Fact Check: ಗುಜರಾತ್‌ನಲ್ಲಿ ಹಿಂದೂ ದೇವಾಲಯವನ್ನು ಜಿಹಾದಿಗಳಿಂದ ತೆರವುಗೊಳಿಸಲಾಗಿದೆ ಎಂಬುದು ಸುಳ್ಳು

Hindu

ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾಣಿ ಕಾ ಹಜಿರಾ ಎಂಬ ಹೆಸರಿನ 1600 ವರ್ಷಗಳಷ್ಟು ಹಳೆಯದಾದ ಭವ್ಯವಾದ ಹಿಂದೂ ಪ್ರದೇಶವನ್ನು ಮುಸ್ಲೀಮರು ವಶಪಡಿಸಿಕೊಂಡಿದ್ದರು. ನಿನ್ನೆ ಬಿಜೆಪಿ ಸರ್ಕಾರದ ಬುಲ್ಡೋಜರ್ ಅಲ್ಲಿ ತಿರುಗಾಡಿತು ಮತ್ತು ಜಿಹಾದಿಗಳನ್ನು ತೆರವುಗೊಳಿಸಿತು. ಈಗ ಮುಸಲ್ಮಾನರ ಕಪಿಮುಷ್ಠಿಯಿಂದ ಮುಕ್ತಿ ಪಡೆದಿದೆ. ಇದು ನಿಮ್ಮ ಒಂದು ಮತದ ಬೆಲೆ! ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿದೆ.

ಈ ವೈರಲ್ ವಿಡಿಯೋದಲ್ಲಿ ಭವ್ಯವಾದ ಐತಿಹಾಸಿಕ ಕಟ್ಟವೊಂದರಿಂದ ಪೋಲೀಸರು ಅಂಗಡಿಗಳನ್ನು ತೆರವುಗೊಳಿಸುತ್ತಿರುವುದನ್ನು ಕಾಣಬಹುದು. ಆಗಾಗಿ ನಿಜವಾಗಿಯೂ ಮುಸ್ಲೀಮರು ಹಿಂದು ದೇವಾಲಯವನ್ನು ವಶಪಡಿಸಿಕೊಂಡಿದ್ದರೆ ಎಂದು ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್ : ಇದು ಹಿಂದೂ ದೇವಾಲಯವಲ್ಲ. ಈ ಐತಿಹಾಸಿಕ ಕಟ್ಟಡ. ರಾಣಿ ನೋ ಹಾಜಿರೋ ಅಹ್ಮದ್ ಷಾ ಸಮಾಧಿಯ ಪೂರ್ವ ಭಾಗದಲ್ಲಿ ಮಾನೆಕ್ ಚೌಕ್ ಬಳಿ ಇದೆ. ಇವು ಒಂದನೇ ಅಹ್ಮದ್ ಷಾ ಮತ್ತು ಆ ಕಾಲದ ಇತರ ಸುಲ್ತಾನರ ಪತ್ನಿಯರಿಗೆ ಸೇರಿವೆ. ಪ್ರವಾಸಿ ತಾಣವಾಗಿರುವ ಈ ಸ್ಥಳ ಈಗ ಪ್ರಸಿದ್ಧ ಮಾರುಕಟ್ಟೆಯಾಗಿ ಬದಲಾಗಿದ್ದು, ರಸ್ತೆಬದಿಯ ಆಹಾರಗಳಿಗೆ ಹೆಸರು ಮಾಡಿದೆ.

“ಅಹ್ಮದಾಬಾದ್‌ನ ಮಾನೆಕ್ ಚೌಕ್‌ನ ರಾಣಿ ನೋ ಹಾಜಿರೋದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಂಗಡಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುತ್ತಿದೆ” ಎಂದು ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ವಿವರಿಸುತ್ತಿದ್ದಾನೆ ಎಂದು ಗುಜರಾತಿ ಭಾಷೆಯ ಪರಿಚಯವಿರುವ ಪತ್ರಕರ್ತರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಹಳೆಯ ಅಹಮದಾಬಾದ್‌ನ ಪ್ರಸಿದ್ಧ ವೃತ್ತವಾದ ಮಾನೆಕ್ ಚೌಕ್ ಜನನಿಬೀಡ ಪ್ರದೇಶವಾಗಿದ್ದು ಇಲ್ಲಿನ ಅಕ್ರಮ ಅಂಗಡಿ-ಮುಗ್ಗಟ್ಟುಗಳಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಮತ್ತು ಐತಿಹಾಸಿಕ ಕಟ್ಟಡಕ್ಕೂ ಸಹ ಹಾನಿ ಆಗುವ ಸಂಭವದಿಂದ ಗುಜರಾತ್‌ ಹೈಕೋರ್ಟಿನ ಆದೇಶದಂತೆ ಅಕ್ರಮವಾಗಿ ನಿರ್ಮಿಸಲಾದ ಅಂಗಡಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕಿದೆ. 15 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಸ್ಮಾರಕವು ಹಿಂದೂ, ಜೈನ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದೆ ಎಂದು ಅಹಮದಾಬಾದ್ ಪ್ರವಾಸೋದ್ಯಮ ವೆಬ್ಸೈಟ್ ಹೇಳಿಕೊಂಡಿದೆ. ಈ ವೆಬ್ಸೈಟ್‌ನ ಸ್ಕ್ರೀನ್ಶಾಟ್ ಅನ್ನು ಕೆಳಗೆ ಕಾಣಬಹುದು.

ಆದ್ದರಿಂದ ಸಧ್ಯ ಹರಿದಾಡುತ್ತಿರುವ ಸಂದೇಶ ಸುಳ್ಳಾಗಿದ್ದು ಕೋಮು ದ್ವೇಷ ಹರಡುವ ಉದ್ದೇಶದಿಂದ ಹರಿಬಿಡಲಾಗಿದೆ.


ಇದನ್ನು ಓದಿ: Fact Check: ಬರದಲ್ಲೂ KRS ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *