ಪಂಚರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಹೀಗಾಗಲೇ ಮತ ಚಲಾವಣೆ ಪ್ರಕ್ರಿಯೆಗಳು ಮುಗಿದಿವೆ. ಎಲ್ಲರೂ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಮಧ್ಯ ಪ್ರದೇಶದ ಚುನಾವಣೆಯಲ್ಲಿ ಹಂಚಿಕೊಳ್ಳಲಾದ ಸುಳ್ಳು ಸುದ್ದಿಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ.
ಇತ್ತೀಚೆಗೆ ಬಾಲಿವುಡ್ ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಅಶುತೋಷ್ ರಾಣ ಅವರು ಚುನಾವಣಾ ಮಹತ್ವ ಸಾರುವಂತಹ ಸಂದೇಶದೊಂದಿಗೆ ಜನರಿಗೆ ಮತದಾನ ಮಾಡುವಂತೆ ಮನವಿ ಮಾಡಲು ನಿರ್ಮಿಸಿದ ವಿಡಿಯೋ ಇದಾಗಿದೆ. ಆದರೆ ಅವರು ನಿರ್ದಿಷ್ಟವಾಗಿ ಯಾವುದೇ ಒಂದು ಪಕ್ಷಕ್ಕೆ ಓಟು ನೀಡುವಂತೆ ಮನವಿ ಮಾಡಿಲ್ಲ. ಅವರ ಮೂಲ ವಿಡಿಯೋವಿನಲ್ಲಿ ಕಮಲದ ಬಿಜೆಪಿ ಚಿಹ್ನೆ ಸಹ ಇಲ್ಲ. ಮಧ್ಯ ಪ್ರದೇಶದಲ್ಲಿ ಅಶುತೋಷ್ ರವರು ಬಿಜೆಪಿ ಪರವಾಗಿ ಪ್ರಚಾರ ಮಾಡಿರುವ ಕುರಿತು ಯಾವುದೇ ಮಾದ್ಯಮಗಳಲ್ಲಿ ಸುದ್ದಿಯಾಗಿಲ್ಲ.
ಅಶುತೋಷ್ ರಾಣರವರು ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ವಿಡಿಯೋ ಮಾಡಿದ್ದು ಯಾವುದೇ ಪಕ್ಷದ ಪರವಾಗಿ ಮತದಾನ ಮಾಡಿ ಎಂದಿಲ್ಲ ಆದರೆ ಕೆಲವು ಬಿಜೆಪಿ ನಾಯಕರು ಅಶುತೋಷ್ ಅವರು ಬಿಜೆಪಿಗೆ ತಪ್ಪದೆ ಮತನೀಡಿ ಎಂದು ಹೇಳಿದ್ದಾರೆ ಎಂದು ಈ ವಿಡಿಯೋವನ್ನು ಅವರ ಅನುಮತಿ ಇಲ್ಲದೆ ಬಲಸಿಕೊಂಡಿದ್ದಾರೆ. ಆದ್ದರಿಂದ ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check: ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ | Tippu Sultan | Sword |
ವಿಡಿಯೋ ನೋಡಿ: MP | ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು | BJP
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ