Fact Check | ಅರವಿಂದ್‌ ಕೇಜ್ರಿವಾಲ್‌ ಯುವಕನಾಗಿದ್ದಾಗ ಅತ್ಯಾಚಾರದ ಆರೋಪಿ ಎಂಬುದು ಸುಳ್ಳು

“19 ವರ್ಷದ ಖರಗ್‌ಪುರದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಸ್ಥಳೀಯ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದರು. ಈ ಕುರಿತು 8 ಜೂನ್‌ 1987 ರಲ್ಲಿ ದ ಟೆಲಿಗ್ರಾಫ್‌ ಪತ್ರಿಕೆ ವರದಿಯನ್ನು ಪ್ರಕಟಿಸಿದೆ.. ನೋಡಿ ಇದು ಇಂದಿನ ದೆಹಲಿ ಮುಖ್ಯಮಂತ್ರಿಯ ಅಸಲಿಯತ್ತು” ಎಂಬ ಪೇಪರ್‌ ಕಟ್ಟಿಂಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೇಪರ್‌ ಕಟ್ಟಿಂಗ್‌ ವರದಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಗಂಭೀರ ಆರೋಪವನ್ನ ಮಾಡಲಾಗಿದೆ.

ಈ ಪತ್ರಿಕೆಯನ್ನು ನೋಡಿದಾಗ ಇದು ನಿಜವಾದ ವರದಿಯಂತೆ ಕಾಣುತ್ತಿದ್ದು, ಇದು ನಿಜವಿರಬಹುದೆಂದು ಸಾಕಷ್ಟು ಮಂದಿ ನಂಬಿಕೊಂಡಿದ್ದಾರೆ. ಇನ್ನು ಅರವಿಂದ್‌ ಕೇಜ್ರಿವಾಲ್‌ ಅವರ ವಿರೋಧಿ ಬಣವು ಕೂಡ ಇದೇ  ವರದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ವರದಿ ಪತ್ರಿಕೆಯೊಂದರ ಪೇಪರ್‌ ಕಟ್ಟಿಂಗ್‌ ಆಗಿರುವುದರಿಂದ ಬಹುತೇಕರು ಇದು ನಿಜವಿದ್ದರೂ ಇರಬಹುದು ಎಂದು ನಂಬಿದ್ದಾರೆ. ಹಾಗಾದರೆ ಈ ಪೇಪರ್‌ ಕಟ್ಟಿಂಗ್ಸ್‌ನ ಅಸಲಿಯತ್ತು ಏನು ಎಂಬುವುದನ್ನು ಈ ಅಂಕಣದಲ್ಲಿ ನೋಡೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮೊದಲು ಅರವಿಂದ್‌ ಕೇಜ್ರಿವಾಲ್‌ ಅವರ ಕುರಿತು ವಿಕಿಪಿಡಿಯಾ ಸೇರಿದ ಹಾಗೆ ವಿವಿಧ ವರದಿಗಳನ್ನು ಪರಿಶೀಲನೆ ನಡೆಸಿತು. ಆದರೆ ಯಾವುದೇ ವರದಿಗಳಲ್ಲೂ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಅತ್ಯಾಚಾರದ ಆರೋಪ ಇರುವ ಮಾಹಿತಿಯು ಕಂಡು ಬಂದಿಲ್ಲ. ಇನ್ನು ವೈರಲ್‌ ಪೇಪರ್‌ ಕಟ್ಟಿಂಗ್ಸ್‌ ಅನ್ನ ಗಮನಿಸಿದಾಗ ಕೆಲವೊಂದು ವ್ಯಾತ್ಯಾಸಗಳು ಕಂಡು ಬಂದಿದೆ.

ವೈರಲ್‌ ಆಗುತ್ತಿರುವ ಪತ್ರಿಕೆಯ ಹೆಸರು ದ ಟೆಲಿಗ್ರಾಫ್‌ ಎಂದಿದೆ ಮತ್ತು ಅದರಲ್ಲಿನ ಶೀರ್ಷಿಕೆ IIT ವಿದ್ಯಾರ್ಥಿ ಅತ್ಯಾಚಾರದ ಆರೋಪಿ ಎಂದು ಅರ್ಧ ಸುದ್ದಿಯನ್ನು ಪ್ರಕಟಿಸಲಾಗಿದ. ಆದರೆ ಮೂರನೇ ಕಾಲಂನಲ್ಲಿ ಬೇರೆಯದ್ದೇ ಸುದ್ದಿ ಇದೆ.  ವೈರಲ್‌ ಆಗುತ್ತಿರುವ ಪೇಪರ್‌ ಕಟ್ಟಿಂಗ್‌ fodey.com ನಂತಹ ವೆಬ್‌ಸೈಟ್‌ ಬಳಸಿ ಸೃಷ್ಠಿಸಿರುವ ನಕಲಿ ಪೇಪರ್‌ ಆಗಿದೆ ಎಂಬುದು ಪತ್ತೆಯಾಗಿದೆ.

fodey.com ನಲ್ಲಿರುವ ಪತ್ರಿಕೆಯಾದ ದ ಡೈಲಿ ವಾಟ್‌ಎವರ್‌ ಎಂಬ ಪತ್ರಿಕೆಯ ಪೇಪರ್‌ ಕಟ್ಟಿಂಗ್‌ ಇದಾಗಿದೆ., ಇದರಲ್ಲಿ 30 ಆಗಸ್ಟ್‌ 2006 ಎಂಬ ದಿನಾಂಕವಿದೆ. ಇದರ ಹೆಡ್‌ಲೈನ್‌ನಲ್ಲಿ ಮಂಗಳ ಗ್ರಹದ ನಿವಾಸಿಗಳು ಭೂಮಿಯನ್ನು ಆಕ್ರಮಿಸುತ್ತಾರೆ ಎಂಬ ಶೀರ್ಷಿಕೆ ಇದೆ. ಇದೇ ಪೇಪರ್‌ ಕಟ್ಟಿಂಗ್‌ ಅನ್ನು ಬಳಸಿಕೊಂಡು ಈ ಸುಳ್ಳು ಪೇಪರ್‌ ಕಟಿಂಗ್‌ ಸೃಷ್ಟಿಸಲಾಗಿದೆ ಎಂಬುದು ತಿಳಿದು ಬಂದಿದೆ. ಇನ್ನು ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧ ಅತ್ಯಾಚಾರದ ಆರೋಪ ಇರುವ ಕುರಿತು ಇದುವರೆಗೂ ಯಾವುದೇ ಅಧಿಕೃತ ವರದಿಗಳು ಬಂದಿಲ್ಲ. ಹಾಗಾಗಿ ವೈರಲ್‌ ಪೇಪರ್‌ ಕ್ಲಿಪ್‌ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *