Fact Check : ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ರಹಸ್ಯ ಸಭೆ ನಡೆದು ಹಿಂದೂಗಳ ಬಳಿ ವ್ಯಾಪಾರ ಬಹಿಷ್ಕರಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ

ಸಾಮಾಜಿಕ ಸಾಮರಸ್ಯವನ್ನು ಕದಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಸ್ಲಿಂ ಮತ್ತು ಹಿಂದೂ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಹಿಂದೂ ಮುಸ್ಲಿಂ ವ್ಯಾಪರ ವಿಚಾರಕ್ಕೆ ಸಂಬಂಧ ಪಟ್ಟಂತೆ ದ್ವೇಷ ಹರಡುವ ಕೆಲಸಗಳು ಕೂಡ ನಡೆಯುತ್ತಿವೆ.

ಇದಕ್ಕೆ ಪೂರಕ ಎಂಬಂತೆ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಗಂಭೀರವಾದ ಆರೋಪವನ್ನು ಹರಿಬಿಡಲು ಯತ್ನಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ನಕಲಿ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ “ಬೆಂಗಳೂರಿನಲ್ಲಿ ಮುಸಲ್ಮಾನರು ರಹಸ್ಯವಾಗಿ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 5 ವರ್ಷ ಹಿಂದೂಗಳ ಬಳಿ ಪೆಟ್ರೋಲ್, ಔಷಧ ಖರೀದಿಸದಂತೆ ಬಹಿಷ್ಕರಿಸಿದ್ದಾರೆ” ಎಂಬ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸುಳ್ಳು ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ವಿಡಿಯೋ ಬೆಂಗಳೂರಿಗೆ ಸಂಬಂಧಿಸಿದ್ದಲ್ಲ. ಈ ವಿಡಿಯೋ 2019 ರದ್ದಾಗಿದ್ದು ವೀಡಿಯೊವನ್ನು ಬಿಜ್ರಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಭೋಜಾರಿಯಾ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. 28.6.2019 ರಂದು, ರಾಮ್ಸಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಗಾರಿಯಾ ಗ್ರಾಮದಲ್ಲಿ ಅಪಘಾತದಿಂದಾಗಿ ಒಬ್ಬರು ಸಾವನ್ನಪ್ಪಿದರು ಮತ್ತು ಮೂವರು ಗಾಯಗೊಂಡಿದ್ದರು.

ಈ ಘಟನೆಯನ್ನು ವಿರೋಧಿಸಿ, ಮೃತರ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಪ್ರತಿಭಟಿಸಿದ್ದರು. ಈ ವೇಳೆ ಮೃತರ ಸಂಬಂಧಿಯೊಬ್ಬರು ಈ ರೀತಿ ಆಕ್ಷೇಪರ್ಹ ಭಾಷಣ ಮಾಡಿದ್ದು ಭಾಷಣ ಮಾಡಿದವರ ಮೇಲೆ ಬಾರ್ಮರ್ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಹೀಗೆ ಭಾಷಣ ಮಾಡಿದ ವ್ಯಕ್ತಿ ಕೂಡ ಅಪಘಾತಕ್ಕೆ ಕಾರಣವಾದ ಹಿಂದೂ ವ್ಯಕ್ತಿಯೊಂದಿಗೆ ವ್ಯಾಪರ ಮಾಡಬಾರದು ಎಂದು ಮಾತ್ರ ಕರೆ ಕೊಟ್ಟಿದ್ದಾನೆ  ಎನ್ನಲಾಗಿದ್ದು ಬಳಿಕ ಆತನಿ ಕಾನೂನಾತ್ಮಕವಾಗಿ ಶಿಕ್ಷೆಯೂ ಆಗಿದೆ ಎಂದು ತಿಳಿದು ಬಂದಿದೆ.

ಹೀಗೆ 4 ವರ್ಷ ಹಳೆಯ ವಿಡಿಯೋವನ್ನು ಬಳಸಿಕೊಂಡು ಇದು ಇತ್ತೀಚೆಗೆ ನಡೆದ ಘಟನೆ ಎಂಬ ರೀತಿಯಲ್ಲಿ ಬಿಂಬಿಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಒಡಕು ಮೂಡಿಸುವ ಮತ್ತು ದ್ವೇಷ ಭಾವನೆಯನ್ನು ಭಿತ್ತುವ ಕೆಲಸವನ್ನು ಆಗಾಗ ಮಾಡಲಾಗುತ್ತಿದ್ದು ಈ ರೀತಿಯ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲನೆ ನಡೆಸುವುದು ಬಹಳ ಮುಖ್ಯವಾಗಿದೆ.

Leave a Reply

Your email address will not be published. Required fields are marked *