Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು

Gwadar Port

ಇತ್ತೀಚೆಗೆ 1974ರಲ್ಲಿ ಮುಗಿದ ಕಚ್ಚತೀವು ದ್ವೀಪದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಗಮನ ಸೆಳೆದು ಅದು ಚರ್ಚೆಗೆ ಕಾರಣವಾಗಿತ್ತು. ಇಂದಿರಾ ಗಾಂಧಿಯವರು ಅದನ್ನು ಶ್ರೀಲಂಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದನ್ನು ಬಿಜೆಪಿಗರು ವಿರೋದಿಸಿದ್ದರು. ಇಂದು ಇಂಡಿಯಾ ಟುಟೆ “ಪಾಕಿಸ್ತಾನದ ಗ್ವಾದರ್ ಅನ್ನು 1950 ರ ದಶಕದಲ್ಲಿ  ಭಾರತಕ್ಕೆ ನೀಡಲಾಗಿತ್ತು” ಎಂಬ ಲೇಖನವನ್ನು ಪ್ರಕಟಿಸಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

ಇದನ್ನು ಕನ್ನಡ ದುನಿಯಾ ಎಂಬ ಮಾಧ್ಯಮವು ಇಂಡಿಯಾ ಟುಟೆ ವರದಿಯನ್ನೇ ಕನ್ನಡಕ್ಕೆ ಅನುವಾದಿಸಿ “ಈಗಿನ ಪಾಕಿಸ್ತಾನದ ಗ್ವಾದರ್ ಬಂದರು ಸ್ವೀಕರಿಸಲು 1950ರಲ್ಲೇ ಭಾರತಕ್ಕೆ ಆಫರ್: ತಿರಸ್ಕರಿಸಿದ್ದ ಪ್ರಧಾನಿ ನೆಹರೂ” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ.

ಫ್ಯಾಕ್ಟ್‌ಚೆಕ್: 1956 ರಲ್ಲಿ, ಒಮಾನ್ ಸುಲ್ತಾನ್ ಗ್ವಾದರ್ ಅನ್ನು ಭಾರತಕ್ಕೆ ಮಾರಾಟ ಮಾಡಲು ಮುಂದಾದರು, ಆದರೆ ಪ್ರಧಾನಿ ನೆಹರೂ ಈ ಪ್ರಸ್ತಾಪವನ್ನು ಸ್ವೀಕರಿಸದಿರಲು ನಿರ್ಧರಿಸಿದರು, ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಕೇವಲ ನೆಹರೂ ಅವರ ನಿರ್ಧಾರವಲ್ಲ, ವಿದೇಶಾಂಗ ಕಾರ್ಯದರ್ಶಿ ಮತ್ತು ಗುಪ್ತಚರ ಬ್ಯೂರೋ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳ ಶಿಫಾರಸುಗಳಿಂದ ನಿರ್ದೇಶಿಸಲ್ಪಟ್ಟಿದೆ. ಗ್ವಾದರ್ ಅನ್ನು ರಕ್ಷಿಸಲು ಸಂಬಂಧಿಸಿದ ಭೌಗೋಳಿಕ ರಾಜಕೀಯ ವಾತಾವರಣ ಮತ್ತು ವ್ಯವಸ್ಥಾಪನಾ ಸವಾಲುಗಳು ಈ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಅಂಶಗಳಾಗಿವೆ.

ಬಲೂಚಿಸ್ತಾನದ ಮಕ್ರಾನ್ ಕರಾವಳಿಯಲ್ಲಿರುವ ಗ್ವಾದರ್ ನ ಭೌಗೋಳಿಕತೆಯು ಅವಕಾಶಗಳನ್ನು ಒದಗಿಸುವಂತೆ ದುರ್ಬಲತೆಗಳನ್ನು ಒದಗಿಸುವಂತಿತ್ತು. ಇದಲ್ಲದೆ, ಅದರ ಸ್ವಾಧೀನವು ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧವನ್ನು ಹದಗೆಡಿಸುತ್ತಿತ್ತು, ಪ್ರಾದೇಶಿಕ ಸ್ಥಿರತೆಯ ಪ್ರಯತ್ನಗಳಿಗೆ ಅಡ್ಡಿಯಾಗುವಂತಿತ್ತು.

“ದಾಖಲೆಗಳ ಬಗ್ಗೆ ತಿಳಿದಿರುವ ಇಬ್ಬರು ಭಾರತೀಯ ರಾಜತಾಂತ್ರಿಕರೊಂದಿಗಿನ ಖಾಸಗಿ ಸಂಭಾಷಣೆಯ ಪ್ರಕಾರ, ಒಮಾನ್ ಸುಲ್ತಾನ್ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಗ್ವಾದರ್ ನೀಡಿದರು” ಎಂದು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಮಾಜಿ ಸದಸ್ಯ ಪ್ರಮಿತ್ ಪಾಲ್ ಚೌಧರಿ IndiaToday.In ತಿಳಿಸಿದ್ದಾರೆ.

“ಸ್ವಾತಂತ್ರ್ಯದ ನಂತರ, ರಾಜತಾಂತ್ರಿಕ ಸಮುದಾಯದ ಪ್ರಕಾರ, ಗ್ವಾದರ್ ಅನ್ನು ಒಮಾನ್ ಸುಲ್ತಾನ್ ಪರವಾಗಿ ಭಾರತವು ನಿರ್ವಹಿಸುತ್ತಿತ್ತು, ಏಕೆಂದರೆ ಉಭಯ ದೇಶಗಳು ಅತ್ಯುತ್ತಮ ಸಂಬಂಧವನ್ನು ಹೊಂದಿದ್ದವು” ಎಂದು ಬ್ರಿಗೇಡಿಯರ್ ಗುರ್ಮೀತ್ ಕನ್ವಾಲ್ (ನಿವೃತ್ತ) ಬರೆದಿದ್ದಾರೆ. ಈ ಪ್ರಸ್ತಾಪವು 1956 ರಲ್ಲಿ ಬಂದಿತು ಎಂದು ನಾನು ನಂಬುತ್ತೇನೆ. ಜವಾಹರಲಾಲ್ ನೆಹರು ಇದನ್ನು ತಿರಸ್ಕರಿಸಿದರು ಮತ್ತು 1958 ರಲ್ಲಿ, ಒಮಾನ್ ಗ್ವಾದರ್ ಅನ್ನು ಪಾಕಿಸ್ತಾನಕ್ಕೆ 3 ಮಿಲಿಯನ್ ಪೌಂಡ್ಗಳಿಗೆ ಮಾರಾಟ ಮಾಡಿತು” ಎಂದು ಪ್ರಮಿತ್ ಪಾಲ್ ಚೌಧರಿ ಹೇಳುತ್ತಾರೆ.

ಬ್ರಿಗೇಡಿಯರ್ ಗುರ್ಮೀತ್ ಕನ್ವಾಲ್ (ನಿವೃತ್ತ) ಅವರ ಪ್ರಕಾರ, ಒಮಾನ್ ಗ್ವಾದರ್ ಪ್ರಸ್ತಾಪವನ್ನು ಭಾರತಕ್ಕೆ ಬಹುಶಃ ಮೌಖಿಕವಾಗಿ ಮಾಡಲಾಗಿತ್ತು.” ಎಂದು ಇಂಡಿಯಾ ಟುಡೆ ತನ್ನ ವರದಿಯಲ್ಲಿ ತಿಳಿಸಿದೆ.

ಗ್ವಾದರ್ ಬಂದರು ಅರೇಬಿಯನ್ ಸಮುದ್ರದ ದಡದಲ್ಲಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್ ನಗರದಲ್ಲಿದೆ. ಇದು ಪಾಕಿಸ್ತಾನದ ಕಡಲ ಕಾರ್ಯದರ್ಶಿಯ ಆಡಳಿತಾತ್ಮಕ ನಿಯಂತ್ರಣದಲ್ಲಿದೆ ಮತ್ತು ಚೀನಾ ಸಾಗರೋತ್ತರ ಪೋರ್ಟ್ ಹೋಲ್ಡಿಂಗ್ ಕಂಪನಿಯ ಕಾರ್ಯಾಚರಣೆಯ ನಿಯಂತ್ರಣದಲ್ಲಿದೆ. ಈ ಬಂದರು ಪಾಕಿಸ್ತಾನದ ಅತಿದೊಡ್ಡ ನಗರವಾದ ಕರಾಚಿಯಿಂದ 533 ಕಿ.ಮೀ ದೂರದಲ್ಲಿದೆ ಮತ್ತು ಇರಾನ್ ಗಡಿಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಇದು ಒಮಾನ್ ನಿಂದ 380 ಕಿ.ಮೀ (240 ಮೈಲಿ) ದೂರದಲ್ಲಿದೆ ಮತ್ತು ಪರ್ಷಿಯನ್ ಕೊಲ್ಲಿಯಿಂದ ಪ್ರಮುಖ ತೈಲ ಹಡಗು ಮಾರ್ಗಗಳ ಬಳಿ ಇದೆ. ಇದು ಸುತ್ತಮುತ್ತಲಿನ ಪ್ರದೇಶವು ವಿಶ್ವದ ಸಾಬೀತಾದ ತೈಲ ನಿಕ್ಷೇಪಗಳ ಮೂರನೇ ಎರಡರಷ್ಟು ನೆಲೆಯಾಗಿದೆ.

ಭಾರತದ ಮುಂಬೈ ಬಂದರು ಮತ್ತು ಪಾಕಿಸ್ತಾನದ ಗ್ವಾದರ್ ಬಂದರು ನಡುವಿನ ಅಂತರ 878 ನಾಟಿಕಲ್ ಮೈಲಿಗಳು. ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಕೇವಲ 76 ನಾಟಿಕಲ್ ಮೈಲಿ ದೂರದಲ್ಲಿರುವ ಚಬಹಾರ್ ಬಂದರನ್ನು ಈಗ ಭಾರತ ಅಭಿವೃದ್ಧಿಪಡಿಸಿದೆ.

ಇಂದು ಗ್ವಾದರ್ ಭಾರತದ ಭಾಗವಾಗಿದ್ದರೆ ಅಂತರಾಷ್ಟ್ರೀಯ ಬಂದರಾಗಿ ಭಾರತದ ಆರ್ಥಿಕತೆಗೆ ಹೆಚ್ಚಿನ ಪ್ರಭಾವ ಬೀರುತ್ತಿತ್ತು. ಆದರೆ ಗಡಿಗಳ ಕಾರಣದಿಂದಾಗಿ ಪಾಕಿಸ್ತಾನದ ಜೊತೆಗೆ ಶಾಶ್ವತ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ಮತ್ತು ಅಲ್ಲಿ ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವುದಕ್ಕೆ ಭಾರತ ಹೆಚ್ಚಿನ ಶ್ರಮವನ್ನು ವ್ಯಯಿಸಬೇಕಾಗಿ ಬರುತ್ತಿತ್ತು. ಆದ್ದರಿಂದ ಗ್ವಾದರ್ ಬಂದರನ್ನು ಭಾರತ ಕೈಬಿಡಲು ವಿದೇಶಾಂಗ ಕಾರ್ಯದರ್ಶಿ ಮತ್ತು ಗುಪ್ತಚರ ಬ್ಯೂರೋ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳ ಸಲಹೆ ಮತ್ತು ಶಿಫಾರಸ್ಸು ಕಾರಣವೇ ಹೊರತು ನೆಹರು ಒಬ್ಬರೇ ಕಾರಣರಲ್ಲ.


ಇದನ್ನು ಓದಿ: Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ


ವಿಡಿಯೋ ನೋಡಿ: ಬಸ್ ದಾಳಿಯ ವಿಡಿಯೋ ಗುಜರಾತ್ ನಲ್ಲಿ ನಡೆದಿರುವುದು. ಕರ್ನಾಟಕಕ್ಕೆ ಸಂಬಂಧವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *