Fact Check: ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ

ಇತ್ತೀಚೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರಿಂದ ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ ಎನ್ನುವಂತೆ ಬಿಂಬಿಸಲು ಅನೇಕರು ಶ್ರಮ ಪಡುತ್ತಿದ್ದಾರೆ. ಕೇವಲ ಟಿಪ್ಪು ಸುಲ್ತಾನ್ ನಡೆಸಿದ ದಾಳಿಗಳನ್ನು ಮುನ್ನಲೆಯಾಗಿಟ್ಟುಕೊಂಡು ಈ ವಾದಗಳನ್ನು ಮಂಡಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಸಹ ಟಿಪ್ಪುಸುಲ್ತಾನ್ ಪರವಾಗಿ ಮತ್ತು ವಿರೋಧಿಸಿ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ.

ಇತ್ತೀಚೆಗೆ ಸಚಿವ ರಾಜಣ್ಣನವರು ತಮ್ಮ ಭಾಷಣವೊಂದರಲ್ಲಿ “ಕೆಆರ್‌ಎಸ್‌ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮೈಸೂರು ಮಹಾರಾಜರು ಕೇವಲ ಮುಂದುವರೆಸಿದರು” ಎಂದಿದ್ದಾರೆ. ಈ ಹೇಳಿಕೆಯು ತೀವ್ರ ಚರ್ಚೆಗೆ ಕಾರಣವಾಗಿದ್ದು ಕೆಲವರು “KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ದಿನ 11 ನವೆಂಬರ್ 1911. ಟಿಪ್ಪು ಸುಲ್ತಾನ್ ಸತ್ತದ್ದು 04 ಮೇ 1799. 1799 ರಲ್ಲೇ ಮರಣ ಹೊಂದಿದ ಟಿಪ್ಪುವಿನ ‘ಆತ್ಮ’ ಬಂದು 1911 ರಲ್ಲಿ ಅಡಿಗಲ್ಲು ಹಾಕಿತ್ತಾ??” ಎಂದು ಪ್ರಶ್ನಿಸುತ್ತಿದ್ದಾರೆ.

ಅನೇಕರು ಸಚಿವ ರಾಜಣ್ಣ ಅವರನ್ನು ಟೀಕಿಸಿ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌:  ಈ ಕುರಿತು ಸತ್ಯಶೋಧನೆಯನ್ನು ನಡೆಸಿದಾಗ KRS ಅಣೆಕಟ್ಟೆ ನಿರ್ಮಾಣ ಮಾಡಲು ಅನೇಕ ಜನ ಶ್ರಮಿಸಿದ್ದಾರೆ. ಕ್ರಿ.ಶ. 1595ರಲ್ಲಿ ದಳವಾಯಿ ಕುಮಾರರಾಮ, 1659-1673ರ ನಡುವೆ ಕಂಠೀರವ ನರಸರಾಜ ಓಡೆಯರು ಶ್ರೀರಂಗಪಟ್ಟಣದ ಉತ್ತರದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. 1638-1659 ಚಿಕ್ಕದೇವರಾಜ ಓಡೆಯರ್ ಕಾಲದಲ್ಲಿ ಕಾವೇರಿಗೆ ಒಂದು ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದರು. ಹಾಗೆಯೇ. ಟಿಪ್ಪು ಸುಲ್ತಾನ್ ಕೂಡ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ನೆರವೇರಿಸಿ ಪರ್ಶಿಯನ್ ಭಾಷೆಯಲ್ಲಿ ಶಾಸನವೊಂದನ್ನು ಬರೆಸಿದ್ದು 1911 ರಲ್ಲಿ ಪತ್ತೆಯಾಗಿದೆ.

ಈ ಶಾಸನದಲ್ಲಿ “ದೇವನ ಛಾಯ ಸ್ವರೂಪದ ಹಜರತ್ ಟಿಪ್ಪು ಸುಲ್ತಾನನಾದ ನಾನು ಬೇಡಿದ್ದನ್ನು ನಿಡುವ ಭಗವಂತನ ಕೃಪೆಯಿಂದ ಪವಿತ್ರವಾದ ಕಲೀಫ್ ಪದವಿಯಲ್ಲಿದ್ದು, ಜಗತ್ತಿನಲ್ಲಿಯೇ ಸರ್ವಶ್ರೇಷ್ಠರಾಗಿದ್ದ ಪೈಗಂಬರ್ ಮಹಮ್ಮದ್ ರವರ ಪ್ರೇರಣಾರೂಪವಾದ ದಿವ್ಯ ಸಹಾಯದಿಂದಲೂ, ರಾಜಧಾನಿಗೆ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತವಾದ ಅಣೆಯನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದ್ದೇನೆ.” ಎಂದು ಬರೆಯಲಾಗಿದೆ.

1911 ರಲ್ಲಿ ಕೃಷ್ಣರಾಜ ಸಾಗರ ಅಣಿಕಟ್ಟೆ(ಕನ್ನಬಾಂಡಿ ಅಣೆಕಟ್ಟೆ)ಯ  ಶಂಕು ಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಸಿಕ್ಕ ಈ ಶಾಸನವನ್ನು ಅಂದಿನ ಮೈಸೂರು ಮಹಾರಾಜರದ ನಾಲ್ಪಡಿ ಕೃಷ್ಣರಾಜ ಒಡೆಯರ್‌ರವರು ಕನ್ನಡಕ್ಕೆ ಅನುವಾದಿಸಿದ ಈ ಶಾಸನದ ಪೂರ್ಣಪ್ರತಿಯನ್ನು ಹಾಕಿಸಿರುವುದನ್ನು ನಾವು ನೋಡಬಹುದಾಗಿದೆ.

ಡೆಕ್ಕನ್ ಕ್ರೋನಿಕಲ್ ಸಹ ಟಿಪ್ಪು ಸುಲ್ತಾನ್ ಕಾವೇರಿಗೆ ಅಣೆಕಟ್ಟೆ ಕಟ್ಟಲು ಪ್ರಯತ್ನಿಸಿ ಶಂಕುಸ್ಥಾಪನೆ ನೆರವೇರಿಸಿದ್ದನ್ನು ತನ್ನ ಲೇಖನದಲ್ಲಿ ಉಲ್ಲೇಖಿಸಿದೆ. 

ವಿಕಿಪೀಡಿಯಾದಲ್ಲಿಯೂ ಮೈಸೂರು ಸಾಮ್ರಾಜ್ಯದ ಆರ್ಥಿಕತೆ ಎಂಬುದರಡಿಯಲ್ಲಿ ಟಿಪ್ಪು ಸುಲ್ತಾನ್ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸುತ್ತ, ಆತ KRS ಅಣೆಕಟ್ಟೆಗೆ ಶಂಕುಸ್ಥಾಪನೆ ನೆರವೇರಿರುವುದನ್ನು ಉಲ್ಲೇಖಿಸಲಾಗಿದೆ. KRS ಅಣೆಕಟ್ಟೆಗೆ ಸಂಬಂಧಿಸಿದಂತೆ ಇತಿಹಾಸಕಾರ ಪ್ರೋ. ನಂಜರಾಜ ಅರಸು ಅವರು ಕೂಡ “ನಾನು ಕನ್ನಂಬಾಡಿ ಕಟ್ಟೆ- ಹೀಗೊಂದು ಆತ್ಮಕಥೆ’ ಎಂಬ ಮಹತ್ವದ ಕೃತಿಯನ್ನು ರಚಿಸಿದ್ದಾರೆ.

ಟಿಪ್ಪು ಸುಲ್ತಾನ್‌ ಸಾವಿನ ನಂತರ ಈ ಕನ್ನಂಬಾಡಿ ಅಣೆಕಟ್ಟೆಯನ್ನು ಜನಾನುರಾಯಿ ಮಹಾರಾಜರಾದ ರಾಜರ್ಶಿ ನಾಲ್ವಡಿ ಕೃಷ್ಣರಾಜ ಒಡೆಯರು ತನ್ನ ದಿವಾನರಾದ ಸರ್‌. ಎಂ. ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಪೂರ್ಣಗೊಳಿಸಿದರು. ಮೈಸೂರು ಸಂಸ್ಥಾನಕ್ಕೆ ಯಾವೊಬ್ಬ ವ್ಯಕ್ತಿಯೂ ಸಹ ಕೊಡುಗೆ ನೀಡಿದ್ದಲ್ಲಿ ಅದನ್ನು ಗೌರವಿಸುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಟಿಪ್ಪು ಸುಲ್ತಾನನ ಕನಸನ್ನು ಸಹ ಗೌರವಿಸಿ ಆತನ ಶಾಸನವನ್ನು KRS ಅಣೆಕಟ್ಟೆಯಲ್ಲಿ ಅಳವಡಿಸಿದರು.


ಇದನ್ನು ಓದಿ: Fact Check | ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿಲ್ಲನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ


Leave a Reply

Your email address will not be published. Required fields are marked *