Fact Check | ಬಿಜೆಪಿ ಬಿಡುಗಡೆ ಮಾಡಿರುವ FSL ವರದಿ ನಕಲಿ

“ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.”

“ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.”

“ರಾಷ್ಟ್ರ ವಿರೋಧಿ ಧೋರಣೆಯ @INCKarnataka ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು.”ಎಂದು ಬಿಜೆಪಿ ಪೋಸ್ಟ್‌ ಮಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬಿಜೆಪಿ ಕೃಪಾ ಪೋಷಿತ ಮಾಧ್ಯಮಗಳು ಕೂಡ ಇದನ್ನೇ ನಿಜ ಎಂಬಂತೆ ವರದಿಯನ್ನು ಪ್ರಸಾರ ಮಾಡುತ್ತಿದೆ.

ಸುಳ್ಳು ಸುದ್ದಿಯನ್ನೇ ನಿಜವೆಂಬಂತೆ ಹಂಚಿಕೊಂಡ ಟಿವಿ9 ಕನ್ನಡ
                                 ಸುಳ್ಳು ಸುದ್ದಿಯನ್ನೇ ನಿಜವೆಂಬಂತೆ ಹಂಚಿಕೊಂಡ ಟಿವಿ9 ಕನ್ನಡ

ಈ ಕುರಿತು ಸತ್ಯ ಶೋಧನೆಯನ್ನು ನಡೆಸಲು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿತು. ಈ ವೇಳೆ ಸಂವಾದ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆ ಮಾಡಿಸಿರುವ ಪರೀಕ್ಷೆಯನ್ನು ಪೊಲೀಸ್ ಇಲಾಖೆ ಮಾಡಿಸಿರುವ ಅಧಿಕೃತ ಎಫ್ ಎಸ್ ಎಲ್ ವರದಿ ಇದು ಎಂದು ʻದಿ ಸೌತ್‌ ಫಸ್ಟ್‌ ಡಾಟ್‌ ಕಾಮ್‌ʼ ಸಂಪಾದಕಿ ಅನುಷಾ ರವಿ ಸೂದ್‌ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಇನ್ನೂ ಬಿಜೆಪಿ ಹಂಚಿಕೊಂಡಿರುವ ವರದಿಯಲ್ಲಿ ಫಣಿಂದರ್‌ ಬಿ.ಎನ್‌ ಎಂಬ ಸಹಿ ಇದ್ದು ಈತ clue4evidence ನ ಪ್ರಮುಖ FSL ತಜ್ಙ ಎಂಬುದು ತಿಳಿದು ಬಂದಿದೆ. ಈ ಸಂಸ್ಥೆ ಖಾಸಗಿಯಾಗಿ FSL ವರದಿಗಳನ್ನು ಮಾಡುತ್ತೆ, ಮತ್ತು ಡಿಎನ್‌ಎ ಅನಾಲಿಸಿಸ್ ಮಾಡುವುದಾಗಿಯೂ ಹೇಳಿಕೊಂಡಿದೆ. ಇನ್ನು ಬಲಪಂಥೀಯ ವಿಚಾರಧಾರೆಯನ್ನ ಹೊಂದಿರುವ ಈ ಫಣಿಂದರ್‌ ಬಿ.ಎನ್‌ ಈ ವರದಿಯನ್ನು ನೀಡಿದ್ದರೂ ಅದು ನಿಸ್ಪಕ್ಷಪಾತ ವರದಿ ಎಂದು ಹೇಳಲು ಸಾಧ್ಯವಿಲ್ಲ

ಒಟ್ಟಾರೆಯಾಗಿ ಸರ್ಕಾರಿ ತಜ್ಙರು ನೀಡುವ ವರದಿಯೇ ಅಧಿಕೃತ ವರದಿಯಾಗಿದ್ದು, ಬಿಜೆಪಿ ಹಂಚಿಕೊಂಡಿರುವ FSL ವರದಿ ನಕಲಿ ಮತ್ತು ಸುಳ್ಳಿನಿಂದ ಕೂಡಿದೆ..

Leave a Reply

Your email address will not be published. Required fields are marked *