Fact Check: ರೈತ ಹೋರಾಟದಲ್ಲಿ ಮದ್ಯ ಹಂಚಲಾಗುತ್ತಿದೆ ಎಂಬುದು ಸುಳ್ಳು

ರೈತ ಹೋರಾಟ

ದೆಹಲಿಯ ಗಡಿಯಲ್ಲಿ ಬೆಂಬಲ ಬೆಂಬಲ ಬೆಲೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಹೀಡೇರಿಸದ ಕೇಂದ್ರ ಸರ್ಕಾರದ ವಿರುದ್ಧದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರು ದೆಹಲಿಯ ರಾಮಲೀಲಾ ಮೈದಾನಕ್ಕೆ ತಲುಪದಂತೆ ತಡೆಯಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಮೇಲೆ ಅಶ್ರುವಾಯು ದಾಳಿ ಸೇರಿದಂತೆ, ಬ್ಯಾರಿಕೆಡ್, ಮುಳ್ಳು ತಂತಿಗಳಿಂದ ರೈತರು ದೆಹಲಿಯ ಗಡಿ ದಾಟದಂತೆ ಪೋಲಿಸ್ ಪಡೆಗಳಿಂದ ತಡೆ ಒಡ್ಡುತ್ತಿದ್ದಾರೆ.

ಅನೇಕ ಬಲಪಂಥೀಯ ಮಾಧ್ಯಮಗಳು ಮತ್ತು ಬೆಂಬಲಿಗರು ಸಹ ರೈತ ಹೋರಾಟವನ್ನು ಖಾಲಿಸ್ತಾನಿ ಹೋರಾಟಗಾರರು ಮತ್ತು ಕಾಂಗ್ರೆಸ್ ಬೆಂಬಲಿತ ಹೋರಾಟಗಾರರು ಎಂದು ಬಿಂಬಿಸುವಂತೆ ಸುದ್ದಿಗಳನ್ನು ಬಿತ್ತರಿಸಿ, ರೈತ ಹೋರಾಟಕ್ಕೆ ಅವಮಾನ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ.

ಈಗ, ಇವರೆಲ್ಲರೂ ನಿಜವಾದ ರೈತರೇ? ರೈತರ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮಧ್ಯ ಸರಬರಾಜು ಆಗುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಎಂದು ಮಧ್ಯ ಹಂಚುವ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ

ಫ್ಯಾಕ್ಟ್‌ಚೆಕ್‌: ರೈತರ ಹೋರಾಟದಲ್ಲಿ ಮಧ್ಯ ಸರಬರಾಜು ಎಂದು ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ರಿವರ್ಸ್‌ ಇಮೇಜ್ ನಲ್ಲಿ ಹುಡುಕಿದಾಗ ಇದೇ ವಿಡಿಯೋವನ್ನು ಹಲವಾರು ಜನಗಳು ಹಂಚಿಕೊಂಡಿರುವುದು ಪತ್ತೆ ಆಗಿದ್ದು, ಇದು 11 ಏಪ್ರಿಲ್ 2020ರ ಹಳೆಯ ವಿಡಿಯೋ ಆಗಿದ್ದು, ರೈತ ಹೋರಾಟಕ್ಕೂ ಹಿಂದಿನ ವಿಡಿಯೋ ಆಗಿದೆ. ಈ ಕುರಿತು ಹೀಗಾಗಲೇ ಅನೇಕ ಸುದ್ದಿ ಮಾಧ್ಯಮಗಳು ಫ್ಯಾಕ್ಟ್‌ಚೆಕ್‌ ನಡೆಸಿದ್ದು, ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 4 ನಾಲ್ಕು ವರ್ಷದ ಹಳೆಯ ವಿಡಿಯೋ ಎಂದು ವರದಿ ಮಾಡಿವೆ.

ಇದೇ ವೀಡಿಯೊ ಫೇಸ್‌ಬುಕ್‌ನಲ್ಲಿ  ಏಪ್ರಿಲ್ 2020 ರಿಂದ  ಹರಿದಾಡುತ್ತಿರುವುದ್ದು, Gym Jan De Shaukeen Punjabi ಎಂಬ ಪೇಸ್ ಬುಕ್ ಖಾತೆದಾರ “ಸಾರಾಯಿ ಕುಡಿಯುವವರಿಗೆ ಇದನ್ನು ಟ್ಯಾಗ್ ಮಾಡಿ” ಎಂಬ ಶೀರ್ಷಿಕೆಯಡಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ಈ ಕೆಳಗೆ ಕಾಣಬಹುದು.

ಆದ್ದರಿಂದ ರೈತ ಹೋರಾಟದಲ್ಲಿ ಮಧ್ಯ ಹಂಚಲಾಗುತ್ತಿದೆ ಎಂಬುದು ಸುಳ್ಳು. ಇದು ಕೇಂದ್ರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಮರೆಸುವ ಸಲುವಾಗಿ ಕೆಲವು ಬಲಪಂಥೀಯ ಬೆಂಬಲಿಗರು ಹರಡುತ್ತಿರುವ ಸುಳ್ಳು ಸುದ್ದಿ ಆಗಿದೆ.


ಇದನ್ನು ಓದಿ: Fact Check: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್


ವಿಡಿಯೋ ನೋಡಿ: Fact Check | ರೈತ ಹೋರಾಟ: ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *