ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ಶ್ರೀರಾಮನ ಲೇಸರ್ ಲೈಟಿಂಗ್ ಎಂದು ಡೆಹ್ರಾಡೂನ್‌ ಫೋಟೊ ಹಂಚಿಕೆ

ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ದಿನಗಳಿಂದ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ಸಹ ಇವುಗಳನ್ನೇ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಪ್ರಯತ್ನ ಮಾಡಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು.

ಇದರಂತೆ ಇತ್ತೀಚೆಗೆ “ಅವರ(ಕಾಂಗ್ರೆಸ್) ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದರು. ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು..! ಎಂಬ ವಿಡಿಯೋ ಒಂದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವೃತ್ತದಲ್ಲಿರುವ ಟವರ್ ಒಂದರ ಮೇಲೆ ಶ್ರೀ ರಾಮನ ಪೋಟೋವನ್ನು ಹಾಕಿರುವು ಕಂಡು ಬರುತ್ತಿದೆ. ಹಾಗಿದ್ದರೆ ಇದು ನಿಜವಾಗಿಯೂ ಶ್ರೀನಗರದಲ್ಲಿರುವ ಲಾಲ್‌ ಚೌಕದ ವೃತ್ತವೇ. ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: ಜನವರಿ 18, 2024ರ ಹಿಂದೂಸ್ತಾನ್‌ ಟೈಮ್ಸ್ ವರದಿ ಪ್ರಕಾರ, ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಹಿನ್ನಲೆಯಲ್ಲಿ, ಡೆಹ್ರಾಡೂನ್‌ ಕ್ಲಾಕ್‌ ಟವರ್ ನಲ್ಲಿ ಬುಧವಾರ ರಾತ್ರಿ ಲೇಸರ್ ಲೈಟಿಂಗ್‌ ಗಳ ಮೂಲಕ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ. ಜನ ನಿಬಿಡ ರಸ್ತೆ ಮಧ್ಯೆ ಇರುವ ಕ್ಲಾಕ್‌ ಟವರ್ ನಲ್ಲಿ ಪ್ರಾಜೆಕ್ಟರ್ ಮೂಲಕ ವಿವಿಧ ಚಿತ್ರಗಳನ್ನು ಮೂಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 15, 2024ರ ಶುಭಾಶ್ ಚೌದರಿ ಓಲ್ಸ್‌ ಎಂಬ ಯೂಟ್ಯೂಬ್‌ ಚಾನೆಲ್‌ ವೀಡಿಯೋದಲ್ಲಿ “ಡೆಹ್ರಾಡೂನ್‌ ಕ್ಲಾಕ್‌ ಟವರ್” ಎಂದು ಅಪ್‌ಲೋಡ್ ಮಾಡಿದ ವೀಡಿಯೋ ಲಭ್ಯವಾಗಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಎರಡು ಒಂದೇ ತೆರನಾಗಿರುವುದನ್ನು ಕಾಣಬಹುದು. ಎರಡೂ ವಿಡಿಯೋದಲ್ಲಿ ಸಾಮ್ಯತೆಗಳಿವೆ. ಆದರೆ ಜಮ್ಮು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ಇರುವ ಟವರ್ ಗೂ ಡೆಹ್ರಾಡೂನ್‌ ಕ್ಲಾಕ್‌ ಟವರ್‌ಗೂ ಇರುವ ವ್ಯತ್ಯಾಸವನ್ನು ಗಮನಿಸಬಹುದು.ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕಾಶ್ಮೀರದ ಲಾಲ್ ಚೌಕ್‌ನಿಂದ ಬಂದಿಲ್ಲ ಬದಲಿಗೆ ಡೆಹ್ರಾಡೂನ್‌ನ ಕ್ಲಾಕ್ ಟವರ್ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: Fact Check: ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ


ವಿಡಿಯೋ ನೋಡಿ: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *