Fact Check | ಎಲ್ಲರ ಖಾತೆಗೆ 15 ಲಕ್ಷ ರೂ. ಜಮೆಯ ಭರವಸೆಯ ಸುದ್ದಿ ವಿಡಂಬನೆ ಹೊರತು ನಿಜವಲ್ಲ

“2013-14ರ ಹಳೆಯ ನ್ಯೂಸ್‌ ಪೇಪರ್‌ವೊಂದರಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ₹ 15 ಲಕ್ಷ ರೂ. ಜಮಾ ಮಾಡುವುದಾಗಿ ನರೇಂದ್ರ ಮೋದಿ ಅವರ ಚುನಾವಣಾ ಭರವಸೆಯನ್ನು ನೀಡಿದ್ದಾರೆ ಎಂಬ ವರದಿ ಮಾಡಲಾಗಿದೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ನಲ್ಲಿ ಮೋದಿ ಅವರು 2014ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರ ಕುರಿತು ಇರುವ ಏಕೈಕ ವರದಿ ಇದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಸಾಕಷ್ಟು ಮಂದಿ ಇದನ್ನೆ ನಿಜವಾದ ವರದಿ ಎಂದು ಶೇರ್‌ ಮಾಡುತ್ತಿರುವುದರ ಜೊತೆಗೆ ಆಡಳಿತರೂಢ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವ್ಯಾಪಕವಾದ ಟೀಕೆಯನ್ನು ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ವೈರಲ್‌ ಪೇಪರ್‌ ಕಟ್‌ ನವಭಾರತ್ ಟೈಮ್ಸ್ 20 ಮಾರ್ಚ್ 2019 ರಂದು ಹೋಳಿ ಸಂದರ್ಭದಲ್ಲಿ ಪ್ರಕಟಿಸಿದ ವಿಡಂಬನಾತ್ಮಕ ಲೇಖನವಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಪತ್ರಿಕೆಯ ಕೆಲವು ಭಾಗಗಳನ್ನ ಸೂಕ್ಷವಾಗಿ ಗಮನಿಸಿದರೆ ಇದು 2019ರದ್ದೇ ಪತ್ರಿಕೆ ಎಂಬುದು ಸುಲಭವಾಗಿ ತಿಳಿಯುತ್ತದೆ.

ಇನ್ನು 2014ರ ಚುನಾವಣೆಗೂ ಮುಂಚೆ ಮೋದಿ ವಿದೇಶದಲ್ಲಿನ ಕಪ್ಪು ಹಣ ತಂದರೆ ಪ್ರತಿಯೊಬ್ಬರು 15-20 ಲಕ್ಷ ಪಡೆಯಬಹುದು ಎಂದು ಹೇಳಿಕೆ ನೀಡಿದ್ದರು. ಆನಂತರ ಅಮಿತ್ ಶಾ ಅದು ಚುನಾವಣೆಯ ಸುಳ್ಳು, ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದರು.

ಒಟ್ಟಾರೆಯಾಗಿ ಯಾವ ಪತ್ರಿಕೆಯೂ ಅದರ ಬಗ್ಗೆ ವರದಿ ಮಾಡಿಲ್ಲ. ವೈರಲ್ ಪತ್ರಿಕಾ ಹೇಳಿಕೆ ವಿಡಂಬನೆಯಾಗಿದೆ. ಹಾಗಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಸುಳ್ಳು ಹೇಳಿಕೆಯಿಂದ ಕೂಡಿದೆ.


ಇದನ್ನೂ ಓದಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ


ವಿಡಿಯೋ ನೋಡಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ



ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *