“ಈ ವಿಡಿಯೋ ನೋಡಿ ಇದು ಮೊನ್ನೆ ಮೊನ್ನೆ ಫಿಲಿಫೈನ್ಸ್‌ನಲ್ಲಿ ನಡೆದಿರುವ ಭೀಕರ ಭೂಕಂಪನದ ವಿಡಿಯಯೋಗಳು. ಸುಮಾರು 7.8 ತೀವ್ರತೆಯ ಭೂಕಂಪದಲ್ಲಿ ಸಾಕಷ್ಟ ಮಂದಿ ಸಾವನ್ನಪ್ಪಿದ್ದಾರೆ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಭಯಾನಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮೊನ್ನೆ ಮೊನ್ನೆ ನಡೆದ ಫಿಲಿಫೈನ್‌ನ ಭೂಕಂಪಕ್ಕೂ ಈ ವಿಡಿಯೋಗಳಿಗೂ ಹೊಂದಾಣಿಕೆ ಕಂಡು ಬಂದಿಲ್ಲ. ಹಾಗಾಗಿ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಈ ವಿಡಿಯೋದ ಮೂಲ ಯಾವುದು ಎಂಬುದು ಬಯಲಾಗಿದೆ.
ಫ್ಯಾಕ್ಟ್‌ಚೆಕ್
ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದು ಸುಳ್ಳು ಮಾಹಿತಿಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಇಂತಹ ತಲೆ ಬರಹಗಳೊಂದಿಗೆ ಹಲವು ವಿಡಿಯೋಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ಕೆಲವೊಂದು 1 ಸೆಪ್ಟಂಬರ್ 2022ರಲ್ಲಿ ತೈವಾನ್‌ನಲ್ಲಿ ನಡೆದ ಭೂಕಂಪಕ್ಕೆ ಸಂಬಂಧಿಸಿದ ವಿಡಿಯೋವಾಗಿದೆ. ತೈವಾನ್‌ನಲ್ಲಿ 2022 ಹಲವು ಕಡೆಗಳಲ್ಲಿ ಭೂಕಂಪ ಸಂಭವಿಸಿತ್ತು ಮತ್ತು ಆ ಭಾರಿ ಭೂಕಂಪದ ತೀವ್ರತೆ 6.4 ರಷ್ಟಿತ್ತು ಎಂಬ ವರದಿಗಳು ಕಂಡು ಬಂದಿದ್ದವು.
ಇದೇ ವಿಡಿಯೋಗಳನ್ನು ಸಾಕಷ್ಟು ಮಂದಿ ಫಿಲಿಫೈನ್ ಭೂಕಂಪಕ್ಕೆ ಸಂಬಂಧಿಸಿದ ವಿಡಿಯೋ ಎಂದು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವೊಂದು ವಿಡಿಯೋಗಳು 2021ರ ಫೆಬ್ರವರಿ 15 ಮತ್ತು 2023ರ ಭೂಕಂಪಕ್ಕೆ ಸಂಬಂಧಿಸಿದ ವಿಡಿಯೋಗಳಾಗಿವೆ. ಇವು ಜಪಾನ್‌ನಲ್ಲಿ ನಡೆದ ಭೂಕಂಪದ ವಿಡಿಯೋಗಳಾಗಿವೆ.
ಹಾಗಾಗಿ ಡಿಸೆಂಬರ್ 2 ರಂದು ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪಕ್ಕೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಕೆಲ ವಿಡಿಯೋಗಳು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ
ವಿಡಿಯೋ ನೋಡಿ : Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ