ಮಧ್ಯ ತೆರಿಗೆ ನೀತಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಧ್ಯ ಕೇಜ್ರಿವಾಲ್ ಅವರ ಭ್ರಷ್ಟಾಚಾರ ಸಂಬಂದಿಸಿದಂತೆ ನಾನಾ ಆರೋಪಗಳನ್ನು ಹರಿಬಿಡಲಾಗುತ್ತಿದೆ.
ಈಗ, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಕೇಜ್ರಿವಾಲ್ ಅವರು ತಮ್ಮ ಸ್ವಂತ ಮನೆಯಿಂದ ತಿಂಗಳಿಗೆ 10 ಲಕ್ಷ ರೂ.ಗಳನ್ನು ಬಾಡಿಗೆಯಾಗಿ ಪಡೆಯುತ್ತಾರೆ. ಜಿಮ್ ಸಲಕರಣೆಗಳಿಗಾಗಿ ಮಗನ ಕಂಪನಿಯಿಂದ ಸಿಎಂಗೆ ತಿಂಗಳಿಗೆ 10 ಲಕ್ಷ ರೂ. ಅದು ಹೇಗೆ? ಈ ವೀಡಿಯೊದಿಂದ ಅರ್ಥಮಾಡಿಕೊಳ್ಳಿ, ಮೋದಿ ಜಿ ಅವರ ಆಜ್ಞೆಯ ಮೇರೆಗೆ ಇಡಿ ನಮಗೆ ತೊಂದರೆ ನೀಡುತ್ತಿದೆ ಎಂದು ಈ ಭ್ರಷ್ಟರು ಹೇಳುತ್ತಾರೆ.” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫ್ಯಾಕ್ಟ್‌ಚೆಕ್: ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಕೇಜ್ರಿವಾಲ್ ಅವರು ತಮ್ಮ ಸ್ವಂತ ಮನೆಯಿಂದ ತಿಂಗಳಿಗೆ 10 ಲಕ್ಷ ರೂ.ಗಳನ್ನು ಬಾಡಿಗೆಯಾಗಿ ಪಡೆಯುತ್ತಾರೆ ಎಂದು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಈ ಆರೋಪವನ್ನು ಮಾಡಿರುವ ಸಬ್ ಲೋಕತಂತ್ರ ಸುದ್ದಿ ಪೋರ್ಟಲ್‌ನ ಸ್ಥಾಪಕ ತಂತ್ರ ಬಾಬಾ ಎಂದೂ ಕರೆಯಲ್ಪಡುವ ರಚಿತ್ ಕೌಶಿಕ್ ಅವರನ್ನು ಪಂಜಾಬ್ ಪೊಲೀಸರು ಫೆಬ್ರವರಿ 6, 2024 ರಂದು ದ್ವೇಷ ಭಾಷಣದ ಕಾರಣಕ್ಕಾಗಿ ಬಂಧಿಸಿದ್ದರು.
ಕೆಲವು ಬಲಪಂಥೀಯ ಕಾರ್ಯಕರ್ತರು ಪತ್ರಕರ್ತ ರಚಿತ್ ಕೌಶಿಕ್ ಅವರನ್ನು ಅರವಿಂದ್ ಕೇಜ್ರಿವಾಲ್ ಅವರ ಮಗ ಪುಲ್ಕಿತ್ ಕೇಜ್ರಿವಾಲ್ ವಿರುದ್ದ ಮಾಡಿದ ವಿಡಿಯೋಗಾಗಿ ಬಂದಿಸಲಾಗಿದೆ ಎಂದು ಆಫ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ.
ಪುಲ್ಕಿತ್ ಕೇಜ್ರಿವಾಲ್ ಅವರು ಸಧ್ಯ ದೆಹಲಿ ಐಐಟಿಯಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದಾರೆ. ನೋಯ್ಡಾದ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ಕೇಜ್ರಿವಾಲ್ ಪುತ್ರ ಪುಲ್ಕಿತ್ ಶೇ.96.4 ಅಂಕಗಳನ್ನು ಗಳಿಸಿದ್ದರು. 2014ರಲ್ಲಿ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯಲ್ಲಿ ಸಿಎಂ ಪುತ್ರಿ ಹರ್ಷಿತಾ ಶೇ.96ರಷ್ಟು ಅಂಕ ಗಳಿಸಿದ್ದರು ತನ್ನ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ ಮತ್ತು ಐಐಟಿ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) ಉತ್ತೀರ್ಣಳಾಗಿದ್ದಾರೆ. ಪುಲ್ಕಿತ್ ಅವರು 20-25 ವರ್ಷ ವಯಸ್ಸಿನವರಾಗಿದ್ದಾರೆ.
ಜೂನ್ 15, 2023 ರಂದು, ಪ್ರಮುಖ ಟ್ವಿಟರ್ ಬಳಕೆದಾರ ಮೈಥುನ್ ಅವರು ಇದೇ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ನಂತರ ಪಂಜಾಬ್ ಪೊಲೀಸರು ಮಧ್ಯಪ್ರದೇಶದ ತಮ್ಮ ನಿವಾಸಕ್ಕೆ ತಲುಪಿದ್ದಾರೆ ಎಂದು ಆರೋಪಿಸಿದ್ದಾರೆ. ಸಧ್ಯ ಪುಲ್ಕಿತ್ ಅವರ ಮೇಲೆ ಆರೋಪಗಳನ್ನಷ್ಟೇ ಮಾಡಲಾಗುತ್ತಿದ್ದು ಅದು ನಿಜವೆಂದು ಸಾಬೀತು ಮಾಡಲು ಅವರ ವಿರೋದಿಗಳಿಂದ ಸಾಧ್ಯವಾಗಿಲ್ಲ.
ಆದ್ದರಿಂದ ತಮ್ಮ ಸ್ವಂತ ಮನೆಗೆ ಪುಲ್ಕಿತ್ ಕೇಜ್ರಿವಾಲ್ 10 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check | ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂಬುದು ಸುಳ್ಳು
ವಿಡಿಯೋ ನೋಡಿ: ಮುಸ್ಲಿಂ ಮತಗಳು ಸಾಕು, ಹಿಂದೂಗಳು ಬೇಡ ಎಂದು ಸಿದ್ದರಾಮಯ್ಯನವರು ಹೇಳಿಲ್ಲ. ಎಡಿಡೆಟ್ ಫೇಕ್ ನ್ಯೂಸ್ ಹಂಚಿಕೊಂಡ ಬಿಜೆಪಿಗರು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ