Fact Check | ಕೇರಳದ RSS ಮುಖಂಡನ ಮನೆಯಲ್ಲಿ ಸಿಕ್ಕಿರುವುದು ಅನಧಿಕೃತ ಪಟಾಕಿಗಳು

“ಕೇರಳದ ಅರ್‌ಎಸ್‌ಎಸ್ ಮುಖಂಡನ ಮನೆಯಿಂದ 770 ಕೆಜಿ ಸ್ಪೋಟಕ ವಶಕ್ಕೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೇರಳದ ಮಾಧ್ಯಮಗಳು ಇದೇ ವರದಿಯನ್ನು ಪ್ರಕಟಿಸಿದ್ದು ಕೇರಳ ಕಾಂಗ್ರೆಸ್‌ ಕೂಡ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಟ್ವಿಟ್‌ ಮಾಡಿದ್ದು. ಇದನ್ನೇ ಸಾಕಷ್ಟು ಜನ ನಿಜವೆಂದು ನಂಬಿದ್ದಾರೆ.

ಇನ್ನು ಪ್ರಮುಖ ಹೋರಾಟಗಾರರು ಮತ್ತು ಕೇಂದ್ರ ಸರ್ಕಾರದ ವಿಫಲತೆಗಳ ವಿರುದ್ಧ ಧ್ವನಿ ಎತ್ತುವ ಹಲವು ಮಂದಿ ಇದೇ ಸುದ್ದಿಯನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್‌ ಆಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ? ಎಂಬುದನ್ನು ಈ ಅಂಕಣದಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಪರಿಶೀಲನೆಯನ್ನ ನಡೆಸಿತ್ತು. ಆಗ ಬಹುತೇಖ ವರದಿಗಳಲ್ಲಿ 770 ಕೆ.ಜಿ ಸ್ಪೋಟಕ ಆರ್‌ಎಸ್‌ಎಸ್‌ ಕಾರ್ಯಕರ್ತನ ಮನೆಯಲ್ಲಿ ಪತ್ತೆಯಾಗಿದೆ ಎಂದು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಆದರೆ ಈ ವರದಿಗಳು 29-03-2024ಕ್ಕೆ ಕೊನೆಗೊಂಡಿದೆ ಮತ್ತು ಈ ಸುದ್ದಿಯ ಕುರಿತು ಕೇರಳದ ಬಹುತೇಕ ಸುದ್ದಿ ಮಾಧ್ಯಮಗಳು ನಿಖರವಾದ ವರದಿಯನ್ನೇ ಪ್ರಕಟಿಸಿಲ್ಲ

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ Only Fact ತನ್ನ ಟ್ವಿಟ್‌ನಲ್ಲಿ ಇದೊಂದು ಸುಳ್ಳು ಮಾಹಿತಿ ಎಂದು ಬರೆದುಕೊಂಡಿದೆ. ಅದರ ಎಕ್ಸ್‌ ಖಾತೆಯಲ್ಲಿನ ಪೋಸ್ಟ್‌ನಲ್ಲಿ “ಕೊಳವಲ್ಲೋರ್ ಪೊಲೀಸ್ ಇನ್ಸ್‌ಪೆಕ್ಟರ್ ಸುಮೀತ್ ಕುಮಾರ್ ಮತ್ತು ಎಸ್‌ಐ ಸೋಬಿನ್ ನೇತೃತ್ವದಲ್ಲಿ ಪ್ರಮುಖ ಕಾರ್ಯಾಚರಣೆಯೊಂದು ನಡೆದಿದ್ದು, ಕಣ್ಣೂರು ಜಿಲ್ಲೆಯ ಪೊಯಿಲೂರಿನಲ್ಲಿರುವ ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ವಡಕಯಿಲ್ ಪ್ರಮೋದ್ ಮತ್ತು ಅವರ ಸಂಬಂಧಿ ವಡಕಯಿಲ್ ಶಾಂತಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಮತ್ತು ಅವರ ಸಂಬಂಧಿಕರ ನಿವಾಸದಲ್ಲಿ 770 ಕೆಜಿ ಪಟಾಕಿ ಪತ್ತೆಯಾಗಿದೆಯೇ ಹೊರತು ಸ್ಪೋಟಕವಲ್ಲ” ಎಂದು ತಿಳಿಸಿದೆ.

ಇನ್ನು ಸ್ಪಷ್ಟನೆಗಾಗಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೊಳವಲ್ಲೋರ್ ಪೊಲೀಸ್‌ ಠಾಣೆಗೆ ಕರೆ ಮಾಡಿ ವಿಚಾರಿಸಿತ್ತು. ಈ ವೇಳೆ ಅಲ್ಲಿನ ಪೊಲೀಸ್‌ ಅಧಿಕಾರಿ “ಇಷ್ಟು ಪ್ರಮಾಣದ ಪಟಾಕಿಯನ್ನು ಕೇರಳದಲ್ಲಿ ವಿಶು ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಮಾರಾಟ ಮಾಡಲು ಬಂಧಿತ ಆರೋಪಿತರು ತಯಾರಿಸಿದ್ದರು, ಆದರೆ ಇದಕ್ಕೆ ಯಾವುದೇ ಪರವಾನಿಗೆ ಪಡೆದುಕೊಂಡಿರಲಿಲ್ಲ. ಹಾಗಾಗಿ ನಿಖರ ಮಾಹಿತಿಯ ಮೇರೆ ದಾಳಿ ನಡೆಸಿ ಬಂಧಿಸಿದ್ದೇವೆ ಮತ್ತು ಅಲ್ಲಿ ಸಿಕ್ಕಿರುವುದು ಪಟಾಕಿ ಎಂದು ಪೊಲೀಸರೇ ಸ್ಪಷ್ಟವಾಗಿ ಹೇಳಿದ್ದಾರೆ.


ಇದನ್ನೂ ಓದಿ : Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ


ಈ ವಿಡಿಯೋ ನೋಡಿ : Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *