Fact Check | ಕೇರಳದ ದೇವಾಸ್ಥಾನದಲ್ಲಿ ಆಜಾನ್ ಕೂಗುವುದು ಮಾಪ್ಪಿಲ ತೆಯ್ಯಂ ಎಂಬ ಸೌಹಾರ್ದ ಆಚರಣೆಯಾಗಿದೆ

“ಕೇರಳ ಸರ್ಕಾರ ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದೆ, ಅಲ್ಲಿ ನಡೆಯುವ ಮಾಪ್ಪಿಲ ತೆಯ್ಯಂನಲ್ಲಿ ಅಜಾನ್‌ ರೀತಿ ಅಲ್ಲಾ ಹು ಅಕ್ಬರ್‌ ಹೇಳಲಾಗುತ್ತಿದ್ದು, ಮುಸಲ್ಮಾನರು ದೇವಸ್ಥಾನವನ್ನು ವಶ ಪಡಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಲು ಆರಂಭವಾಗಿದೆ.” ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದರ ಸತ್ಯಾಸತ್ಯತೆಯನ್ನು ಅರಿಯದೇ ಸಾಕಷ್ಟು ಮಂದಿ ಕೋಮು ದ್ವೇಷವನ್ನು ಹರಡಲು ಮುಂದಾಗುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಈ  ವಿಡಿಯೋದಲ್ಲಿನ ಕೋಮು ಸೌಹಾರ್ಧತೆ ಮತ್ತು ಎರಡೂ ಸಂಸ್ಕೃತಿಗಳ ಧ್ರುವೀಕರಣ ಕಂಡರು ಕಾಣದಂತೆ ಇಡೀ ವಿಡಿಯೋವಿನ ಮೂಲ ವಿಚಾರವನ್ನೇ ತಿರುಚಿ ಹಂವಿಕೊಳ್ಳಲಾಗುತ್ತಿದೆ. ಹಾಗಾದರೆ ಈ ವಿಡಿಯೋದ ಹಿಂದಿನ ಸತ್ಯ ಏನು ಎಂಬ ಕುರಿತು ಈ ಅಂಕಣದಲ್ಲಿ ನೋಡೋಣ

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಂಡು ವೈರಲ್‌ ಮಾಡಲಾಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹುಡುಕಾಟವನ್ನು ನಡೆಸಿತು. ಇದಕ್ಕೆ ಸಂಬಂಧೀಸಿದ್ದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ ಇದು ತೆಯ್ಯಂ ರೀತಿಯ ಸಾಂಸ್ಕೃತಿಕ ಆಚರಣೆಯಿಂದ ಬಂದ ಮಾಪ್ಪಿಲ ತೆಯಂ ಎಂದು ಕರೆಯಲಾಗುವ ಆಚರಣೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋವಿನ ಕೆಲ ಕೀ ಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ MediaoneTV Live ಯುಟ್ಯೂಬ್‌ ಚಾನಲ್‌ನಲ್ಲಿ ” ಅಜಾನ್‌ ತೆಯ್ಯಂ ನೃತ್ಯದ ವಿಡಿಯೋ ವೈರಲ್‌ ಆಗುತ್ತಿದೆ” ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಈ ಮಾಪ್ಪಿಲ ತೆಯ್ಯಂ ಕುರಿತು ಹುಡುಕಿದಾಗ ಇದು ಕಾಸರಗೂಡು ಸುತ್ತಮುತ್ತ ಸರ್ವೇ ಸಾಮಾನ್ಯವಾದ  ಆಚರಣೆ ಎಂಬುದು ತಿಳಿದು ಬಂದಿದೆ.

ಈ ಮಾಪ್ಪಿಲ ತೆಯ್ಯಂ ಅಥವಾ ಅಜಾನ್‌ ತೆಯ್ಯಂ  ಆಚರಣೆಯ ಕುರಿತು ದ ಹಿಂದೂ ಮತ್ತು ದ ಇಂಡಿಯನ್‌ ಎಕ್ಸ್‌ಪ್ರೆಸ್ ಪತ್ರಿಕೆಗಳು ವಿಶೇಷ ಅಂಕಣಗಳನ್ನು ಪ್ರಕಟಿಸಿದ್ದು, ಅದರಲ್ಲಿ ಮಾಪ್ಪಿಲ ತೆಯ್ಯಂ ಒಂದು ಬೃಹತ್‌ ಸಂಸ್ಕೃತಿಯ ಭಾಗ ಮತ್ತು ಹಿಂದೂ ಮುಸ್ಲಿಂ ಸಂಸ್ಕೃತಿಯ ಧ್ರುವಿಕರಣಕ್ಕೆ ಹೇಗೆ ಕಾರಣವಾಗಿದೆ ಎಂಬುದರ ಕುರಿತು ಸಂಪೂರ್ಣವಾಗಿ ವಿವರಿಸಲಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ಸುಳ್ಳು ಎಂಬುದು ಸಾಭೀತಾಗಿದೆ.


ಇದನ್ನೂ ಓದಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *