Fact Check: ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಪುತ್ರಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ ಎಂಬುದು ಸುಳ್ಳು

ಮೋದಿ

ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ವಿವಿಧ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿಕೊಳ್ಳುತ್ತಿವೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಕಷ್ಟು ಕಸರತ್ತನ್ನು ನಡೆಸುತ್ತಿದ್ದು, ತಮ್ಮ ವಿರೋಧಿಗಳು ಸಹ ಮೋದಿಯವರ ಕಾರ್ಯ ವೈಖರಿಯನ್ನು ಹೊಗಳುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.

ಇದರ ಭಾಗವಾಗಿ ಈಗ, “ಕರ್ನಾಟಕದ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರ ಪುತ್ರಿ ತಾರ ಕೆ ಜಾರ್ಜ್ ಅವರು ಮೀಡಿಯಾ ಸಂವಾದದಲ್ಲಿ ಪಾಲ್ಗೊಂಡು ನಮ್ಮ ಪ್ರಧಾನಿ ಮೋದಿಜೀ ಅವರನ್ನ ಹೊಗಳಿ ಕೊಂಡಾಡಿದ್ದಾರೆ” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ತಾರ ಕೆ. ಜಾರ್ಜ್ ಅವರು ಮಲಯಾಳಂನ ಖ್ಯಾತ ನಿರ್ದೇಶಕ ದಿವಂಗತ ಕೆ.ಜಿ ಜಾರ್ಜ್ ಅವರ ಮಗಳಾಗಿದ್ದು ಕರ್ನಾಟಕದ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರ ಮಗಳಲ್ಲ. ಪ್ರಸ್ತುತ ತಾರ ಅವರು ಕತಾರ್‌ನಲ್ಲಿರುವ ರಾಜಮನೆತನದ ಸ್ವಂತ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.

ಬಿ4ಬ್ಲೇಜ್ ಮಲಯಾಳಂ(B4blaze Malayalam) ಎಂಬ ಸುದ್ದಿವಾಹಿನಿಯೂ ತಾರಾ ಕೆ. ಜಾರ್ಜ್ ಅವರ ಸಂದರ್ಶನವನ್ನು ನಡೆಸಿದ್ದು, “ನಾನು ಹಿಂದೂ ಧರ್ಮದ ಹಾದಿಗೆ ಬಂದಾಗ ನನಗೆ ಅನೇಕ ವಿಷಯಗಳು ಅರ್ಥವಾಯಿತು” ಎಂಬ ಶೀರ್ಷಿಕೆ ಅಡಿಯಲ್ಲಿ ಈ ಸಂದರ್ಶನವನ್ನು ಹಂಚಿಕೊಳ್ಳಲಾಗಿದೆ.

ಕೆ. ಜೆ ಜಾರ್ಜ್ ಅವರಿಗೆ ಇಬ್ಬರು ಮಕ್ಕಳಿದ್ದು ಅವರ ಹೆಸರು ರಾಣಾ ಮತ್ತು ರೆನಿತಾ. ಇವರು ಇತ್ತೀಚೆಗೆ ಯಾವುದೇ ಸಂದರ್ಶನ ಮತ್ತು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಆದ್ದರಿಂದ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರ ಪುತ್ರಿ ತಾರ ಕೆ ಜಾರ್ಜ್ ಎಂಬುದು ಸುಳ್ಳು.


ಇದನ್ನು ಓದಿ: Fact Check | ಇವರು ನಿರ್ಮಲಾ ಸೀತಾರಾಮನ್‌ ಅವರ ತಂದೆ ಎಂಬುದು ಸುಳ್ಳು.!


ವಿಡಿಯೋ ನೋಡಿ: Fact Check | ರೈತ ಹೋರಾಟ: ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *