“ಇಸ್ರೇಲ್ ಜೊತೆ ಭಾರತೀಯ ನಿಲುವು ? ನಮ್ಮನ್ನು ಬೆಂಬಲಿಸಲು ನಿಮಗೆ ಕೇಳಿದವರು ಯಾರು? ನಿಮ್ಮ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಶೇಕಡ ಒಂದರಷ್ಟು ಪ್ರಯತ್ನ ನಡೆದಿಲ್ಲ. ಒಂದು ದಿನದಲ್ಲಿ ಕನಸು ಕಾಣುವುದನ್ನು ನಿಲ್ಲಿಸಿ. ” ಎಂದು ಇಸ್ರೇಲ್ ಟ್ವೀಟ್ ಮಾಡಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟ್‌ನ ಮೂಲಕ ಭಾರತದ ವಿರುದ್ಧ ಇಸ್ರೇಲ್ ಈ ಹಿಂದೆಯಿಂದ ಅಮಾಧನ ಹೊಂದಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದೇ ಪೋಸ್ಟ್ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಬೇರೆಯದ್ದೇ ವಿಚಾರ ಬೆಳಕಿಗೆ ಬಂದಿದೆ.
ಫ್ಯಾಕ್ಟ್‌ಚೆಕ್
ಈ ಪೋಸ್ಟ್‌ನಲ್ಲಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ಎಂಬ ಅಕೌಂಟ್‌ನಿಂದ 15 ಮೇ 2021ರಂದು ಪೋಸ್ಟ್ ಮಾಡಲಾಗಿದೆ ಎಂಬ ಉಲ್ಲೇಖವಿದೆ. ಆದರೆ ಅದೇ ತಾರೀಖಿನ ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ ಟ್ವೀಟ್‌ಗಳನ್ನು ಪರಿಶೀಲಿಸಿದಾಗ ಈ ರೀತಿಯ ಯಾವುದೇ ಟ್ವೀಟ್‌ಗಳು ಕಂಡು ಬಂದಿಲ್ಲ. ಆ ದಿನದ ಪೋಸ್ಟ್‌ಗಳಲ್ಲಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ಹಮಾಸ್ ವಿರುದ್ಧ ಹಲವು ಪೋಸ್ಟ್‌ಗಳನ್ನು ಹಾಕಿದೆಯೇ ಹೊರತು ಎಲ್ಲಿಯೂ ಭಾರತದ ವಿರುದ್ಧದ ಪೋಸ್ಟ್‌ಗಳು ಕಂಡು ಬಂದಿಲ್ಲ.
ಈ ಕುರಿತು ಪರಿಶೀಲನೆ ನಡೆಸಿದಾಗ ಇದೊಂದು ಫೋಟೋಶಾಪ್, ಮತ್ತು ಗ್ರಾಫಿಕ್ ಬಳಸಿ ಈ ರೀತಿ ನಕಲಿ ಟ್ವೀಟ್ ಸೃಷ್ಟಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಕುರಿತು ಚೆಕ್ ಯುವರ್ ಫ್ಯಾಕ್ಟ್ ತಂಡ ಕೂಡ ಫ್ಯಾಕ್ಟ್‌ಚೆಕ್ ನಡೆಸಿ ಈ ಪೋಸ್ಟ್‌ನ ಕುರಿತು ಪರಿಶೀಲನೆ ನಡೆಸಿತ್ತು. ಬಳಿಕ ಐಡಿಎಫ್‌ನ ಮುಖ್ಯಸ್ಥರ ಬಳಿ ಪ್ರತಿಕ್ರಿಯೆ ಪಡೆದಿರುವ ಈ ತಂಡಕ್ಕೆ ಇದೊಂದು ನಕಲಿ ಟ್ವಿಟ್ ಎಂದು ಐಡಿಎಫ್ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : Fact Check | ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪದ ವಿಡಿಯೋ ಎಂದು ಜಪಾನ್, ತೈವಾನ್ ಭೂಕಂಪದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ