ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದು. ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡಿದ ಹಾಗೂ ದಮನಿತರ ಪರವಾಗಿ ಹೋರಾಟ ಮಾಡಿದ ಕರ್ಪೂರಿ ಠಾಕೂರ್ ಅವರಿಗೆ, ಕೃಷಿ ಕ್ರಾಂತಿಯ ಮೂಲಕ ಭಾರತದಲ್ಲಿ ಗಮನ ಸೆಳೆದ ಚೌಧರಿ ಚರಣ್ ಸಿಂಗ್ ಅವರಿಗೆ, ಭಾರತದ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಮತ್ತು ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು ಬಿರುದು ಪಡೆದ ಡಾ.ಎಂ.ಎಸ್.ಸ್ವಾಮಿನಾಥನ್ ಸೇರಿದಂತೆ ನಾಲ್ವರಿಗೆ ಮರಣೋತ್ತರವಾಗಿ ಶನಿವಾರ “ಭಾರತ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ನೆನ್ನೆ ಭಾನುವಾರದಂದು ಅನಾರೋಗ್ಯದ ಕಾರಣದಿಂದ ಭಾರತರ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಅವರ ದೆಹಲಿ ನಿವಾಸದಲ್ಲಿಯೇ ರಾಷ್ಟ್ರಪತಿ ಪ್ರದಾನ ಮಾಡಿದ್ದಾರೆ.
ಈ ವೇಳೆ, “ದ್ರೌಪದಿ ಮುರ್ಮು ಅವರು ಎಲ್.ಕೆ ಅಡ್ವಾನಿ ಅವರಿಗೆ “ಭಾರತ ರತ್ನ” ಪ್ರಶಸ್ತಿ” ಪ್ರಧಾನ ಮಾಡುವ ವೇಳೆ ಎಲ್.ಕೆ ಅಡ್ವಾನಿ ಮತ್ತು ನರೇಂದ್ರ ಮೋದಿಯವರು ದ್ರೌಪದಿ ಮುರ್ಮು ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡದೆ ಅಗೌರವ ತೋರಿದ್ದಾರೆ. ” ಎಂಬ ವಿಡಿಯೋ ಮತ್ತು ಪೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಜನರು ನರೇಂದ್ರ ಮೋದಿ ಮತ್ತು ಬಿಜೆಪಿಗರ ಈ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ.
ಇದೇ ರೀತಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರದಾನ ಮಾಡುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಚಪ್ಪಾಳೆ ತಟ್ಟದೆ ಅಗೌರವಿಸಿದ್ದಾರೆ. ಇದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಟೀಕಸುತ್ತಿದ್ದಾರೆ.
ಸತ್ಯ: ಮಾರ್ಚ್ 31, 2024 ರಂದು ಮೋದಿಯವರ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಶಸ್ತಿ ಪ್ರಧಾನದ ಸಂಪೂರ್ಣ ವಿಡಿಯೋ ಲಭ್ಯವಿದ್ದು. ‘ಪ್ರಧಾನಿ ಮೋದಿ ಸಮ್ಮುಖದಲ್ಲಿ ರಾಷ್ಟ್ರಪತಿಗಳು ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು‘ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದ್ರೌಪದಿ ಮುರ್ಮು ಅವರು ಪದಕವನ್ನು ನೀಡಿದ ನಂತರ ಅವರು ಇಬ್ಬರೊಂದಿಗೆ ಕುಳಿತಿರುವುದನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಮಾರ್ಚ್ 31, 2024 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪಿ.ವಿ. ಪ್ರಭಾಕರ್ ರಾವ್ ಅವರು ತಮ್ಮ ತಂದೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುವ ವೀಡಿಯೊವನ್ನು ಭಾರತದ ರಾಷ್ಟ್ರಪತಿಗಳ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರದಾನ ಮಾಡುವ ವೇಳೆ ಚಪ್ಪಾಳೆ ತಟ್ಟಿರುವುದನ್ನು ಕಾಣಬಹುದು.
ಆದ್ದರಿಂದ ಎಲ್.ಕೆ ಅಡ್ವಾನಿ ಅವರಿಗೆ “ಭಾರತ ರತ್ನ” ಪ್ರಶಸ್ತಿ” ಪ್ರಧಾನ ಮಾಡುವ ವೇಳೆ ದ್ರೌಪದಿ ಮುರ್ಮು ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡದೆ ಅಗೌರವ ತೋರಿದ್ದಾರೆ ಎಂಬುದು ಮತ್ತು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರದಾನ ಮಾಡುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಚಪ್ಪಾಳೆ ತಟ್ಟದೆ ಅಗೌರವಿಸಿದ್ದಾರೆ ಎಂಬ ಎರಡೂ ಪ್ರತಿಪಾದನೆಗಳೂ ಸುಳ್ಳು.
ಇದನ್ನು ಓದಿ: Fact Check | ಕೇರಳದ ದೇವಾಸ್ಥಾನದಲ್ಲಿ ಆಜಾನ್ ಕೂಗುವುದು ಮಾಪ್ಪಿಲ ತೆಯ್ಯಂ ಎಂಬ ಸೌಹಾರ್ದ ಆಚರಣೆಯಾಗಿದೆ
ವಿಡಿಯೋ ನೋಡಿ: Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ