ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ಇದೇ ಏಪ್ರಿಲ್ 5 ರಂದು ತನ್ನ ಪ್ರಣಾಳಿಕೆಯನ್ನು “ನ್ಯಾಯ ಪತ್ರ” ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಸಧ್ಯ ಕಾಂಗ್ರೆಸ್‌ನ ಪ್ರಣಾಳಿಕೆಯ ಕುರಿತು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ” ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತ್ರಿವಳಿ ತಲಾಕ್ ಮತ್ತೆ ತರುತ್ತೇವೆ, ಉಗ್ರವಾದವನ್ನು ಬೆಂಬಲಿಸುತ್ತೇನೆ” ಎಂದು ಸುಳ್ಳು ಹಬ್ಬಿಸಲಾಗುತ್ತಿತ್ತು.
ಈಗ, “ಜಮ್ಮು ಕಾಶ್ಮೀರದಲ್ಲಿ ಕಾಂಗ್ರೇಸ್ ಏನಾದರು ಈ ಬಾರಿ ಅಧಿಕಾರಕ್ಕೆ ಬಂದರೆ, ಜೈಲಲ್ಲಿ ಇರುವ ಎಲ್ಲಾ ಖತರ್ನಾಕ್ ಉಗ್ರರನ್ನು ಬಿಡುಗಡೆ ಮಾಡಲಾಗುತ್ತದೆಯಂತೆ. ಅಷ್ಟೇ ಅಲ್ಲ ಉಗ್ರಗಾಮಿಗಳೇನಾದರು ನಮ್ಮ ವೀರ ಸೈನಿಕರ ಗುಂಡೇಟಿನಿಂದ ಸತ್ತರೆ ಅವನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವಂತೆ”. ಎಂಬ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ವೈರಲ್ ವಿಡಿಯೋವನ್ನು ಜೆಕೆ ಮಿಡಿಯಾ ಎಂಬ ಸುದ್ದಿ ಮಾಧ್ಯಮವು 2019ರಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಜಮ್ಮುಕಾಶ್ಮೀರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಆತಂಕವಾದಿ ಎಂಬ ಸುಳ್ಳು ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವವರನ್ನು ಬಿಡುಗಡೆಗೊಳಿಸುತ್ತೇವೆ. ಮತ್ತು ಆತಂಕವಾದಿಗಳ ಹೆಸರಿನಲ್ಲಿ ಯಾರೆಲ್ಲಾ ಕೊಲ್ಲಲ್ಪಟ್ಟಿದ್ದಾರೆ ಅಂತವರಿಗೆ ಒಂದು ಕೋಟಿ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದರು. ಇದು ಕಾಂಗ್ರೆಸ್‌ನ ಅಧಿಕೃತ ಪ್ರಣಾಳಿಕೆ ಆಗಿರದೆ ಕಾಂಗ್ರೆಸ್ ಮುಖಂಡರೊಬ್ಬರ ಹೇಳಿಕೆಯಾಗಿತ್ತು.
ಇನ್ನೂ 2024 ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಫೆಡರಲಿಸಂ, ಕೇಂದ್ರ-ರಾಜ್ಯ ಸಂಬಂಧಗಳ ಅಡಿಯಲ್ಲಿ “ನಾವು ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುತ್ತೇವೆ. ಲಡಾಖ್‌ನ ಬುಡಕಟ್ಟು ಪ್ರದೇಶಗಳನ್ನು ಸೇರಿಸಲು ನಾವು ಸಂವಿಧಾನದ ಆರನೇ ಅನುಸೂಚಿಯನ್ನು ತಿದ್ದುಪಡಿ ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿಯೂ ಉಗ್ರರನ್ನು ಬಿಡುಗಡೆಗೊಳಿಸುತ್ತೇವೆ, ಉಗ್ರಗಾಮಿಗಳೇನಾದರು ನಮ್ಮ ವೀರ ಸೈನಿಕರ ಗುಂಡೇಟಿನಿಂದ ಸತ್ತರೆ ಅವನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವಂತೆ ಉಲ್ಲೇಖಿಸಿಲ್ಲ. ವೈರಲ್ ವೀಡಿಯೋದಲ್ಲಿ ಬಲಪಂಥೀಯ ವರದಿಗಾರ ಆಶಿಶ್ ಕೋಹ್ಲಿ ಸಹ ಕಾಂಗ್ರೆಸ್ ನಾಯಕ ಭಯೋತ್ಪಾದಕರನ್ನು ಬಿಡುಗಡೆಗೊಳಿಸುತ್ತೇವೆ ಮತ್ತು ಉಗ್ರರು ಸತ್ತರೆ ಒಂದು ಕೋಟಿ ಪರಿಹಾರ ನೀಡುತ್ತೇವೆ ಎಂದಿದ್ದಾರೆ ಎಂದು ಸುದ್ದಿಯನ್ನು ತಿರುಚಿದ್ದಾರೆ.
ಇದನ್ನು ಓದಿ: Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು
ವಿಡಿಯೋ ನೋಡಿ: ಬಸ್ ದಾಳಿಯ ವಿಡಿಯೋ ಗುಜರಾತ್ ನಲ್ಲಿ ನಡೆದಿರುವುದು. ಕರ್ನಾಟಕಕ್ಕೆ ಸಂಬಂಧವಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ