Fact Check: ದಕ್ಷಿಣ ರಾಜ್ಯಗಳ ಪಾಲನ್ನು ಕಡಿಮೆ ಮಾಡಿದ್ದು ಯುಪಿಎಯೇ ಹೊರತು ಮೋದಿ ಸರ್ಕಾರವಲ್ಲ ಎಂಬುದು ಸುಳ್ಳು

ದಕ್ಷಿಣ

ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2024ರ ಬಜೆಟ್ ಸಧ್ಯ ಭಾರತದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಭಾರಿಯ ಬಜೆಟ್‌ನಲ್ಲಿ ದಕ್ಷಿಣದ ರಾಜ್ಯಗಳಿಗೆ ನೀಡಬೇಕಾದ ತೆರಿಗೆ ಹಂಚಿಕೆ ಸಾಕಷ್ಟು ಕಡಿಮೆ ಆಗಿದೆ ಎಂದು ಆರೋಪಗಳು ಕೇಳಿ ಬಂದಿದ್ದು. ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಪ್ರತಿಭಟನೆ ನಡೆಸುತ್ತಿವೆ.

ಸಧ್ಯ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಈಗ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು. ಕೇಂದ್ರದ ಆಡಳಿತರೂಢ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಸಿಗಬೇಕಾದ ತೆರಿಗೆ ಹಂಚಿಕೆಯನ್ನು 15ನೇ ಹಣಕಾಸು  ಆಯೋಗದ ಸಲಹೆಯಂತೆ ನೀಡಲಾಗಿದೆ ಎಂದಿದ್ದಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು “ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ. 2017-18 ರಿಂದ ಇಲ್ಲಿಯವರೆಗೆ ರಾಜ್ಯದ ಪಾಲಿಗೆ 1.87 ಲಕ್ಷ ಕೋಟಿ ತೆರಿಗೆ ಹಂಚಿಕೆ ಬರದೇ ಅನ್ಯಾಯವಾಗಿದೆ’ ಎಂದು ಆರೋಪಿಸಿದ್ದಾರೆ. ಮತ್ತು  ಕರ್ನಾಟಕದ ಕಾಂಗ್ರೆಸ್ “ನನ್ನ ತೆರಿಗೆ ನನ್ನ ಹಕ್ಕು” ಎಂಬ ಹೋರಾಟವನ್ನು ಸಹ ನಡೆಸುತ್ತಿದೆ. ಕರ್ನಾಟಕದ ಜನತೆ ಸಹ ಈ ತಾರತಮ್ಯದ ವಿರುದ್ದ ದನಿ ಎತ್ತಿದ್ದಾರೆ. ಆದರೆ ಈ ಕುರಿತಂತೆ ಈಗ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.

“ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ರೂಪಿಸುವ ಸಮಿತಿಯು ಸೆಪ್ಟೆಂಬರ್ 2, 2013 ರ ವರದಿಯ ಪ್ರಕಾರ ತೆರಿಗೆಯಲ್ಲಿ ಕರ್ನಾಟಕದ ಪಾಲು 4.13% ರಿಂದ 3.73% ಕ್ಕೆ ಕಡಿಮೆಯಾಗಿದೆ. ಕರ್ನಾಟಕ ಮಾತ್ರವಲ್ಲ, ಆಂಧ್ರದ ಪಾಲನ್ನು 7.34% ರಿಂದ 6.85% ಕ್ಕೆ ಮತ್ತು ಕೇರಳದ 1.95% ರಿಂದ 0.38% ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ. ಹದಿನಾಲ್ಕನೇ ಹಣಕಾಸು ಸಮಿತಿಯ ಅಧ್ಯಕ್ಷರು ಯಾರು ಗೊತ್ತಾ? ಅದು ರಘುರಾಮ್ ರಾಜನ್. ಮೋದಿ ಸರ್ಕಾರ್ ಅಡಿಯಲ್ಲಿ ಹಣಕಾಸು ಆಯೋಗವು ವರದಿಯನ್ನು ಮಾತ್ರ ಒಪ್ಪಿಕೊಂಡಿದೆ. ಹಾಗಾಗಿ ದಕ್ಷಿಣ ರಾಜ್ಯಗಳ ಪಾಲನ್ನು ಕಡಿಮೆ ಮಾಡಿದ್ದು ಯುಪಿಎಯೇ ಹೊರತು ಮೋದಿ ಸರ್ಕಾರವಲ್ಲ. ಹಾಗಾಗಿ ಕರ್ನಾಟಕ ಕಾಂಗ್ರೆಸ್ ಅಥವಾ ಕೇರಳದ ಎಡಪಂಥೀಯರು ಈಗ ಮೋದಿ ಸರ್ಕಾರವನ್ನು ದೂಷಿಸುತ್ತಿದ್ದರೆ, ಅದು ಅವರ ರಾಜ್ಯಗಳ ಕಾಳಜಿಯಿಂದಲ್ಲ.” ಎಂಬ ಬರಹದ ಸಂದೇಶವೊಂದನ್ನು ಹರಿಬಿಡಲಾಗಿದೆ. ಇದು ನಿಜವೇ ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್: ಭಾರತದ 14ನೇ ಹಣಕಾಸು ಆಯೋಗದ ಅಧ್ಯಕ್ಷರು ಮಾಜಿ RBI ಗವರ್ನರ್ ವೈ. ವಿ. ರೆಡ್ಡಿ ಹೊರತು ರಘುರಾಮ್ ರಾಜನ್ ಅಲ್ಲ. ಆ ಆಯೋಗವು 4.7% ಪಾಲು ಕರ್ನಾಟಕಕ್ಕೆ ನಿಗಧಿ ಮಾಡಿತ್ತು. ಆದರೆ 15ನೇ ಆಯೋಗ ಅದನ್ನು 3.64% ಇಳಿಸಿತು. ನಷ್ಟ ತುಂಬಲು ಕರ್ನಾಟಕಕ್ಕೆ 5,450 ಕೋಟಿ ರೂ ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ನೀಡಲಿಲ್ಲ ಎಂದು ಆಗಿನ ಸಿಎಂ ಬೊಮ್ಮಾಯಿಯವರೆ ಹೇಳಿದ್ದಾರೆ. UPA ಅವಧಿಯಲ್ಲಿ GST ತೆರಿಗೆ ಪದ್ದತಿ ಇಲ್ಲದ ಕಾರಣ ಕರ್ನಾಟಕ ಹೆಚ್ಚು ತೆರಿಗೆ ಕಟ್ಟುವ ಅಗತ್ಯವಿರಲಿಲ್ಲ. ಆದರೀಗ ಅತಿ ಹೆಚ್ಚು GST ಪಾವತಿಸುವ ಎರಡನೇ ರಾಜ್ಯವಾದರೂ ಕಡಿಮೆ ಪಾಲು ಪಡೆಯುತ್ತಿದೆ.2020-21 ಹಣಕಾಸು ವರ್ಷದಲ್ಲಿ, ಕೇಂದ್ರ ತೆರಿಗೆಗಳಲ್ಲಿ ಕರ್ನಾಟಕದ ಪಾಲು ಕೇಂದ್ರ ತೆರಿಗೆಗಳ ಭಾಗಿಸಬಹುದಾದ ಪೂಲ್‌ನ 3.646% ಆಗಿತ್ತು. ಈ ಶೇಕಡಾವಾರು 2016 ರಿಂದ 2020 ರವರೆಗಿನ 14 ನೇ ಹಣಕಾಸು ಆಯೋಗದ ಪ್ರಶಸ್ತಿ ಅವಧಿಯಲ್ಲಿ 4.713% 1 ರಷ್ಟಿದ್ದ ಷೇರುಗಿಂತ 1.07 ಅಂಕಗಳು ಕಡಿಮೆಯಾಗಿದೆ. ಆರ್ಥಿಕತೆಯ ಮಂದಗತಿ, ಜಿಎಸ್‌ಟಿಯ ಗುರಿಗಿಂತ ಕಡಿಮೆ ಸಂಗ್ರಹಣೆ ಮತ್ತು ಕಾರ್ಪೊರೇಟ್ ತೆರಿಗೆಯಲ್ಲಿನ ಕಡಿತ ಸೇರಿದಂತೆ ಹಲವಾರು ಅಂಶಗಳಿಂದ ಕರ್ನಾಟಕದ ಪಾಲು ಇಳಿಕೆಗೆ ಕಾರಣವಾಗಿದೆಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕರ್ನಾಟಕವು ಅತಿದೊಡ್ಡ ಕಡಿತವನ್ನು ಕಂಡಿದೆ, ಅದರ ತೆರಿಗೆ ಪಾಲನ್ನು ಶೇಕಡಾ 1.066 ಅಂಕಗಳಿಂದ ಕಡಿತಗೊಳಿಸಿದೆ. 14 ನೇ ಹಣಕಾಸು ಆಯೋಗದಲ್ಲಿ 4.713% ರಂತೆ ಭಾಗಿಸಬಹುದಾದ ಪೂಲ್‌ನಿಂದ ರಾಜ್ಯಕ್ಕೆ 3.647% ಮಾತ್ರ ನೀಡಲಾಗುತ್ತದೆ. ಈ ಗಮನಾರ್ಹ ಕುಸಿತ ಎಂದರೆ ಕರ್ನಾಟಕವು ಕೇಂದ್ರದಿಂದ 9,000 ರಿಂದ 11,000 ಕೋಟಿ ರೂ.ಗಳವರೆಗೆ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

15 ನೇ ಹಣಕಾಸು ಆಯೋಗವು ರಾಜ್ಯಗಳಿಗೆ ನಿಧಿಯನ್ನು ಹಂಚಿಕೆ ಮಾಡುವ ಮಾನದಂಡ ಮತ್ತು ತೂಕವನ್ನು ಸರಿಹೊಂದಿಸಿತು, ಇದರ ಪರಿಣಾಮವಾಗಿ ಕರ್ನಾಟಕದ ಪಾಲು ತೀವ್ರವಾಗಿ ಕಡಿಮೆಯಾಗಿದೆ. ರಾಜ್ಯವು “ಮೇಲಿನ ಮಧ್ಯಮ ಆದಾಯ” ವರ್ಗಕ್ಕೆ ಚಲಿಸುತ್ತಿದೆ, ಇದು ಅದರ ಹಂಚಿಕೆಯ ಮೇಲೆ ಪರಿಣಾಮ ಬೀರಿದೆ. ಆಯೋಗದ ಶಿಫಾರಸುಗಳ ಪರಿಣಾಮವಾಗಿ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ತೆರಿಗೆ ಪಾಲು ಕಡಿಮೆಯಾದರೆ, ಬಿಹಾರ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತು ಗುಜರಾತ್‌ಗಳ ಪಾಲು ಹೆಚ್ಚಾಗಿದೆ.

ಈ ಹಂಚಿಕೆಗಳು ಜನಸಂಖ್ಯೆ, ಜನಸಂಖ್ಯಾ ಕಾರ್ಯಕ್ಷಮತೆ ಮತ್ತು ಇತರ ನಿಯತಾಂಕಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಪರಿಗಣಿಸುವ ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ನ್ಯಾಯಯುತ ತೆರಿಗೆ ಹಣದ ಹಂಚಿಕೆಯ ವಿಷಯವು ಚರ್ಚೆಯ ವಿಷಯವಾಗಿ ಉಳಿದಿದೆ, ಮತ್ತು ವಿಶೇಷವಾಗಿ ಭಾರತದಲ್ಲಿ ಉತ್ತರ-ದಕ್ಷಿಣ ತೆರಿಗೆ ಹಂಚಿಕೆಯಲ್ಲಿ ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ. 

ತೆರಿಗೆ ಹಂಚಿಕೆಯಲ್ಲಿ, ಕಳೆದ 14 ಮತ್ತು  15 ಹಣಕಾಸು ಆಯೋಗವು 2011ರ ಜನಗಣತಿಯ ಆಧಾರದ ಮೇಲೆ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ. ಆದರೆ 2021ರಲ್ಲಿ ನಡೆಯಬೇಕಾದ ಜನಗಣತಿ ಮೂರು ವರ್ಷ ಕಳೆದರೂ ಇನ್ನೂ ನಡೆದಿಲ್ಲ. ಜನಗಣತಿ ನಡೆಯುವಂತೆ ಸಹ ನಾವು ಸರ್ಕಾರದ ಮೇಲೆ ಒತ್ತಡ ತರಬೇಕಿದೆ.


ಇದನ್ನು ಓದಿ: Fact Check: ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿ ಘೋಷಣೆ ಎಂದು ಎಡಿಟೆಟ್ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: ಹಿಂದೂ ದೇವಾಲಯಗಳ ಹಣವನ್ನು ಬೇರೆ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು | Save Temples | Hindu Temples


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *