ಕಾಂಗ್ರೆಸ್

Fact Check: ಜಮ್ಮು ಕಾಶ್ಮೀರದಲ್ಲಿ ‌ ಅಧಿಕಾರಕ್ಕೆ ಬಂದರೆ ಉಗ್ರರನ್ನು ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಹೇಳಿಲ್ಲ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ಇದೇ ಏಪ್ರಿಲ್ 5 ರಂದು ತನ್ನ ಪ್ರಣಾಳಿಕೆಯನ್ನು “ನ್ಯಾಯ ಪತ್ರ” ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಸಧ್ಯ ಕಾಂಗ್ರೆಸ್‌ನ ಪ್ರಣಾಳಿಕೆಯ ಕುರಿತು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ” ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತ್ರಿವಳಿ ತಲಾಕ್ ಮತ್ತೆ ತರುತ್ತೇವೆ, ಉಗ್ರವಾದವನ್ನು ಬೆಂಬಲಿಸುತ್ತೇನೆ” ಎಂದು ಸುಳ್ಳು ಹಬ್ಬಿಸಲಾಗುತ್ತಿತ್ತು. ಈಗ, “ಜಮ್ಮು ಕಾಶ್ಮೀರದಲ್ಲಿ ಕಾಂಗ್ರೇಸ್ ಏನಾದರು ಈ ಬಾರಿ…

Read More
Gwadar Port

Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು

ಇತ್ತೀಚೆಗೆ 1974ರಲ್ಲಿ ಮುಗಿದ ಕಚ್ಚತೀವು ದ್ವೀಪದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಗಮನ ಸೆಳೆದು ಅದು ಚರ್ಚೆಗೆ ಕಾರಣವಾಗಿತ್ತು. ಇಂದಿರಾ ಗಾಂಧಿಯವರು ಅದನ್ನು ಶ್ರೀಲಂಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದನ್ನು ಬಿಜೆಪಿಗರು ವಿರೋದಿಸಿದ್ದರು. ಇಂದು ಇಂಡಿಯಾ ಟುಟೆ “ಪಾಕಿಸ್ತಾನದ ಗ್ವಾದರ್ ಅನ್ನು 1950 ರ ದಶಕದಲ್ಲಿ  ಭಾರತಕ್ಕೆ ನೀಡಲಾಗಿತ್ತು” ಎಂಬ ಲೇಖನವನ್ನು ಪ್ರಕಟಿಸಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದನ್ನು ಕನ್ನಡ ದುನಿಯಾ ಎಂಬ ಮಾಧ್ಯಮವು ಇಂಡಿಯಾ ಟುಟೆ ವರದಿಯನ್ನೇ ಕನ್ನಡಕ್ಕೆ ಅನುವಾದಿಸಿ “ಈಗಿನ ಪಾಕಿಸ್ತಾನದ ಗ್ವಾದರ್ ಬಂದರು ಸ್ವೀಕರಿಸಲು…

Read More

Fact Check | ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವೈನಾಡಿನಲ್ಲಿ ರಾಹುಲ್‌ ಗಾಂಧಿ ನಾಮಪತ್ರವನ್ನು ಸಲ್ಲಿಸುವ ವೇಳೆ ಕಾಂಗ್ರೆಸ್‌ ಬೆಂಬಲಿಗರು ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್‌ಗೆ ಮತ ಚಲಾಯಿಸುವ ಮುನ್ನ ಎಚ್ಚರ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವಾರು ಮಂದಿ ಹಸಿರು ಬಣ್ಣದ ಬಟ್ಟಿಯನ್ನು ಧರಿಸಿ, ಹಸಿರು ಬಾವುಟವನ್ನು ಪ್ರದರ್ಶಶಿಸುವ ಕೂಡ ಕಾಣಬಹುದಾಗಿದೆ. ಇದೇ ರೀತಿಯ ವಿಡಿಯೋವೊಂದನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಅಭಿಮಾನಗಳ ಪೇಜ್‌ ಬಸನಗೌಡ ಯತ್ನಾಳ್‌ ಸೇಣೆ ಎಕ್ಸ್‌ ಖಾತೆಯಲ್ಲಿ ಕೂಡ…

Read More