ಕಾಂಗ್ರೆಸ್ ತರಲೊರಟ್ಟಿದ್ದ ದಂಗೆ ತಡೆ ಮಸೂದೆ ಮುಸ್ಲಿಂ ಪರವಾಗಿದ್ದು, ಹಿಂದೂ ವಿರುದ್ಧವಿತ್ತು ಎಂಬುದು ಸಂಪೂರ್ಣ ಸುಳ್ಳು

ದೇಶದಲ್ಲಿ ಹೆಚ್ಚಾಗುತ್ತಿರುವ ಕೋಮು ಗಲಭೆಗಳು ಮತ್ತು ಹಿಂಸಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ UPA ಸರ್ಕಾರವು ಜಾರಿಗೆ ತರಲು ನೋಡಿದ “ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ” (The Prevention of Communal Violence (Access to Justice and Repatriations) Bill, 2011) ಮಸೂದೆಗೆ ಸಂಬಂಧಿಸಿದಂತೆ ಈ ಮಸೂದೆಯೂ ಮುಸ್ಲಿಂ ಪರವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿದೆ ಎಂದು ಸಾಕಷ್ಟು ಸುಳ್ಳು ಸುದ್ದಿಗಳು, ಸುಳ್ಳು ಪ್ರತಿಪಾದನೆಗಳು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇತ್ತೀಚೆಗೆ ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್‌ನಲ್ಲಿ ಜಾಹ್ನವಿ ಎಂಬ ನಿರೂಪಕಿಯೊಬ್ಬರು ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ್ದು ಅದರಲ್ಲಿ ” ದಂಗೆ ನಿಯಂತ್ರಣ ಮಸೂದೆಯ ಪ್ರಕಾರ ಧಾರ್ಮಿಕ ಬಹುಸಂಖ್ಯಾತರು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಸುವ ಹಿಂಸೆ ಮಾತ್ರ ಕೋಮು ಹಿಂಸೆ ಎಂದು ಪರಿಗಣಿಸಲಾಗುತ್ತದೆ. ಆದೇ ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ನಡೆಸುವ ಹಿಂಸೆಯನ್ನು ಕೋಮು ಹಿಂಸೆ ಎಂದು ಪರಿಗಣಿಸಲಾಗುವುದಿಲ್ಲ. ಈ ಮಸೂದೆಯ ಪ್ರಕಾರ ಯಾವುದೇ ಹಿಂದು ನ್ಯಾಯಾದೀಶರು ಕೋಮುಗಲಭೆ ಪ್ರಕರಣವನ್ನು ನಡೆಸುವಂತಿಲ್ಲ. ಮತ್ತು ಹಿಂದು ವಕೀಲರು ವಾದ ಸಹ ಮಾಡುವಂತಿಲ್ಲ. ಯಾವುದೇ ಮುಸ್ಲಿಂ ವ್ಯಕ್ತಿ ಹಿಂದು ಒಬ್ಬನ ಮೇಲೆ ಆರೋಪ ಮಾಡಿದರೆ ಸಾಕು ಯಾವುದೇ ವಿಚಾರಣೆ ಇಲ್ಲದೆ ಜೈಲಿಗೆ ತಳ್ಳುವ ಅಧಿಕಾರ ಪೋಲಿಸರಿಗೆ ಇರುತ್ತದೆ.” ಎಂದು ಮಾಡಿರುವ ವಿಶ್ಲೇಷಣೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಕೋಮು ಹಿಂಸಾಚಾರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಸಂತ್ರಸ್ಥರಿಗೆ ಪುನರ್ವಸತಿ ಮಸೂದೆ, 2005. 5 ಡಿಸೆಂಬರ್‌ 2005 ರಂದು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು. ನಂತರ 2011ರಲ್ಲಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯು ‘ಕೋಮು ಹಿಂಸಾಚಾರ ತಡೆ (ನ್ಯಾಯ ಮತ್ತು ವಾಪಸಾತಿಗೆ ಪ್ರವೇಶ) ಮಸೂದೆ, 2011’ ಎಂಬ ಹೊಸ ಮಸೂದೆಯನ್ನು ಸಿದ್ಧಪಡಿಸಿತು ಮತ್ತು ಅದನ್ನು ಕ್ಯಾಬಿನೆಟ್ ಅನುಮೋದಿಸಿತ್ತು. ನಂತರ 2014ರ ರಾಜ್ಯಸಭೆಯಲ್ಲಿ ತೀವ್ರ ವಾದ-ಪ್ರತಿವಾದಗಳ ಬಳಿಕ ಈ ಮಸೂದೆಯನ್ನು ಅಂಗೀಕರಿಸಿಲ್ಲ. ಆದರೆ ಈ ಮಸೂದೆಯಲ್ಲಿ, ‘ಗುಂಪು’ ಎಂದಿದೆ ಹೊರತು ಯಾವ ಧರ್ಮವನ್ನು ಹೆಸರಿಸಿಲ್ಲ. ಮತ್ತು ಮುಸ್ಲಿಂ ಧರ್ಮದ ಪರವಾಗಿ ಕಾನೂನು ರೂಪಿಸಲಾಗಿದೆ ಎಂಬುದಕ್ಕೆ ಆಧಾರವಿಲ್ಲ. ಈ ಮಸೂದೆಯ ಚರ್ಚೆ ಮತ್ತೆ ಮುನ್ನಲೆಗೆ ಬರಲು ಕಾರಣ ಅಕ್ಟೋಬರ್‌ನಲ್ಲಿ ಪಶ್ಚಿಮ-ಉತ್ತರ ಪ್ರದೇಶದ ಮುಜಾಫರ್‌ ನಗರದ ಗಲಭೆಯಲ್ಲಿ 60 ಜನರು ಸಾವನ್ನಪ್ಪಿದರು ಮತ್ತು ಸುಮಾರು 40,000 ಜನರು ಸ್ಥಳಾಂತರಗೊಂಡ  ನಂತರ ಪ್ರಸ್ತಾವಿತ ಕಾನೂನು ಮತ್ತೆ ಗಮನ ಸೆಳೆಯಿತು.ಈ ಮಸೂದೆಯಲ್ಲಿ “ಗುಂಪು” ಎಂದರೆ ದೇಶದ ಯಾವುದೇ ರಾಜ್ಯದಲ್ಲಿ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ಎಂದರ್ಥ. ಭಾರತದ ಒಕ್ಕೂಟ, ಅಥವಾ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಭಾರತದ ಸಂವಿಧಾನದ ಅನುಚ್ಛೇದ 366 ರ ಕಲಮುಗಳು (24) ಮತ್ತು (25) ರ ಅರ್ಥ. ಎಂದು ಉಲ್ಲೇಖಿಸಿದೆಯೇ ಹೊರತು ಹಿಂದು, ಮುಸ್ಲಿಂ ಎಂದು ಉಲ್ಲೇಖಿಲ್ಲ. ಇನ್ನೂ ಯಾವುದೇ ಗುಂಪಿನ(ಧರ್ಮದ, ಸಮುದಾಯದ) ವ್ಯಕ್ತಿ ತನ್ನ ಜಾತಿ-ಧರ್ಮದ ಕಾರಣಕ್ಕಾಗಿ ಹಲ್ಲೆಗೊಳಗಾದರೆ ಕಾನೂನು ನೆರವು ತೆಗೆದುಕೊಳ್ಳಬಹುದು.ಇನ್ನೂ ಮಸೂದೆಯ ಪ್ರಕಾರ ಯಾವುದೇ ಹಿಂದು ನ್ಯಾಯಾದೀಶರು ಕೋಮುಗಲಭೆ ಪ್ರಕರಣವನ್ನು ನಡೆಸುವಂತಿಲ್ಲ. ಮತ್ತು ಹಿಂದು ವಕೀಲರು ವಾದ ಸಹ ಮಾಡುವಂತಿಲ್ಲ. ಎಂಬ ವಾದಕ್ಕೆ ಯಾವುದೇ ಉರುಳಿಲ್ಲ. ಇಡೀ ಮಸೂದೆಯಲ್ಲಿ ಎಲ್ಲಿಯೂ ಈ ಕುರಿತು ಉಲ್ಲೇಖಿಸಿಲ್ಲ. ಯಾವುದೇ ಮುಸ್ಲಿಂ ವ್ಯಕ್ತಿ ಹಿಂದು ಒಬ್ಬನ ಮೇಲೆ ಆರೋಪ ಮಾಡಿದರೆ ಸಾಕು ಯಾವುದೇ ವಿಚಾರಣೆ ಇಲ್ಲದೆ ಜೈಲಿಗೆ ತಳ್ಳುವ ಅಧಿಕಾರ ಪೋಲಿಸರಿಗೆ ಇರುತ್ತದೆ. ಅದೇ ಮುಸ್ಲಿಂನ ಮೇಲೆ ಹಿಂದೂ ಒಬ್ಬ ಆರೋಪ ಮಾಡಿದರೆ ಬಂದಿಸುವಂತಿಲ್ಲ ಎಂಬುದು ಸಹ ಕಟ್ಟು ಕಥೆಯಾಗಿದೆ. ಕಾರಣ PCTV ಮಸೂದೆಯ ಪ್ರಕಾರ, ಈ ಪ್ರಕರಣದಲ್ಲಿ ಸಿಲುಕಿಸುವ ಧ್ಯೇಯವಾಕ್ಯದೊಂದಿಗೆ ಗಲಭೆಗೆ ಸಂಬಂಧಿಸಿದಂತೆ ಒಬ್ಬ ಮುಸ್ಲಿಮ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೂ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳುವ ಯಾವುದೇ ಷರತ್ತು ಅಥವಾ ನಿಯಮವಿಲ್ಲ. ರಾಷ್ಟ್ರೀಯ ಪ್ರಾಧಿಕಾರದ ಮುಂದೆ ಸಾಕ್ಷ್ಯವನ್ನು ನೀಡುವಾಗ ವ್ಯಕ್ತಿಯು ನೀಡಿದ ಯಾವುದೇ ಹೇಳಿಕೆಯನ್ನು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆಗಳಲ್ಲಿ ಆ ವ್ಯಕ್ತಿಯ ವಿರುದ್ಧ ಬಳಸಲಾಗುವುದಿಲ್ಲ ಎಂದು ಸೆಕ್ಷನ್ 42 ಹೇಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾನೂನು ಕ್ರಮಗಳಲ್ಲಿ ಅವರನ್ನು ದೋಷಾರೋಪಣೆ ಮಾಡಲು ತಮ್ಮದೇ ಆದ ಸಾಕ್ಷ್ಯವನ್ನು ಬಳಸುವುದರಿಂದ ವ್ಯಕ್ತಿಯನ್ನು ರಕ್ಷಿಸಲಾಗುತ್ತದೆ.ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ ಮಸೂದೆಯನ್ನು ಉದ್ದೇಶಪೂರ್ವಕವಾಗಿ ಅಪಪ್ರಚಾರಗೊಳಿಸಿ ಜಾರಿಯಾಗದಂತೆ ನೋಡಿಕೊಳ್ಳಲಾಗಿತ್ತು ಮತ್ತು ಇಂದಿಗೂ ಈ ಮಸೂದೆಯ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದ್ದರಿಂದ ಸಧ್ಯ  ವಿಕ್ರಮ ಟಿವಿ ನಿರೂಪಕಿಯಾದ ಜಾಹ್ನವಿಯವರು ಮಾಡಿರುವ ಪ್ರತಿಪಾದನೆ ಸುಳ್ಳಾಗಿದೆ.


ಇದನ್ನು ಓದಿ: ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ ಎಂಬುದು ಸುಳ್ಳು


ವಿಡಿಯೋ ನೋಡಿ: 10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *