“ಗೋಮಾತೆಯನ್ನು ಹತ್ಯೆ ಮಾಡುವವರನ್ನು ಮುಲಾಜ್ ಇಲ್ಲದೆ ಜೈಲಿಗೆ ಹಾಕಿಸುತ್ತೇನೆ – ತೆಲಂಗಾಣದ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್ ರೆಡ್ಡಿ ಈ ಮಾತನ್ನು ಹೇಳುವ ತಾಕತ್ತು ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಇಲ್ಲವೇ..?” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅದರಲ್ಲೂ ಇತ್ತೀಚೆಗೆ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಈ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ಸಿಗರು ಮುಸಲ್ಮಾನರ ಓಲೈಕೆಯಲ್ಲಿ ನಿರತರಾಗಿದ್ದಾರೆ ಎಂಬ ರೀತಿಯಲ್ಲೇ ಬಿಂಬಿಸಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಚುನಾವಣೆಯ ಪ್ರಚಾರದ ಸಂದರ್ಭದಲ್ಲಾಗಲಿ ಅಥವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವಾಗಲಿ ಈ ರೀತಿಯ ಹೇಳಿಕೆ ನೀಡಿಲ್ಲ. ಈ ಕುರಿತು ಯಾವುದೇ ರೀತಿಯಾದ ವರದಿಗಳು ಕೂಡ ಕಂಡು ಬಂದಿಲ್ಲ. ಆದರೆ ಮತ ಚಲಾಯಿಸಲು ತೆರಳುವ ಮುನ್ನ ಗೋಪೂಜೆ ಮಾಡಿ ತೆರಳಿದ್ದಾರೆ ಎಂಬ ವರದಿಗಳು ಕಂಡು ಬಂದಿವೆ.
ಆದರೆ ವೈರಲ್ ಆಗುತ್ತಿರುವ ವಿಡಿಯೋವೊಂದು ಪತ್ತೆಯಾಗಿದ್ದು ಅದು 2016ರಲ್ಲಿ ರೇವಂತ್ ರೆಡ್ಡಿ ಅವರು ಟಿಡಿಪಿ ಪಕ್ಷದಲ್ಲಿ ಇದ್ದಾಗ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇದಾದ ನಂತರ ಅವರು ಎಲ್ಲಿಯೂ ಈ ಹೇಳಿಕೆಯನ್ನು ನೀಡಿದ ಕುರಿತು ಯಾವುದೇ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ.
ಇದನ್ನೂ ಓದಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ
ವಿಡಿಯೋ ನೋಡಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ