“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ ಸೇರಿದಂತೆ ನಾನು ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲವನ್ನು ನೀಡುತ್ತೇನೆ ಎಂದು ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಅವರು ಹೇಳಿಕೆ ನೀಡಿದ್ದಾರೆ” ಎಂಬ ಮಾಯಾವತಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ಬಿಎಸ್‌ಪಿ ಮಾಯಾವತಿಯವರು ಬಿಜೆಪಿಯ ಪರವಾಗಿ ಈ ಚುನಾವಣೆಯಲ್ಲಿ ಪರೋಕ್ಷವಾಗಿ ವಾಲಿಕೊಂಡಿದ್ದಾರೆ ಎಂಬ ತಲೆ ಬರಹದೊಂದಿಗೆ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಸಿಕ್ಕ ಮಾಹಿತಿ ಬೇರೆಯದ್ದೇ ಆಗಿದೆ.
ಆದರೆ ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದೊಂದು ಎಡಿಟೆಡ್ ವಿಡಿಯೋವಾಗಿದ್ದು ಈ ವೈರಲ್ ವಿಡಿಯೋವಿನ ಮೂಲ ವಿಡಿಯೋ 2 ನವೆಂಬರ್ 2020 ರದ್ದಾಗಿದೆ ಎಂಬುದು ತಿಳಿದು ಬಂದಿದೆ. 2020ರಲ್ಲಿ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಮಾಯಾವತಿ ಅವರು ಸಮಾಜವಾದಿ ಪಾರ್ಟಟಿಯನ್ನು ಸೋಲಿಸಲು ನಾನು ಬಿಜೆಪಿಗೆ ಬೇಕಾದರು ಬೆಂಬಲ ಕೊಡಲು ತಯಾರಾಗಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದರು.
ಈ ಕುರಿತು ಆ ಸಂದರ್ಭದಲ್ಲಿ ಬಿಬಿಸಿ ಸುದ್ದಿ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿದ್ದವು. ಆದರೆ ಈಗ ಇದೇ ಸುದ್ದಿಯನ್ನು ತಿರುಚಲಾಗಿದೆ. ಇದರ ಜೊತೆಗೆ ಮಾಯಾವತಿ ಅವರ ಧ್ವನಿಯನ್ನು ಕೂಡ ನಕಲು ಮಾಡಿರುವ ಕಿಡಿಗೇಡಿಗಳು ಉತ್ತರ ಪ್ರದೇಶ ಎಂದಿರುವ ಜಾಗದಲ್ಲಿ ಮಾಯಾವತಿ ಅವರೇ ಮಧ್ಯಪ್ರದೇಶ ಎಂದು ಹೇಳಿರುವಂತೆ ಧ್ವನಿಯನ್ನು ನಕಲು ಮಾಡಿದ್ದಾರೆ . ಈ ಕುರಿತು ದ ಕ್ವಿಂಟ್ ಕೂಡ ವರದಿ ಮಾಡಿದೆ. ಹಾಗಾಗಿ ಇದೊಂದು ನಕಲಿ ವಿಡಿಯೋವಾಗಿದೆ.