ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ

ರಾಜಸ್ಥಾನ

ಭಾರತ ಸರ್ಕಾರ ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ ವರ್ಷ ನರೇಂದ್ರ ಮೋದಿಯವರು ಉಚಿತ ಪಡಿತರ ಯೋಜನೆ 2028ರವರೆಗೆ ವಿಸ್ತರಣೆ ಮಾಡಲಾಗುವುದು ಎಂದಿದ್ದರು.

ಆದರೆ ಈಗ ಈ ಯೋಜನೆಯ ಜಾಹಿರಾತಿಗೆ ಅತಿ ಹೆಚ್ಚು ಹಣವನ್ನು ಖರ್ಚು ಮಾಡಲಾಗಿರುವ ಆರೋಪಗಳು ಕೇಳಿ ಬಂದಿದ್ದು, “ಚುನಾವಣೆಗೂ ಮುನ್ನ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು ರಾಜಸ್ಥಾನವೊಂದರಲ್ಲೇ ತಗುಲಿರುವ ವೆಚ್ಚ 13,29,71,454 (1,07,45,168 ಚೀಲಗಳು × ರೂ 12.375)ರೂಗಳು. ಇನ್ನೂ 28 ರಾಜ್ಯಗಳು ಮತ್ತು 7 ಯುಟಿಗಳನ್ನು ನಾವು ಹೊಂದಿದ್ದೇವೆ. ಒಟ್ಟು ಖರ್ಚು ಮಾಡಿದ ಮೊತ್ತವನ್ನು ಊಹಿಸಿ!” ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್‌: ಈ ಕುರಿತು ಹುಡುಕಿದಾಗ ಅಜಯ್ ವಾಸುದೇವ್ ಬೋಸ್ ಎಂಬ RTI ಕಾರ್ಯಕರ್ತ ರಾಜಸ್ಥಾನದ ಜೈಪುರದಲ್ಲಿರುವ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಗೆ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಉಚಿತ ಪಡಿತರ ವಿತರಣೆಗಾಗಿ ಪ್ರಧಾನಿ ಮೋದಿ ಚಿತ್ರ ಮುದ್ರಿತ ಪಡಿತರ ಚೀಲಗಳ ಕುರಿತು ಮಾಹಿತಿ ಕೋರಿ ಸಲ್ಲಿಸಿರುವ RITಗೆ ಉತ್ತರಿಸಿರುವ FCI 13,29,71,454 ರೂ ಖರ್ಚಾಗಿದೆ ಎಂದು ತಿಳಿಸಿದೆ. ಒಟ್ಟು 1,07,45,168 ಚೀಲಗಳು ಮುದ್ರಿತವಾಗಿದ್ದು ಪ್ರತೀ ಚೀಲದ ಬೆಲೆ 12.375 ರೂ ಎಂದು ತಿಳಿಸಿದೆ.

ಈ RTI ಮಾಹಿತಿಗೆ ಪ್ರತಿಕ್ರಯಿಸಿರುವ ಮಹಾರಾಷ್ಟ್ರದ ಕಲ್ಯಾಣ ಲೋಕಸಭೆಯ ಸ್ವತಂತ್ರ್ಯಾ ಅಭ್ಯರ್ಥಿ ಅಮರೀಶ್ ಮೊರಾಜ್ಕರ್ ಪ್ರಧಾನಿ ಮೋದಿಯವರ ಚಿತ್ರವನ್ನು ಮುದ್ರಿಸಲು ಇಷ್ಟೋಂದು ಹಣ ಖರ್ಚು ಮಾಡಿರುವುದನ್ನು ಖಂಡಿಸಿದ್ದಾರೆ ಮತ್ತು ಐದು ಕಂಪನಿಗಳಿಗೆ ಪಡಿತರ ಚೀಲಗಳನ್ನು ಮುದ್ರಿಸುವ ಗುತ್ತಿಗೆ ನೀಡಿದ್ದು ಅದರಲ್ಲಿ ಎರಡು ಗುಜರಾತಿ ಕಂಪನಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಆದ್ದರಿಂದ ಸಧ್ಯ ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ. ಮತ್ತು ಜನರ ತೆರಿಗೆ ಹಣವನ್ನು ಈ ರೀತಿ ದುಂದು ವೆಚ್ಚ ಮಾಡುತ್ತಿರುವ ವಿರುದ್ಧ ದನಿ ಎತ್ತಬೇಕಿದೆ.


ಇದನ್ನು ಓದಿ: Fact Check: ರೈತ ಹೋರಾಟದಲ್ಲಿ ಮದ್ಯ ಹಂಚಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *