ಇದೇ ಮಾರ್ಚ್ 3, 2024ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮುಂದೆ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಅವರು “ನರೇಂದ್ರ ಮೋದಿಗೆ ಯಾವುದೇ ಕುಟುಂಬವಿಲ್ಲ ಆದ್ದರಿಂದ ಅವರಿಗೆ ಜನರ ಮೇಲೆ ಸಹ ಯಾವುದೇ ಕಾಳಜಿ ಇಲ್ಲ” ಎಂದು ತಮ್ಮ ಭಾಷಣದಲ್ಲಿ ದೂರಿದ್ದರು. ಇದಾದ ನಂತರ ಪ್ರಧಾನಿ ಮೋದಿಯವರು ಪಾರ್ಲಿಮೆಂಟ್ ಕಲಹದಲ್ಲಿ ಲಾಲು ಪ್ರಸಾದ್ ಯಾದವ್ ಅವರು ನನಗೆ ಕುಟುಂಬವಿಲ್ಲ ಎಂದು ಹೇಳಿದ್ದಾರೆ. ಭಾರತದ 140 ಕೋಟಿ ಜನರೆಲ್ಲಾ ನನ್ನ ಆಶೀರ್ವಾದಿಸಿ ಕಳಿಸಿದ್ದಾರೆ ಹಾಗಾಗಿ ಅವರೆಲ್ಲಾ ನನ್ನ ಕುಟುಂಬದವರು ಎಂದು ಹೇಳಿದ್ದಾರೆ.
ಇದಾದ ನಂತರ ಬಿಜೆಪಿಯ ಹಲವು ಮುಖಂಡರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ “ಮೋದಿ ಕ ಪರಿವಾರ್” ಎಂದು ಹೆಸರು ಬದಲಾಯಿಸಿಕೊಳ್ಳುವ ಅಭಿಯಾನ ಆರಂಭಿಸಿದ್ದಾರೆ.
ಈಗ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಬಾಲಿಹುಡ್ ನಟಿ ಕಂಗಾನ ರಾನವಾತ್ X ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಂಡಿದ್ದಾರೆ.” ಎಂಬ ಪೋಸ್ಟರ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಫ್ಯಾಕ್ಟ್‌ಚೆಕ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರ ಅಧಿಕೃತ ಎಕ್ಸ್ ಖಾತೆಯನ್ನು ಪರಿಶೀಲಿಸಿದಾಗ ತಮ್ಮ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ ಎಂದು ಸೇರಿಸಿಲ್ಲ. ಮತ್ತು ಹೀಗೆ ಹೆಸರು ಬದಲಾಯಿಸಿರುವ ಕುರಿತು ಯಾವುದೇ ವರದಿಗಳು ಲಭ್ಯವಿಲ್ಲ.ನಟಿ ಕಂಗಾನ ರಾನವಾತ್ ಅವರ ಖಾತೆಯನ್ನು ಸಹ ಪರೀಕ್ಷಿಸಿದಾಗ ಅವರು ತಮ್ಮ ಹೆಸರಿನ ಜೊತೆಗೆ ‘ಮೋದಿ ಕಾ ಪರಿವಾರ್’ ಎಂದು ಸೇರಿಸಿಲ್ಲ. ಆದರೆ ಕಿಡಿಗೇಡಿಗಳು ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಕುರಿತು ಹೆಚ್ಚು ಮಾತನಾಡುತ್ತಿರುವ ಕಂಗಾನ ರಾನವತ್ ನಿಜವಾಗಿಯೂ ತಮ್ಮ ಹೆಸರನ್ನು “ಮೋದಿ ಕ ಸರ್ಕಾರ” ಎಂದು ಬದಲಾಯಿಸಿದ್ದಾರೆ ಎಂದು ಅನೇಕ ಜನ ನಂಬಿಕೊಂಡಿದ್ದರು.
ಆದ್ದರಿಂದ ಸಧ್ಯ ಹರಿದಾಡುತ್ತಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಬಾಲಿಹುಡ್ ನಟಿ ಕಂಗಾನ ರಾನವಾತ್ X ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಂಡಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check: ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ ಎಂದು ಎಡಿಟೆಟ್ ಪೋಟೋಗಳ ಹಂಚಿಕೆ
ವಿಡಿಯೋ ನೋಡಿ: Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ