“ಈ ವಿಡಿಯೋ ನೋಡಿ ವೈನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರವನ್ನು ಸಲ್ಲಿಸುವ ವೇಳೆ ಕಾಂಗ್ರೆಸ್ ಬೆಂಬಲಿಗರು ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್‌ಗೆ ಮತ ಚಲಾಯಿಸುವ ಮುನ್ನ ಎಚ್ಚರ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವಾರು ಮಂದಿ ಹಸಿರು ಬಣ್ಣದ ಬಟ್ಟಿಯನ್ನು ಧರಿಸಿ, ಹಸಿರು ಬಾವುಟವನ್ನು ಪ್ರದರ್ಶಶಿಸುವ ಕೂಡ ಕಾಣಬಹುದಾಗಿದೆ.
ಇದೇ ರೀತಿಯ ವಿಡಿಯೋವೊಂದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಮಾನಗಳ ಪೇಜ್ ಬಸನಗೌಡ ಯತ್ನಾಳ್ ಸೇಣೆ ಎಕ್ಸ್ ಖಾತೆಯಲ್ಲಿ ಕೂಡ ಹಂಚಿಕೊಳ್ಳಲಾಗಿ. ಇದರಲ್ಲಿ ಮುಸಲ್ಮಾನರ ಧ್ವಜ ಎಂದು ಉಲ್ಲೇಖಿಸಿದರು ಪರೋಕ್ಷವಾಗಿ ಇದನ್ನು ಪಾಕಿಸ್ತಾನದ ಧ್ವಜ ಎಂಬಂತೆ ಟೀಕೆ ಮಾಡಲಾಗಿದೆ. ಹಾಗಾದರೆ ಈ ವಿಡಿಯೋದಲ್ಲಿನ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ನೋಡೋಣ
ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಮುಸಲ್ಮಾನರ ಬಾವುಟ …🙄👇
ಕಾಂಗ್ರೆಸ್ ಸಾಬ್ರು ಪಕ್ಷ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ಭಾರತದಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸದ ಹೊರತು ಹಿಂದೂಗಳಿಗೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸ್ತಿದೆ…
ಹಿಂದೂಗಳೇ ಎಚ್ಚೆತ್ತುಕೊಳ್ಳಿ pic.twitter.com/4IbOXiVO1L— ಬಸನಗೌಡ ಯತ್ನಾಳ್ ಸೇನೆ (@yathnalabhimani) April 7, 2024
ಫ್ಯಾಕ್ಟ್‌ಚೆಕ್
ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಮುಂದಾದ 2019ರಲ್ಲಿ ಇದೇ ರೀತಿಯ ಧ್ವಜಗಳೊಂದಿಗಿನ ವಿಡಿಯೋಗಳು ಕಂಡು ಬಂದ್ದವು. ಜೊತೆಗೆ ಆ ವರದಿಗಳಲ್ಲಿ “ರಾಹುಲ್ ಗಾಂಧಿ ಅವರ ಚುನಾವಣ ರ್ಯಾಲಿಯಲ್ಲಿ ಪ್ರದರ್ಶನಗೊಂಡಿರುವುದು IUML ನ ಧ್ವಜ ಪಾಕಿಸ್ತಾನದ್ದಲ್ಲ” ಎಂಬುದು ಕಂಡು ಬಂದಿದೆ. ಇದೇ ವಿಡಿಯೋವನ್ನು ಬಳಸಿಕೊಂಡು 2019ರಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು.
ಇದೇ ಕಾರಣಕ್ಕೆ ಈ ಭಾರಿ ಈ ರೀತಿಯ ಯಾವುದೇ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ಯಾವುದೇ ಕಾರಣಕ್ಕು ತನ್ನ ಸಂಘಟನೆಯ ಧ್ವಜವನ್ನು ಪ್ರದರ್ಶಿಸಬಾರದು ಎಂದು ಮನವಿಯನ್ನು ಕೂಡ ಮಾಡಿಕೊಂಡಿತ್ತು.
ಇದೇ ಕಾರಣಕ್ಕಾಗಿ ಈ ಬಾರಿ ರಾಹುಲ್ ಗಾಂಧಿ ನಾಮ ಪತ್ರ ಸಲ್ಲಿಕೆಯಲ್ಲಿ IUML ಯಾವುದೇ ಧ್ವಜವನ್ನು ಪ್ರದರ್ಶಿಲ್ಲ. ಹಾಗಾಗಿ ವೈರ್‌ಲ್ ಪೋಸ್ಟ್ ಹಲವು ಸುಳ್ಳುಗಳಿಂದ ಕೂಡಿದೆ
ಇದನ್ನೂ ಓದಿ : Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ
ಈ ವಿಡಿಯೋ ನೋಡಿ : Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ