Fact Check | ದೆಹಲಿಯ ರೈತರ ಪ್ರತಿಭಟನೆಯಲ್ಲಿ ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ..!

“13 ಫೆಬ್ರವರಿ 2024 ರಂದು ದೆಹಲಿಯಲ್ಲಿ ನಡೆದ ‘ದೆಹಲಿ ಚಲೋ’ ರೈತರ ಪ್ರತಿಭಟನಾ ರ್ಯಾಲಿಯಲ್ಲಿ ಪೊಲೀಸರನ್ನು ಎದುರಿಸಲು ರೈತರು ಗ್ಲಾಸ್‌ನಿಂದ ಆವೃತವಾದ ಮತ್ತು ಪೊಲೀಸರೇ ನಿರ್ಮಿಸಿದ ತಡೆಗೋಡೆಗಳನ್ನು ಒಡೆಯಲು ಸಮರ್ಥವಾದ ಟ್ರ್ಯಾಕ್ಟರ್‌ಗಳನ್ನು ತರುತ್ತಿದ್ದಾರೆ.” ಎಂಬ ಸುದ್ದಿಯೊಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ನಂಬಿಕೊಂಡು ಸಾಕಷ್ಟು ಜನ ತಮ್ಮ ಸಾಮಜಿಕ ಜಾಲತಾಣದ ಖಾತೆಗಳಿಗೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ರೈತರನ್ನು ಖಲಿಸ್ತಾನಿ ಹೋರಾಟಗಾರರು ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ..

ಫ್ಯಾಕ್ಟ್‌ಚೆಕ್‌

ಹೀಗೆ ವೈರಲ್‌ ಆಗುತ್ತಿರುವ ಪೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ರೀತಿಯ ಹಲವು ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಂಡಿರುವುದು ಕಂಡು ಬಂದಿದೆ. ಇನ್ನು ಫೋಟೋದೊಡನೆ ಉಲ್ಲೇಖಿಸಿದಂತೆ ರೈತರು ಮಾರ್ಪಾಡು ಮಾಡಿದ್ದ ಟ್ರ್ಯಾಕ್ಟರ್‌ಗಳಲ್ಲಿ  ಬಂದಿದ್ದರಾ ಎಂದು ಪರಿಶೀಲನೆ ನಡೆಸಿದಾಗ,  ಇದೇ 13 ಫೆಬ್ರವರಿ 2024 ರಂದು ದೆಹಲಿಯಲ್ಲಿ ರೈತರ ಪ್ರತಿಭಟನಾ ರ್ಯಾಲಿಯಲ್ಲಿ ರೈತರು ಮಾರ್ಪಡಿಸಿದ ಟ್ರಾಕ್ಟರ್‌ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಸೂಚಿಸುವ ಹಲವಾರು ಮಾಧ್ಯಮ ವರದಿಗಳು ಕಂಡು ಬಂದಿವೆ.

ಆದರೆ ರೈತರು ಮಾರ್ಪಡಿಸಿದ ಟ್ರ್ಯಾಕ್ಟರ್ ಬಳಸಿದ ಅಧಿಕೃತ ವರದಿ ಎಲ್ಲಿಯೂ ಕಂಡು ಬಂದಿಲ್ಲ. ANI ವರದಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದೆ. OpIndia, ತಮ್ಮ ಲೇಖನದಲ್ಲಿ, ಬಳಸಿರುವ ಫೋಟೋ ಈಗ ವೈರಲ್ ಆಗುತ್ತಿದ್ದು, ಆ ಫೋಟೋ AI ನಿಂದ ರಚಿಸಲಾದ ಪ್ರಾತಿನಿಧಿಕ ಚಿತ್ರವಾಗಿದೆ ಮತ್ತು ನಿಜವಾದ ಫೋಟೋ ಅಲ್ಲ ಎಂದು ತಿಳಿದು ಬಂದಿದ್ದು, AI ಫೋಟೋಗಳನ್ನು ಪತ್ತೆ ಹಚ್ಚುವ ಹೈವ್‌ ಡಿಟೆಕ್ಟರ್‌ ಕೂಡ ಈ ಫೋಟೋ 97.7 % ಇದೊಂದು  AI ನಿರ್ಮಿತ ಫೋಟೋ ಎಂಬುದನ್ನು ದೃಢ ಪಡಿಸಿದೆ

ಸುಳ್ಳು ಮಾಹಿತಿಯೊಂದಿಗೆ ಎಐ ಫೋಟೋ ಹಂಚಿಕೊಂಡ ಒಪ್‌ಇಂಡಿಯಾ
ಸುಳ್ಳು ಮಾಹಿತಿಯೊಂದಿಗೆ ಎಐ ಫೋಟೋ ಹಂಚಿಕೊಂಡ ಒಪ್‌ಇಂಡಿಯಾ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರೈತರ ಹೋರಾಟದ ಬಗ್ಗೆ ಅಪಪಚಾರ ಮಾಡಲು ಕೆಲ ಸುದ್ದಿ ಸಂಸ್ಥೆಗಳು ಮತ್ತು ಬಲ ಪಂಥೀಯ ಪ್ರೊಪಗೆಂಡ ಹೊಂದಿರುವವರೇ ಈ ರೀತಿಯಾದ ಸುಳ್ಳು ಮಾಹಿತಿಯೊಂದಿಗೆ ವಿಡಿಯೋ ಹಂಚಿಕೊಂಡಿರುವುದು ಖಚಿತವಾಗಿದೆ.


ಇದನ್ನೂ ಓದಿ : Fact Check: ಮಹಾತ್ಮಾ ಗಾಂಧೀಜಿಯವರು ಮುಸ್ಲಿಂ ಎಂಬುದು ಸಂಪೂರ್ಣ ಸುಳ್ಳು


ವಿಡಿಯೋ ನೋಡಿ : Fact Check: ಮಹಾತ್ಮಾ ಗಾಂಧೀಜಿಯವರು ಮುಸ್ಲಿಂ ಎಂಬುದು ಸಂಪೂರ್ಣ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *