Fact Check | COVID-19 ನ Omicron XBB ರೂಪಾಂತರವು ಹೆಚ್ಚು ಮರಣ ಪ್ರಮಾಣ ಹೊಂದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “COVID-19 ನ Omicron XBB ರೂಪಾಂತರವು ಐದು ಪಟ್ಟು ಹೆಚ್ಚು ವೈರಸ್ ತೀವ್ರತೆ ಮತ್ತು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ಮರಣ ಪ್ರಮಾಣದ ಆಪತ್ತನ್ನು ಹೊಂದಿದೆ ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಇದು ನಿಜವಿರಬಹುದು ಎಂದು ತಮ್ಮ ತಮ್ಮ ಖಾತೆಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಕರೋನಾ ವೈರಸ್‌ನ JN1 ರೂಪಾಂತರಿಯಿಂದಾಗಿ ಕೋವಿಡ್ 19 ಸೋಂಕು ಹರಡುವಿಕೆ ತೀವ್ರ ಗೊಳ್ಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಒಂದಷ್ಟು ಸಣ್ಣ ಪ್ರಮಾಣದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವೇಳೆಯಲ್ಲಿ ಕೋವಿಡ್ 19 ನ ಒಮಿಕ್ರಾನ್ ಎಕ್ಸ್‌ಬಿಬಿ 5 ಪಟ್ಟು ಹೆಚ್ಚು ವೈರಸ್ ತೀವ್ರತೆ ಮತ್ತು ಡೆಲ್ಟಾ ರೂಪಾಂತರ ಕಿಂತ ಹೆಚ್ಚಿನ ಮರಣ ಪ್ರಮಾಣವನ್ನ ಹೊಂದಿದೆ ಎಂಬ ಸುದ್ದಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ WHO ಮತ್ತು ಇತರ ಅಧ್ಯಯನಗಳ ಪ್ರಕಾರ, ಪ್ರಸ್ತುತ ಸಂಶೋಧನೆಯು COVID-19 ನ Omicron XBB ರೂಪಾಂತರವು ಹೆಚ್ಚು ಹರಡುತ್ತದೆ ಎಂದು ಸೂಚಿಸುತ್ತದೆ, ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿದೆ ಮತ್ತು ಮರಣ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂದು ದೃಢೀಕರಿಸಲು ಯಾವುದೇ ಪುರಾವೆಗಳಿಲ್ಲ.

ಆದರೂ ಕೂಡ ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿಕೊಂಡು ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನ ಗಮನಿಸಿದ ಕೇಂದ್ರೀಯ ಆರೋಗ್ಯ ಇಲಾಖೆಯು ಇದೊಂದು ಸುಳ್ಳು ಸುದ್ದಿ ಈ ಸುದ್ದಿಯನ್ನು ಯಾರೂ ನಂಬಬೇಡಿ ಎಂದು ತಿಳಿಸಿದೆ. ಜೊತೆಗೆ ಈ ಕುರಿತು ಟ್ವೀಟ್ ಕೂಡ ಮಾಡಿ ಇದು ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಫ್ಯಾಕ್ಟ್‌ಲೀ ಆನ್ಲೈನ್ ಸುದ್ದಿ ಮಾಧ್ಯಮ ಕೂಡ ಈ ಸುಳ್ಳು ಸುದ್ದಿಯನ್ನು ಬಯಲಿಗೆಳೆದಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಿದೆ


ಇದನ್ನೂ ಓದಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ


ವಿಡಿಯೋ ನೋಡಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *