“ಆಜ್‌ತಕ್ ನಿರೂಪಕಿ ಚಿತ್ರ ತ್ರಿಪಾಠಿ ಅವರು ತಮ್ಮ ಕಾರ್ಯಕ್ರಮ ದಂಗಲ್‌ನಲ್ಲಿ ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಬಹುದೊಡ್ಡ ಜಯ ಸಿಗಲಿದೆ ಎಂದಿದ್ದಾರೆ. ಜೊತೆಗೆ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಅವರು ಮೋದಿ ಸರ್ಕಾರದ ಸೋಲಿಗೆ, ನಿರುದ್ಯೋಗ, ಮಹಿಳಾ ಸುರಕ್ಷತೆ, ರೈತರ ಪ್ರತಿಭಟನೆ ಸೇರಿದ ಹಾಗೆ ಹಲವು ಸಮಸ್ಯೆಗಳು ಕಾರಣವಾಗಲಿದೆ ಎಂದಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದು ಕೆಲವರು ಆಜ್‌ತಕ್ ಸುದ್ದಿ ವಾಹಿನಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ..
ಫ್ಯಾಕ್ಟ್‌ಚೆಕ್
ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋವನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದಾಗ ವೈರಲ್ ಆಗಿರುವ ವಿಡಿಯೋ ಮತ್ತು ಆಡಿಯೋಗೆ ಯಾವುದೇ ರೀತಿಯಾದ ಹೋಲಿಕೆ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋದಲ್ಲಿ ಹಿಂದಿಯಲ್ಲಿ ಭಾರತ ಜೊತೆಯಾಗಲಿದೆ, ಭಾರತ ಗೆಲ್ಲಲಿದೆ ಎಂಬ ಘೋಷ ವಾಕ್ಯ ಕಂಡು ಬಂದಿದೆ.. ಹೀಗೆ ಯಾರೂ ಕೂಡ ಯಾವುದೇ ಸುದ್ದಿ ವಾಹಿನಿಯಲ್ಲಿ ಘೋಷಣೆಯನ್ನು ಕೂಗುವುದಿಲ್ಲ.
ಹಾಗಾಗಿ ಇದೇ ಘೋಷಣೆಯ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ, 19 ಜುಲೈ 2023 ರಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯೂಟ್ಯಬ್ ಚಾನಲ್‌ನಲ್ಲಿ ವಿಡಿಯೋವೊಂದು ಕಂಡು ಬಂದಿದೆ. ಅದರಲ್ಲಿ ವೈರಲ್ ವಿಡಿಯೋದ ಧ್ವನಿಯನ್ನೇ ಹೊಂದಿರುವ ಇನ್ನೊಂದು ವಿಡಿಯೋ ಕಂಡು ಬಂದಿದ್ದು, ಇದು ಮೂಲ ವಿಡಿಯೋ ಎಂಬುದು ದೃಢ ಪಟ್ಟಿದೆ.
ಆಜ್‌ತಕ್ ನಿರೂಪಕಿ ನಡೆಸಿಕೊಟ್ಟಿದ್ದಾರೆ ಎನ್ನಾಲಾದ ಕಾರ್ಯಕ್ರಮದ ವೈರಲ್ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಚಿತ್ರ ತ್ರಿಪಾಠಿ ಅವರು 21 ಜುಲೈ 2023ರಂದು ತಮ್ಮ ದಂಗಲ್ ಕಾರ್ಯಕ್ರಮವನ್ನು ನಡೆಸಿಕೊಟ್ಟ ವಿಡಿಯೋ ಪತ್ತೆಯಾಗಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ಅದರ ಮೂಲ ಧ್ವನಿಯನ್ನು ಎಡಿಟ್ ಮಾಡಿ, ಅವರು ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿದ್ದಾರೆ ಎಂಬ ಸುಳ್ಳು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Fact Check: ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ
ವಿಡಿಯೋ ನೋಡಿ : Fact Check: ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ