Fact Check | ಇವರು ನಿರ್ಮಲಾ ಸೀತಾರಾಮನ್‌ ಅವರ ತಂದೆ ಎಂಬುದು ಸುಳ್ಳು.!

ವಿಡಿಯೋದಲ್ಲಿರುವ ಈ ವ್ಯಕ್ತಿ ನಿರ್ಮಾಲಾ ಸೀತಾರಾಮನ್‌ ಅವರ ತಂದೆ ಎಂಬುದು ಸುಳ್ಳು

“ಭಾರತ ಸರಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತಂದೆಯನ್ನು ಭೇಟಿಯಾಗಲು ಹೋದಾಗ ಅವರ ಮನೆಯ ಅವಸ್ಥೆ ನೋಡಿ. ನಮ್ಮ ಊರುಗಳ ನಗರ ಸೇವಕರ ಮನೆಗಳೂ ಉಚ್ಛ ಸ್ಥಿತಿಯಲ್ಲಿ ಇರುತ್ತವೆ. ಆದರೆ ದೇಶದ ಆರ್ಥಿಕ ಧೋರಣೆ ನಿರ್ಧರಿಸುವ ಮೋದಿ ಸರಕಾರದ ಈ ಮಹಿಳಾ ಮಂತ್ರಿಯ ಸಾದಾತನ, ಸಭ್ಯತೆ ಉಳಿದ ರಾಜಕಾರಣಿಗಳಿಗೆ ಮಾದರಿ ಆಗಬೇಕು.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸುಳ್ಳಿನೊಂದಿಗೆ ಕಳೆದ ವರ್ಷ ಜನವರಿಯಲ್ಲೂ ಹಂಚಿಕೊಳ್ಳಲಾಗಿದ್ದ ಪೋಸ್ಟ್‌

ಪ್ರಮುಖವಾಗಿ ಈ ವಿಡಿಯೋದೊಂದಿಗೆ ಇದೇ ರೀತಿಯ ಹಲವು ಬರಹಗಳನ್ನು ವಾಟ್ಸ್‌ಆಪ್‌ನಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹಲವು ಮಂದಿ ಇದನ್ನೇ ನಿಜವೆಂದು ನಂಬಿಕೊಂಡಿದ್ದಾರೆ. ಹಾಗಾದರೆ ಇವರು ನಿಜವಾಗಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ತಂದೆಯೇ ಎಂಬುದನ್ನು ಪರಿಶೀಲಿಸೋಣ

ವಾಟ್ಸ್‌ಆಪ್‌ನಲ್ಲೂ ಸುಳ್ಳು ಬರಹದೊಂದಿಗೆ ವಿಡಿಯೋ ಹಂಚಿಕೆ
ವಾಟ್ಸ್‌ಆಪ್‌ನಲ್ಲೂ ಸುಳ್ಳು ಬರಹದೊಂದಿಗೆ ವಿಡಿಯೋ ಹಂಚಿಕೆ

ಫ್ಯಾಕ್ಟ್‌ಚೆಕ್‌

ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಅನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲಿಸಲು ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಪರಿಶೀಲನೆ ನಡೆಸಿತು ಈ ವೇಳೆ ಇದೇ ರೀತಿಯ ಬರಹದೊಂದಿಗೆ ಹಲವು ವಿಡಿಯೋಗಳು ಕಂಡು ಬಂದವು, ಆಗ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಾಮಾಜಿಕ ಜಾಲತಾಣದ ಖಾತೆಗಳಿಂದ ಶೇರ್‌ ಆದ ಇದೇ ವಿಡಿಯೋಗಳು ಕಂಡು ಬಂದವು.

ಈ ವಿಡಿಯೋವನ್ನು 3 ಮತ್ತು 4 ಡಿಸೆಂಬರ್ 2022 ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧಿಕೃತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೆಯಾಗಿದೆ. ಅದರಲ್ಲಿ ಅವರು “ವಾರಣಾಸಿಯಲ್ಲಿರುವ ಸಿವ ಮಡಂಗೆ ನಿನ್ನೆ ಭೇಟಿ ನೀಡಿದೆ ಮಹಾಕವಿ ಭಾರತೀಯಾರ್‌ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿದೆ. ಭಾರತೀಯಾರ್ ಅವರ ಸೋದರಳಿಯನ ಮಗ 96 ವರ್ಷದ ಶ್ರೀ ಕೆ.ವಿ. ಕೃಷ್ಣನ್ ಅವರನ್ನೂ ಭೇಟಿ ಮಾಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅವರ ಕಚೇರಿಯಿಂದಲೂ ಕೂಡ ಇದೇ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿದಾಗ ವಿಡಿಯೋದಲ್ಲಿರುವವರು ನಿರ್ಮಲಾ ಸೀತಾರಾಮನ್ ಅವರ ತಂದೆ ಎಂಬುದು ಸುಳ್ಳು‌ ಮತ್ತು ನಿರ್ಮಲಾ ಸೀತಾರಾಮನ್‌ ಅವರ ತಂದೆಯ ಹೆಸರು ನಾರಾಯಣನ್‌ ಸೀತಾರಾಮನ್‌ ಆಗಿದೆ.


ಇದನ್ನೂ ಓದಿ : Fact Check | ದೆಹಲಿಯ ರೈತರ ಪ್ರತಿಭಟನೆಯಲ್ಲಿ ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ..!


ಈ ವಿಡಿಯೋ ನೋಡಿ : Fact Check | ದೆಹಲಿಯ ರೈತರ ಪ್ರತಿಭಟನೆಯಲ್ಲಿ ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *