Fact Check | ಅರವಿಂದ್‌ ಕೇಜ್ರಿವಾಲ್‌ ಅವರಿಗೆ CIA ನಂಟಿದೆ ಎಂಬುದು ಸುಳ್ಳು

“ಅರವಿಂದ್‌ ಕೇಜ್ರಿವಾಲ್‌ ಅವರಿಗೆ CIA ನಂಟಿದೆ.. ಅವರನ್ನು ಪ್ರಧಾನಿ ಮಾಡಿ ಅಮೆರಿಕಾದ ಅಜೆಂಡಾವನ್ನು ಭಾರತದಲ್ಲಿ ನೆಲೆಯೂರುವಂತೆ ಮಾಡಲು CIA ಪ್ರಯತ್ನಿಸಿತು. ಆದರೆ ಇದೀಗ ಅರವಿಂದ್‌ ಕೇಜ್ರಿವಾಲ್‌ರನ್ನು ಜೈಲಿಗೆ ಹಾಕುವ ಮೂಲಕ CIA ಯೋಜನೆಯಯನ್ನು ಕೇಂದ್ರ ಸರ್ಕಾರ ನಾಶ ಪಡಿಸಿದೆ” ಎಂಬ ಬರಹವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ನಲ್ಲಿ ಹೆಚ್ಚು ಶೇರ್‌ ಮಾಡಲಾಗುತ್ತಿದೆ.

ವಾಸ್ತವದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೆ ದೇಶ ವಿದೇಶಗಳಿಂದಲೂ ಖಂಡನೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆ ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎನ್ನಿಲ್ಲದ ಆತಂಕ ಶುರುವಾಗಿದೆ. ಅದಕ್ಕೆ ಪ್ರಮುಖ ಕಾರಣ ಕೆಲವೇ ದಿನಗಳಲ್ಲಿ ನಡೆಯಲಿರುವು ಲೋಕಸಭೆ ಚುನಾವಣೆ ಇದೇ  ಕಾರಣದಿಂದಾಗಿ ಇದೀಗ ಬಿಜೆಪಿ ಐಟಿ ಸೆಲ್‌ ಮತ್ತು ಬಿಜೆಪಿ ಬೆಂಬಲಿಗರು ಈ ರೀತಿಯ ಬರಹ ಹಂಚಿಕೊಳ್ಳುತ್ತಿದ್ದಾರೆ ಹಾಗಿದ್ದರೆ ಇದು ಎಷ್ಟು ನಿಜ ಎಂಬುದನ್ನು ಈ ಅಂಕಣದಲ್ಲಿ ನೋಡೋಣ

ಫ್ಯಾಕ್ಟ್‌ಚೆಕ್‌

ಇದೊಂದು ಆರೋಪವಾಗಿದ್ದು, ಈ ಆರೋಪವನ್ನು ಕಳೆದ ಹಲವು ವರ್ಷಗಳಿಂದ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ನಂತರ ಇದೇ ರೀತಿಯ ಹಲವು ಆರೋಪಗಳನ್ನು ಮಾಡಲಾಗಿದೆಯಾದರಿ ಆದರೆ ಯಾವುದು ಕೂಡ ಇದುವರೆಗೂ ಸಾಭೀತಾಗಿಲ್ಲ. ಒಂದು ವೇಳೆ ಈ ಆರೋಪ ನಿಜವಾಗಿದ್ದರೆ ರಾಷ್ಟ್ರೀಯ ತನಿಖಾ ದಳ ( NIA ) ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಾಗಿತ್ತು..

ಆದರೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಇದುವರೆಗೂ ಅರವಿಂದ್‌ ಕೇಜ್ರಿವಾಲ್‌ ವಿಚಾರಣೆ ನಡೆದಿಲ್ಲ. ಇನ್ನು ಹೀಗೆ ಆರೋಪಿಸುವವರು ಕೂಡ ತಮ್ಮ ಆರೋಪಕ್ಕೆ ಸರಿಯಾದ ಮತ್ತು ಬಲವಾದ ಸಾಕ್ಷಿಗಳನ್ನು ಕೂಡ ನೀಡಿಲ್ಲ. ಇನ್ನು ಅರವಿಂದ್‌ ಕೇಜ್ರಿವಾಲ್‌ ಅವರು CIA ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ಇದುವರೆಗೂ ಕೂಡ ಯಾವುದೇ ಪತ್ರಿಕೆ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಒಂದೇ ಒಂದು ನಿಖರವಾದ ವರದಿಗಳು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿ ನೋಡಿದಾಗ ಇವುಗಳೆಲ್ಲ ಆರೋಪಗಳಾಗಿದ್ದು, ಈ ಆರೋಪಗಳಿಗೆ ಸೂಕ್ತವಾದ ಸಾಕ್ಷಿಗಳು ಇಲ್ಲದ ಕಾರಣ ಇವುಗಳು ಕೇವಲ ಆರೋಪಗಳಾಗಿ ಉಳಿದುಕೊಂಡಿವೆ.


ಇದನ್ನೂ ಓದಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *