Fact Check | ಪೊಲೀಸರು ಮಹುವಾರನ್ನು ಲೋಕಸಭೆಯಿಂದ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು ..!

“ಈ ವಿಡಿಯೋ ನೋಡಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಮೇಲೆ ಉಚ್ಚಾಟನೆಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಹೇಗೆ ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾರೆ ಎಂದು. ಲೋಕಸಭೆಯಿಂದ ಹೊರಹೋಗಲು ನಿರಾಕರಿಸಿದ ಅವರ ಮೇಲೆ ಪೊಲೀಸರು ಈ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸುಳ್ಳಿನೊಂದಿಗೆ ಹಂಚಿಕೆಯಾಗುತ್ತಿರುವ ವಿಡಿಯೋ

ಈ ವಿಡಿಯೋವನ್ನು ಸಾಕಷ್ಟು ಜನ ಹಂಚಿಕೊಳ್ಳುತ್ತಿದ್ದು, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು  ಸಂಸತ್‌ನಿಂದ ನೀಡಲಾದ ತೀರ್ಪಿಗೆ  ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಈ ನಡೆಯಿಂದ ದೇಶದ ಸಂಸತ್‌ಭವನಕ್ಕೆ ಅವಮಾನವಾಗಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಸತ್ಯ ಪರಿಶೀಲನೆ ನಡೆಸಿದಾಗ, ಇದೊಂದು ಸುಳ್ಳಿನಿಂದ ಕೂಡಿದ ಆರೋಪ ಎಂಬುದು ಬಟಾ ಬಯಲಾಗಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಅಕ್ಟೋಬರ್‌ 4 ರಂದು ದೆಹಲಿಯ ಕೃಷಿ ಭವನದ ಎದುರು ಮಹುವಾ ಅವರೂ ಸೇರಿ ಟಿಎಂಸಿಯ ಹಲವು ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆಗ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಎಳೆದೊಯ್ದಿದ್ದರು. ಈ ಕುರಿತು ಹಲವು ವರದಿಗಳು ಕೂಡ ಪ್ರಕಟವಾಗಿದೆ.

ಆದರೆ ಲೋಕಸಭೆಯಿಂದ ಮಹುವಾ ಅವರನ್ನು ಉಚ್ಚಾಟನೆ ಮಾಡಿದ್ದು ಇದೇ ಡಿಸೆಂಬರ್ 8ರಂದು. ಆಗ ಮಹುವಾ ಅವರೇ ಲೋಕಸಭೆಯಿಂದ ಹೊರನಡೆದು ಬಂದಿದ್ದರು. ಇದಕ್ಕೆ ಸಂಬಂಧ ಪಟ್ಟಂತೆ ಹಲವು ಸಾಕ್ಷಿಗಳು ಕೂಡ ಲಭ್ಯವಿದೆ. ಹಾಗಾಗಿ ಉಚ್ಚಾಟನೆಗೊಂಡ ಬಳಿಕ ಮಹುವಾ ಅವರನ್ನು ಲೋಕಸಭೆಯಿಂದ ಪೊಲೀಸರು ಎಳೆದೊಯ್ದರು ಎಂಬುದು ಸುಳ್ಳು

Leave a Reply

Your email address will not be published. Required fields are marked *