Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

ಇತ್ತೀಚೆಗೆ ಭಾರತದ ಹಲವು ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಿ ಎಂದು ಹಿಂದು ಪರ ಸಂಘಟನೆಗಳು ಮತ್ತು ಕಾರ್ಯಕರ್ತರು ಕರೆಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಿಂದುಗಳು ಹಿಂದುಗಳ ಜೊತೆಗೆ ಮಾತ್ರ ವ್ಯಾಪರ ನಡೆಸಬೇಕು ಎಂಬುದು ಹಿಂದುಪರ ಸಂಘಟನೆಗಳ ವಾದವಾಗಿತ್ತು. ಕರ್ನಾಟಕದಲ್ಲಿ ಸಹ ಇಂತಹ ಅನೇಕ ಪ್ರಕರಣಗಳು ದಾಖಲಾಗಿದ್ದವು, ಕೊನೆಗೆ ಜನಗಳು ಇಂತಹ ಕೋಮುದಳ್ಳೂರಿಗೆ ಉತ್ತೇಜನ ನೀಡದೆ. ವ್ಯಾಪರ ಬಹಿಷ್ಕಾರದಂತಹ ಕ್ಯತ್ಯಗಳನ್ನು ಬೆಂಬಲಿಸಲಿಲ್ಲ.

ಆದರೆ ಈಗ, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಅಮೇರಿಕಾದ ಚಿಕಾಗೋದಲ್ಲಿ ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ. ಮತ್ತು
ಹಿಂದೂ ವಿರೋಧಿ ಪ್ರದರ್ಶನ ಆಯೋಜಿಸಿ – “ಪ್ರವಾದಿಯನ್ನು ಉಳಿಸಿ, ಹಿಂದೂ ವ್ಯವಹಾರವನ್ನು ಬಹಿಷ್ಕರಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.” ಎಂದು ಆರೋಪಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಬಲಪಂಥೀಯ ಮಾಧ್ಯಮವಾದ ಮೇಘ್ ಅಪ್ಡೇಟ್ ಸೇರಿದಂತೆ ಹಲವಾರು ಜನ ಹಂಚಿಕೊಂಡಿದ್ದಾರೆ.

ಇದೇ ವಿಡಿಯೋ ವಾಟ್ಸಾಪ್‌ನಲ್ಲಿಯೂ ಹರಿದಾಡುತ್ತಿದ್ದು. ಇದರಲ್ಲಿ ವ್ಯಕ್ತಿಯೊಬ್ಬರು “ನಮ್ಮ ಮುಸ್ಲಿಂ ಭಾಂದವರು ನಮ್ಮ ಸಮುದಾಯದ ಮಾಲಿಕತ್ವದವರ ಜೊತೆಗೆ ಆದಷ್ಟು ವ್ಯವಹಾರ ನಡೆಸಿ. ಬೇಕಾದರೆ ಭಾರತದ ಸಿಖ್ ಬಂಧುಗಳ ಜೊತೆಗೆ ವ್ಯಾಪಾರ ನಡೆಸಿ ಮತ್ತು ಪಟೇಲ್ ಸಮುದಾಯವನ್ನು ಹೊರತು ಪಡಿಸಿ ಇತರ ಹಿಂದು ಭಾಂದವರ ಜೊತೆಗೆ ವ್ಯವಹಾರ ನಡೆಸಿ. ಏಕೆಂದರೆ ಪಟೇಲ್ ಅವರು RSSಗೆ ಹಣ ನೀಡುತ್ತಿದ್ದಾರೆ. ಈ ಮೂಲಕ ಹಿಂದು-ಮುಸ್ಲಿಂ ಕೋಮುಗಲಭೆಗೆ ಉತ್ತೇಜನ ನೀಡುತ್ತಿದ್ದಾರೆ” ಎಂದು ಮನವಿ ಮಾಡಿದ್ದಾರೆ.

X(ಟ್ವಿಟರ್‌)ನಲ್ಲಿ ಸಹ ಈ ವಿಡಿಯೋ ಹರಿದಾಡುತ್ತಿದೆ. ಮತ್ತು ಭಾರತದಲ್ಲಿ ಕೂಡ ನಾವು ಮುಸ್ಲಿಮರನ್ನು ಬಹಿಷ್ಕರಿಸಬೇಕು ಎಂದು ಕರೆಕೊಡಲಾಗುತ್ತಿದೆ.ಫ್ಯಾಕ್ಟ್‌ಚೆಕ್‌: ಹಿಂದೂಗಳೊಂದಿಗೆ ವ್ಯಾಪಾರ ಬಹಿಷ್ಕರಿಸಿ ಎಂದು ಮುಸ್ಲಿಮರು ಪ್ರತಿಭಟಿಸಿದ ಯಾವುದೇ ವರದಿಗಳು ಕಂಡುಬಂದಿಲ್ಲ. ವೈರಲ್ ವಿಡಿಯೋ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಜೂನ್ 2022 ರಲ್ಲಿ ಚಿಕಾಗೋದಲ್ಲಿ ಭಾರತೀಯ ಕಾನ್ಸುಲೇಟ್ ಹೊರಗೆ ನಡೆಸಿದ ಪ್ರತಿಭಟನೆಯಾಗಿದೆ. ಜೂನ್ 2022 ರಲ್ಲಿ, ಪ್ರವಾದಿ ಮೊಹಮ್ಮದ್ ವಿರುದ್ಧ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮಾಡಿದ ಟೀಕೆಗಳ ಕುರಿತು ಕುವೈತ್, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದವು.

ಪ್ರವಾದಿ ಮುಹಮ್ಮದ್ ಅವರ ಕುರಿತು ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ವಿರೋಧಿಸಿ ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಹೊರಗೆ ಮುಸ್ಲಿಂ ಗುಂಪುಗಳು ಪ್ರತಿಭಟನೆ ನಡೆಸಿವೆ ಎಂದು ಮುಸ್ಲಿಂ ಮಿರರ್ ವರದಿ ಮಾಡಿದೆ. ಭಾರತದಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ಅಮೇರಿಕಾದಲ್ಲಿ ಹಿಂದುಗಳ ವ್ಯವಹಾರ ಬಹಿಷ್ಕರಿಸಿ ಎಂದು ಮುಸ್ಲೀಮರು ಅಭಿಯಾನ ನಡೆಸುತ್ತಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: Fact Check | ಈ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎಂದು ಎಡಿಟ್ ವೀಡಿಯೊ ಹಂಚಿಕೆ


ವಿಡಿಯೋ ನೋಡಿ: Kaaba | ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *