ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಲೇ ಈ ಗ್ಯಾರಂಟಿ ಯೋಜನೆಗಳ ಪಾಲುದಾರರಾದ ಗ್ರಾಮೀಣ ಮಹಿಳೆಯರು ಸಿದ್ದರಾಮಯ್ಯನವರ ಈ ಯೋಜನೆಗಳ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದರೆ. ಪ್ರತಿಪಕ್ಷಗಳು ಟೀಕೆಗಳನ್ನು ಮಾಡುತ್ತಿವೆ. ಈ ಯೋಜನೆಗಳ ಕುರಿತು ತಪ್ಪು ಮಾಹಿತಿಗಳನ್ನು, ಟೀಕೆಗಳನ್ನು ಬರೆದು ಹಂಚಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.
ಈಗ, ಬಿಗ್ ಬ್ರೇಕಿಂಕ್ ನ್ಯೂಸ್, 01 ಮಾರ್ಚ್ 2024ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾಕಿಂಗ್ ಸುದ್ದಿ!” ಎಂಬ ಸುದ್ದಿಯೊಂದನ್ನು ಜಸ್ಟ್ ಕನ್ನಡ ಎಂಬ ಸುದ್ದಿ ಮಾಧ್ಯಮವೊಂದು ಹಂಚಿಕೊಂಡಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಇಂತಹ ಯಾವುದೇ ಪ್ರಕಟನೆಯನ್ನು ಸಾರಿಗೆ ಇಲಾಖೆಯಾಗಲಿ, ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿಯವರಾಗಲಿ ಹೊರಡಿಸಿಲ್ಲ. ಬದಲಾಗಿ 1 ಫೆಬ್ರವರಿ 2024ರಂದು ರಾಮಲಿಂಗ ರೆಡ್ಡಿಯವರು “ಶಕ್ತಿ ಯೋಜನೆಯು ನಮ್ಮ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ, ಪ್ರತಿದಿನ ಲಕ್ಷಾಂತರ ಮಹಿಳಾ ಪ್ರಯಾಣಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು 10 ವರ್ಷಗಳ ಕಾಲ ಈ ಯೋಜನೆ ಮುಂದುವರೆಯಲಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಜಸ್ಟ್ ಕನ್ನಡ” ಎಂಬ ಸುದ್ದಿ ವಾಹಿನಿ ಈ ವರದಿಯನ್ನು ಪ್ರಕಟಿಸಿದ್ದು ತನ್ನ ಲೇಖನದಲ್ಲಿ ಶಕ್ತಿ ಯೋಜನೆಯನ್ನು ಟೀಕಿಸಿದ್ದಾರೆಯೇ ಹೊರತು ಶಕ್ತಿ ಯೋಜನೆ ಬಂದ್ ಕುರಿತು ಎಲ್ಲಿಯೂ ಉಲ್ಲೇಖಿಸಿಲ್ಲ. ಈ ಚಾನೆಲ್ ಅಪ್ರಸ್ತುತ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಕುರಿತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಆದ್ದರಿಂದ ಇಂತಹ ಸುದ್ದಿಗಳನ್ನು ನಂಬಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿ ಸತ್ಯ ತಿಳಿದುಕೊಳ್ಳಿ. ಮತ್ತು ನಂಬಿಕೆಗೆ ಅರ್ಹವಲ್ಲದ ಇಂತಹ ಸುದ್ದಿ ಮಾಧ್ಯಮಗಳು ಬಿತ್ತರಿಸುವ ವರದಿಗಳನ್ನು ನಂಬದಿರಿ.
ಇದನ್ನು ಓದಿ: Fact Check | ಅಯೋಧ್ಯೆಯಲ್ಲಿ ಪ್ಲಾಸ್ಟಿಕ್ ಕೊಟ್ರೆ ಉಚಿತವಾಗಿ 5 ರೂ. ಸಿಗುತ್ತದೆ ಎಂಬುದು ಸುಳ್ಳು..!
ವಿಡಿಯೋ ನೋಡಿ: ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಪುತ್ರಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.