ಪಂಚರಾಜ್ಯಗಳ ಚುನಾವಣೆಗಳು ಮುಗಿದರೂ ಸಹ ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಇನ್ನೂ ಹರಿದಾಡುತ್ತಲೆ ಇವೆ. ರಾಜಸ್ತಾನದ ಚುನಾವಣೆಯ ಸಂದರ್ಭದಲ್ಲಿಯೂ ಸಹ ಹಲವಾರು ಸುಳ್ಳು ಸುದ್ದಿಗಳು ಹರಿದಾಡಿದ್ದು, ರಾಜಕೀಯ ಪಕ್ಷಗಳಿಗೆ ಇಂತಹ ಸುಳ್ಳು ಸುದ್ದಿಗಳು ಜನರ ಮತವನ್ನು ಗಳಿಸುವ ರಾಜಕೀಯ ಅಸ್ತ್ರವಾಗಿ ಬದಲಾಗಿವೆ.
ಈಗ, ರಾಜಸ್ತಾನದ ಮಾಜಿ ಮಖ್ಯಮಂತ್ರಿ ವಸುಂಧರ ರಾಜೇಯವರು ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಯೇ? ವಸುಂಧರಾ ರಾಜೆ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಅವರಿಗೆ ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: 7 ಆಗಸ್ಟ್ 2021ರ ಟೋಕಿಯೋ ಒಲಂಪಿಕ್‌ನಲ್ಲಿ ಭಾರತದ ನೀರಜ್ ಚೋಪ್ರಾರವರು ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದ ಸಂದರ್ಭದಲ್ಲಿ ಸಂಸದೆ ಹಾಗೂ ರಾಜಸ್ಥಾನದ ಮಾಜಿ ಸಿಎಂ ವಸುಂಧರ ರಾಜೇಯವರು ನೀರಜ್ ರವರಿಗೆ ಕರೆ ಮಾಡಿ ಅಭಿನಂದಿಸಿದ ವಿಡಿಯೋ ಇದಾಗಿದೆ. ಈ ಕುರಿತು ವಸುಂಧರರವರು ತಮ್ಮ ಅಧಿಕೃತ ಇನ್ಟಾಗ್ರಾಮ್ ಖಾತೆಯಲ್ಲಿ “ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ ಮತ್ತು ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ನಿನ್ನೆ ಸಂಜೆ ಅವರೊಂದಿಗೆ ಮಾತನಾಡಿದ್ದೇನೆ ಮತ್ತು #Tokyo2020 ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ ಮತ್ತು ಎಲ್ಲರಿಂದಲೂ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇನೆ. ನೀರಜ್ ಅವರ ಉಜ್ವಲ ಭವಿಷ್ಯವನ್ನು ನಾನು ಬಯಸುತ್ತೇನೆ” ಎಂದು ಬರೆದು ಅಭಿನಂದಿಸಿದ್ದಾರೆ. ಆದ್ದರಿಂದ ಇದು ಹಳೆಯ ವಿಡಿಯೋ ಆಗಿದ್ದು, ರಾಜಸ್ತಾನದ ವಿಧಾನ ಸಭಾ ಚುನಾವಣೆಗೂ ಈ ವಿಡಿಯೋವಿಗೂ ಯಾವುದೇ ಸಂಬಂಧವಿಲ್ಲ.
ಇದನ್ನು ಓದಿ: 18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು
ವಿಡಿಯೋ ನೊಡಿ: ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ