದರ್ಶನದಂತೆ “ಅಫ್ಘನ್ ದೊರೆ ಜಮಾನ್ ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ” ಎಂದು ಕನ್ನಡದ ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪನವರು ಪ್ರತಿಪಾದಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಲು ಸ್ಥಳೀಯ ರಾಜರು ಸಹಕರಿಸದಿದ್ದ ಕಾರಣಕ್ಕೆ 1792 ರಲ್ಲಿ ಅಫ್ಘನ್ ದೊರೆ ಜಮಾನ್ ಶಾ ದುರ್ರಾನಿಗೆ ಪತ್ರ ಕಳುಹಿಸಿದ ಟಿಪ್ಪು ಸುಲ್ತಾನ್ ದೆಹಲಿಗೆ ನಂಬಿಕಸ್ತ ಅಧಿಕಾರಿಯನ್ನು ಕಳುಹಿಸಿ ಸಂಪನ್ಮೂಲ ರಹಿತ ಮತ್ತು ಅಂಗವಿಕಲನಾಗಿರುವ ಮೊಘಲ್ ದೊರೆ ಎರಡನೇ ಶಾ ಆಲಮ್‌ನನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಕೇಳಿಕೊಂಡಿದ್ದ. ಇನ್ನೂ 1787ರಲ್ಲೇ ಅಟೋಮನ್ ಟರ್ಕರ ದೊರೆ ಮೊದಲನೆ ಸುಲ್ತಾನ್ ಅಬ್ದುಲ್ ಹಮಿದ್ ಪತ್ರ ಕಳುಹಿಸಿ ಈಸ್ಟ್‌ ಇಂಡಿಯಾ ಕಂಪನಿಯ ವಿರುದ್ದ ಹೋರಾಡಲು ನುರಿತ ಸೇನೆ ಪಡೆಯೊಂದನ್ನು ಕಳುಹಿಸುವಂತೆ ಕೇಳಿಕೊಂಡಿದ್ದ. ಬ್ರೀಟೀಷರನ್ನು ಹೊರದೂಡುವುದು ಟಿಪ್ಪುವಿನ ಉದ್ದೇಶವಾಗಿತ್ತು.

Tippu Sultanಆದರೆ ಅಫ್ಘಾನಿಸ್ತಾನದ ಪಶ್ಚಿಮ ಗಡಿಯ ಮೇಲೆ ಪರ್ಷಿಯನ್ ದಾಳಿಯಿಂದ ಅದರ ಪಡೆಗಳನ್ನು ಬೇರೆಡೆಗೆ ತಿರುಗಿಸಿತು, ಆದ್ದರಿಂದ ಜಮಾನ್ ಶಾ ದುರ್ರಾನಿ ಟಿಪ್ಪುವಿಗೆ ಯಾವುದೇ ಸಹಾಯವನ್ನು ನೀಡಲು ಸಾಧ್ಯವಾಗಲಿಲ್ಲ. ಇನ್ನೂ ಅಟೋಮನ್ ಗಳು ಸ್ವತಃ ಬಿಕ್ಕಟ್ಟಿನಲ್ಲಿದ್ದರು ಮತ್ತು ವಿನಾಶಕಾರಿ ಆಸ್ಟ್ರೋ- ಅಟೋಮನ್ ಯುದ್ಧದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದರು ಮತ್ತು ರಷ್ಯಾದ ಸಾಮ್ರಾಜ್ಯದೊಂದಿಗೆ ಹೊಸ ಸಂಘರ್ಷ ಪ್ರಾರಂಭವಾಗಿತ್ತು, ಇದಕ್ಕಾಗಿ ಅಟೋಮನ್ ಟರ್ಕಿಗೆ ರಷ್ಯರನ್ನು ದೂರವಿರಿಸಲು ಬ್ರಿಟಿಷ್ ಮೈತ್ರಿಯ ಅಗತ್ಯವಿತ್ತು, ಆದ್ದರಿಂದ ಅದು ಭಾರತೀಯ ರಾಜಕೀಯ ರಂಗಭೂಮಿಯಲ್ಲಿ ಬ್ರಿಟಿಷರ ವಿರುದ್ಧ ಪ್ರತಿಕೂಲವಾಗುವ ಅಪಾಯವನ್ನು ಎದುರಿಸಲಿಲ್ಲ.

ಅಟೋಮನ್ ಟರ್ಕ್

ಇಷ್ಟೇ ಅಲ್ಲದೆ ಟಿಪ್ಪು ಹಲವು ದೇಶದ ರಾಜರಿಗೆ ತನ್ನ ರಾಯಭಾರಿಗಳನ್ನು ಕಳಿಸಿದ್ದ. ಫ್ರಾನ್ಸ್, ಅಟೋಮನ್ ಸಾಮ್ರಾಜ್ಯ, ಒಮಾನ್ ಸುಲ್ತಾನರು, ಜಂಡ್ ರಾಜವಂಶ, ಚೀನಾದ ಕ್ವಿಂಗ್ ರಾಜವಂಶ ಮತ್ತು ದುರಾನಿ ಸಾಮ್ರಾಜ್ಯಕ್ಕೆ ಅನೇಕ ರಾಜತಾಂತ್ರಿಕ ನಿಯೋಗಗಳನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.  ಮೂರನೇ ಆಂಗ್ಲೋ ಮೈಸೂರು ಯುದ್ಧದ ಸಂದರ್ಭದಲ್ಲಿ ಸ್ಥಳೀಯ ರಾಜರಾದ ಹೈದ್ರಾಬಾದ್ ನಿಜಾಮ ಮತ್ತು ಮರಾಠ ಸೇನೆ ಬ್ರಿಟೀಷರ ಪರವಾಗಿ ಇದ್ದುದ್ದರಿಂದ ಟಿಪ್ಪು ಬ್ರಿಟೀಷರ ವಿರುದ್ದ ಹೋರಾಡಲು ಹೊರದೇಶದ ಅನೇಕ ರಾಜರಿಗೆ ಸಹಾಯ ಕೋರಿ ಪತ್ರ ಬರೆದಿದ್ದ, ಆದರೆ ಆತನ ನಿರೀಕ್ಷೆಯಂತೆ ಯಾರಿಂದಲೂ ಸಹಾಯ ದೊರೆಯಲಿಲ್ಲ ಎಂದು ಇತಿಹಾಸ ಹೇಳುತ್ತದೆ.

ಚರಿತ್ರೆಯಲ್ಲಿ ಸಂದುಹೋದ ಘಟನೆಗಳಿಗೆ ಧಾರ್ಮಿಕ ಆಯಾಮ ನೀಡಿ ಅದರಿಂದ ಎರಡು ಕೋಮುಗಳ ನಡುವೆ ದ್ವೇಷ ಬೆಳೆಸುವ ಕೆಲಸವನ್ನು ಅನೇಕ ಬಲಪಂಥೀಯ ಸಾಹಿತಿಗಳು, ರಾಜಕಾರಣಿಗಳು ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆಯೇ ಹೋರತು ಜನಸಾಮಾನ್ಯರಿಗೆ ಇದರಿಂದ ಯಾವುದೇ ಲಾಭವಿಲ್ಲ. ಆದ್ದರಿಂದ ಇಂತಹ ಇತಿಹಾಸಕ್ಕೆ ಸಂಬಂಧಿಸಿದ ಘಟನೆಯ ಕುರಿತು ಯಾರಾದರು ಹೇಳಿಕೆ ನೀಡಿದರೆ ಅದರ ಸಾಕ್ಷ್ಯಾಧಾರಗಳನ್ನು ಒಮ್ಮೆ ಪರಿಶೀಲಿಸಿ. ಸಾಧ್ಯವಾದರೆ ಸ್ವತಃ ಓದಿ ತಿಳಿಯಿರಿ.


ಇದನ್ನು ಓದಿ: ಅಂಬೇಡ್ಕರ್‌ರವರ ಬಗ್ಗೆ ಅಪಪ್ರಚಾರ: ಅತ್ಯಾಚಾರಿ ಎಂದು ಸುಳ್ಳು ಹರಡುತ್ತಿರುವ ಮತೀಯವಾದಿಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *