Fact Check: ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ ಎಂದು ಎಡಿಟೆಟ್ ಪೋಟೋಗಳ ಹಂಚಿಕೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಇದೇ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಸಲುವಾಗಿ ಅನೇಕ ಸುಳ್ಳು ಪೋಟೋಗಳನ್ನು ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ.

ಇದರಂತೆ, “ರಾಷ್ಟ್ರೀಯ ಜನತಾ ದಳ(RJD) ಪಕ್ಷವು ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ. ಇಂಡಿಯಾ ಒಕ್ಕುಟದ ಎಲ್ಲಾ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.” ಎಂದು ಪ್ರತಿಪಾಧಿಸಿ RJD ಪಕ್ಷದ ಹಲವು ರಾಜಕೀಯ ಮುಖಂಡರು ತಮ್ಮ X ಖಾತೆಯಲ್ಲಿ ಮೈದಾನವೊಂದರಲ್ಲಿ ಜನಗಳು ತುಂಬಿದ ಪೋಟೋವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ರಾಮ್ನಿವಾಸ್ ರಾವತ್ ಕೂಡ ಈ ಚಿತ್ರವನ್ನು ಶೇರ್ ಮಾಡಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸಹ ಇದೇ ಮಾರ್ಫಿಂಗ್ ಚಿತ್ರವನ್ನು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ, “ಲಾಲು ಅವರ ನೆಲೆಯ ಮುಂದೆ ಯಾವುದೇ ಮುಖ ನಿಲ್ಲುವುದಿಲ್ಲ. ಬನ್ನಿ #DeshBachao ಪಾಟ್ನಾದ ಗಾಂಧಿ ಮೈದಾನದಲ್ಲಿ ನಿಮಗೆ ಸಾಧ್ಯವಾದಷ್ಟು ಎಣಿಸಿ.” ಎಂಬ ಶೀರ್ಷಿಕೆಯೊಂದಿಗೆ ಪೋಟೋವನ್ನು 2017ರಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದರು.

ಫ್ಯಾಕ್ಟ್‌ಚೆಕ್: ಇದು ಆಗಸ್ಟ್‌ 27, 2017ರಲ್ಲಿ ರಾಷ್ಟ್ರೀಯ ಜನತಾ ದಳ(RJD)ವು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಸಿದ್ದ ದೇಶ್ ಬಚಾವ್ ಬಿಜೆಪಿ ಭಾಗಾವೋ ಸಮಾವೇಶದ ಸಂದರ್ಭದ ಪೋಟೋಗಳಾಗಿವೆ. RJD ಬೆಂಬಲಿಗರೊಬ್ಬರು ಈ ಸಮಾವೇಶದ ಪೋಟೋವನ್ನು ಈ ಹಿಂದೆಯೇ ಹಂಚಿಕೊಂಡಿರುವುದನ್ನು ನಾವಿಲ್ಲಿ ಕಾಣಬಹುದು.

ಬಿಜೆಪಿಯ ಶಾಂಡಿಲ್ಯ ಗಿರಿರಾಜ್ ಸಿಂಗ್ ಮತ್ತು ಕಪಿಲ್ ಮಿಶ್ರಾ ಸೇರಿದಂತೆ ಹಲವರು ಲಾಲು ಪ್ರಸಾದ್ ಯಾದವ್ ಅವರನ್ನು ರ್ಯಾಲಿಯಲ್ಲಿ ಭಾರಿ ಜನಸಮೂಹವನ್ನು ತೋರಿಸಲು ಫೋಟೋಶಾಪ್ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿದ್ದಕ್ಕಾಗಿ ಟೀಕಿಸಿದ್ದರು.

ಆದರೆ RJDಯು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಸಿದ್ದ ದೇಶ್ ಬಚಾವ್ ಬಿಜೆಪಿ ಭಾಗಾವೋ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ  ನೋಡಬಹುದು.

ಮಾರ್ಚ್ 3, 2024ರ ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸಹ ಲಕ್ಷಾಂತರ ಜನ ಭಾಗವಹಿಸಿ ಇಂಡಿಯಾ ಒಕ್ಕೂಟದ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಖಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಬಹುತೇಕ ಇಂಡಿಯಾ ಒಕ್ಕುಟದ ನಾಯಕರು ಭಾಗವಹಿಸಿದ್ದಾರೆ. ಸಧ್ಯ ಈ ರ್ಯಾಲಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದ್ದರಿಂದ ಹಂಚಿಕೊಳ್ಳಲಾಗಿರುವ ಪೋಟೋ ಹಳೆಯ ಕಾರ್ಯಕ್ರಮಕ್ಕೆ ಸಂಬಂದಿಸಿದ್ದಾಗಿದ್ದು ಎಡಿಟೆಡ್ ಆಗಿದೆ.


ಇದನ್ನು ಓದಿ: Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!


ವಿಡಿಯೋ ನೋಡಿ: Fact Check | ಬಿಜೆಪಿ ಬಿಡುಗಡೆ ಮಾಡಿರುವ FSL ವರದಿ ನಕಲಿ


ಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *