“ನೆಲಕ್ಕೆ ಬಿದ್ದ ಯಾವುದೇ ಆಹಾರವನ್ನು 5 ಸೆಕೆಂಡುಗಳ ಒಳಗೆ ತೆಗೆದು ಸೇವಿಸಬಹುದು. ಯಾವುದೇ ಬ್ಯಾಕ್ಟಿರಿಯಾಗಳು ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಹರಡಲು 5 ಸೆಕೆಂಡುಗಳ ಕಾಲಾವಕಾಶ ಬೇಕು. ಹಾಗಾಗಿ ಈ ಅವಧಿಯ ಒಳಗೆ ಕೆಳಗೆ ಬಿದ್ದ ಆಹಾರ ಸೇವಿಸುವುದರಿಂದ ಕಾಯಿಲೆ ಬರುವುದಿಲ್ಲ.” ಎಂಬ ಸುದ್ದಿಯೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನು ಪರಿಶೀಲನೆ ನಡೆಸಿದಾಗ ಇದೇ ರೀತಿಯ ಸುದ್ದಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಜೊತೆಗೆ ಹಲವು ಮಂದಿ ಇದನ್ನು 5 ಸೆಕೆಂಡ್ ರೂಲ್ ಎಂಬ ಹೆಸರಿನಿಂದ ಕರೆಯುತ್ತಿದ್ದಾರೆ ಹಲವು ಮಂದಿ ತೇವಾಂಶದಿಂದ ಕೂಡಿದ ಆಹಾರವನ್ನು ಕೂಡ 5 ಸೆಕೆಂಡ್‌ಗಳ ಒಳಗೆ ಕೆಳಗೆ ಬಿದ್ದ ಆಹಾರವನ್ನೂ ಸೇವಿಸಬಹುದು ಎಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಸುದ್ದಿ ಕನ್ನಡ ಫ್ಯಾಕ್ಟ್‌ಚೆಕ್ ತಂಡದ ಗಮನಕ್ಕೆ ಬರುತ್ತಿದ್ದಂತೆ ಮೊದಲು ನಾವು ಗೂಗಲ್‌ನಲ್ಲಿ ಇದು ನಿಜವೇ ಎಂದು ಪರಿಶೀಲಿಸಿದ್ದೆವು ಆಗ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಇದೇ ಸುದ್ದಿಯನ್ನು ಹಾಕಿರುವುದನ್ನು ಮೊದಲು ತೋರಿಸುತ್ತಿದ್ದವು, ತದ ನಂತರ ಹಲವು ಮಾಧ್ಯಮಗಳು ಮತ್ತು ವಿಕಿಪಿಡಿಯಾ ಕೂಡ ಇದೊಂದು ಸುಳ್ಳು ಸುದ್ದಿ ಎಂದು ಮಾಹಿತಿ ನೀಡಿತ್ತು.
ಇದರ ಹೊರತಾಗಿ 5 ಸೆಕೆಂಡ್ ರೂಲ್ಸ್ ಕುರಿತು ಪರಿಶೀಲನೆ ನಡೆಸಿದಾಗ ಇದರಲ್ಲಿ ಹೆಲ್ತ್‌ಲೈನ್ ಸಂಸ್ಥೆ ನೆಲವು ನೋಡಲು ಎಷ್ಟೇ ಶುಚಿತ್ವದಿಂದ ಕೂಡಿದ್ದರು, ಅದರಲ್ಲಿ ಬ್ಯಾಕ್ಟಿರಿಯಾಗಳು ಇದ್ದೇ ಇರುತ್ತವೆ. ನೆಲಕ್ಕೆ ಬಿದ್ದ ಆಹಾರದ ಮೇಲೆ ತಕ್ಷಣವೇ ಬ್ಯಾಕ್ಟಿರಿಯಗಳು ಸೇರಿಕೊಳ್ಳುತ್ತವೆ. ಅವುಗಳು ಆಹಾರದೊಟ್ಟಿಗೆ ಸೇರಲು ಇಷ್ಟೇ ಸಮಯ ಬೇಕು ಎಂಬುದಿಲ್ಲ.
ಒಂದು ವೇಳೆ ನೆಲದ ಮೇಲೆ ಬಿದ್ದ ಆಹಾರವನ್ನು 5 ಸೆಕೆಂಡ್‌ಗಳ ಒಳಗೆ ತೆಗೆದು ತಿಂದರೂ ಒಂದಲ್ಲ ಒಂದು ರೀತಿಯ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಎಂಬ ಮಾಹಿತಿಯನ್ನ ನೀಡಿದೆ. ಇನ್ನು ರಾಟ್‌ಗರ್ಸ್ ಸಂಶೋಧನಾ ವರದಿಯ ಪ್ರಕಾರ ನೆಲದ ಮೇಲೆ ಒಣ ಆಹಾರವೇ ಆಗಿರಬಹುದು ಅಥವಾ ತೇವಾಂಶದಿಂದ ಕೂಡಿದ ಆಹಾರವೇ ಇರಬಹುದು ಇವು ಯಾವುದೇ ಆಹಾರ ನೆಲಕ್ಕೆ ಬಿದ್ದ ತಕ್ಷಣ ಅದಕ್ಕೆ ಖಂಡಿತವಾಗಿ ಬ್ಯಾಕ್ಟಿರಿಯಾಗಳು ಪ್ರವೇಶಿಸುತ್ತವೆ ಎಂಬುದನ್ನು ಸ್ಪಷ್ಟ ಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ನೆಲದ ಮೇಲೆ ಬಿದ್ದ ಆಹಾರ ಎಷ್ಟೇ ಸೆಕೆಂಡುಗಳು ಕಳೆದು ಸೇವಿಸಿದರು ಅದು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ ಹಾಗಾಗಿ ಅಂತಹ ಆಹಾರವನ್ನು ಸೇವಿಸುವ ಬದಲು ನಿರ್ಲಕ್ಷಿಸುವುದು ಉತ್ತಮ. ಇಲ್ಲದಿದ್ದರೆ ಒಂದಲ್ಲ ಒಂದು ರೀತಿಯ ಖಾಯಿಲೆಗಲು ಬರುವುದು ಶತಸಿದ್ಧ ಎಂಬುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ : ಕಾಂಗ್ರೆಸ್ ತರಲೊರಟ್ಟಿದ್ದ ದಂಗೆ ತಡೆ ಮಸೂದೆ ಮುಸ್ಲಿಂ ಪರವಾಗಿದ್ದು, ಹಿಂದೂ ವಿರುದ್ಧವಿತ್ತು ಎಂಬುದು ಸಂಪೂರ್ಣ ಸುಳ್ಳು
ವಿಡಿಯೋ ನೋಡಿ : ಕಾಂಗ್ರೆಸ್ ತರಲೊರಟ್ಟಿದ್ದ ದಂಗೆ ತಡೆ ಮಸೂದೆ ಮುಸ್ಲಿಂ ಪರವಾಗಿದ್ದು, ಹಿಂದೂ ವಿರುದ್ಧವಿತ್ತು ಎಂಬುದು ಸಂಪೂರ್ಣ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.