ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ ಎಂಬುದು ಸುಳ್ಳು

RBI

ಇತ್ತೀಚೆಗೆ ಎರಡು ಸಾವಿರ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದ ಬೆನ್ನಲ್ಲೆ ಈಗ ರೂಪಾಯಿ ಅಮಾನ್ಯದ ಕುರಿತು ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರು ಇದರ ಸತ್ಯಾಸತ್ಯೆತೆಯನ್ನು ತಿಳಿಯದೇ ಈ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಆದೇಶ ಹೊರಡಿಸಿದ್ದು ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ. ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್: ಇಂತಹ ಯಾವ ಪ್ರಕಟನೆಯನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿಲ್ಲ. ಮತ್ತು ಈ ಕುರಿತು ಯಾವ ಪತ್ರಿಕೆಗಳು ವರದಿ ಮಾಡಿಲ್ಲ. ಈ ಕುರಿತು ಬೂಮ್ ಲೈವ್ ಅವರಿಗೆ ಸ್ಪಷ್ಟನೆ ನೀಡಿರುವ RBIನ ವಕ್ತಾರರಾದ ಯೋಗೇಶ್ ದಯಾಳ್ ರವರು “ಹಳೆಯ 100 ರೂಪಾಯಿ ನೋಟುಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಕರಿಂದ ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ” ಎಂದು ದೃಢಪಡಿಸಿದ್ದಾರೆ.

“ಜುಲೈ 19, 2018 ರಂದು RBI ಹೊಸ 100 ರೂಪಾಯಿ ನೋಟಿನ ಚಿತ್ರವನ್ನು ಬಿಡುಗಡೆ ಮಾಡಿತು, “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿ 100 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಡಾ. ಊರ್ಜಿತ್ ಆರ್ ಪಟೇಲ್ ಅವರ ಸಹಿಯನ್ನು ಹೊಂದಿದೆ. ಹೊಸ ಮುಖಬೆಲೆಯ ಹಿಂಭಾಗದಲ್ಲಿ “ರಾಣಿ ಕಿ ವಾವ್” ಎಂಬ ಮೋಟಿಫ್ ಇದ್ದು, ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ. ನೋಟಿನ ಮೂಲ ಬಣ್ಣ ಲ್ಯಾವೆಂಡರ್. ನೋಟಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟಾರೆ ಬಣ್ಣದ ಸ್ಕೀಮ್ ನೊಂದಿಗೆ ಹೊಂದಿಕೆಯಾಗುವ ಇತರ ವಿನ್ಯಾಸಗಳು, ಜ್ಯಾಮಿಟ್ರಿ ಮಾದರಿಗಳನ್ನು ಹೊಂದಿದೆ. ನೋಟಿನ ಅಳತೆ 66 ಎಂಎಂ × 142 ಎಂಎಂ ಆಗಿರುತ್ತದೆ.” ಎಂದು ನೂರು ರೂಪಾಯಿಗಳ ಹೊಸ ನೋಟುಗಳನ್ನು ಪರಿಚಯಿಸುವಾಗ ತಿಳಿಸಲಾಗಿತ್ತು.

ನಂತರ ನೂರು ರೂಪಾಯಿಗಳ ಹಳೆಯ ನೋಟುಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಮತ್ತು ಅಮಾನ್ಯಗೊಳಿಸಿಲ್ಲ ಆದ್ದರಿಂದ ಮಾರ್ಚ್ 2024ರಿಂದ ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯಗೊಳ್ಳಲಿವೆ ಎಂಬುದು ಸುಳ್ಳು.


ಇದನ್ನು ಓದಿ: Fact Check | ನರೇಗಾ ಯೋಜನೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ವೆಬ್‌ಸೈಟ್‌ ಲಿಂಕ್‌


ವಿಡಿಯೋ ನೋಡಿ: Fact Check | ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ | BJP | BIP IT Cell


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *