Fact Check: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ

ಭಾರತೀಯ ಜನತಾ ಪಕ್ಷವು ಇಂಡಿಯಾ ಒಕ್ಕೂಟದ ನಾಯಕರು ಮುಸ್ಲಿಂ ತುಷ್ಟೀಕರಣ ನಡೆಸುತ್ತಿದ್ದಾರೆ ಎಂದು ಮೊದಲಿನಿಂದಲೂ ಆರೋಪಿಸುತ್ತಾ ಬರುತ್ತಿದ್ದಾರೆ ಮತ್ತು ಮುಸ್ಲಿಂ ದ್ವೇಷವನ್ನು ತನ್ನ ಪಕ್ಷದ ಸಿದ್ದಾಂತ ಎನ್ನುವ ರೀತಿಯಲ್ಲಿ ಅನುಸರಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಯಾರೇ ಮುಸ್ಲಿಂ ಸಮುದಾಯದೊಟ್ಟಿಗೆ ಗುರುತಿಸಿಕೊಂಡಿದ್ದರು ಸಹ ಅವರ ಪೋಟೋಗಳನ್ನು ಬಳಸಿಕೊಂಡು ಅವರನ್ನು ಟೀಕಿಸಲಾಗುತ್ತದೆ ಮತ್ತು ಅವರ ಹೆಸರಿನ ಜೊತೆಗೆ ಮುಸ್ಲಿಂ ಹೆಸರನ್ನು ಸೇರಿಸಿ ವ್ಯಂಗ್ಯ ಮಾಡಲಾಗುತ್ತದೆ.

ಆದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ನಾಯಕರು ಸಹ ಬಿಜೆಪಿ ನಾಯಕರು ಮುಸ್ಲಿಂ ಕಾರ್ಯಕ್ರಮದಲ್ಲಿ ಭಾಗಿಯಾದ ಪೋಟೋಗಳನ್ನು ಹಂಚಿಕೊಂಡು ಟೀಕಿಸುತ್ತಿರುತ್ತಾರೆ. ಅದೇ ರೀತಿಯಲ್ಲಿ ಈಗ  “ಈ ಫೋಟೋ ಎಲ್ಲರಿಗೂ ಅಲ್ಲ. ಬಂಗಮಾತಾ ಮಮತಾ ಬೇಗಂ ಎಂದು ಕರೆಯಲು ಇಷ್ಟಪಡುವ ಭಕ್ತರಿಗೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಹ ಮುಸ್ಲಿಮರ ಟೋಪಿ ಧರಿಸಿದ್ದರು.” ಎಂಬ ಸಂದೇಶದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್(ಟ್ವಿಟರ್‌)ನಲ್ಲಿ ಸಹ ಈ ಪೋಟೋಗಳು ವೈರಲ್ ಆಗುತ್ತಿದ್ದು. “1947 ರ ವಿಭಜನೆ ಇಲ್ಲದಿದ್ದರೆ ಸರಾಸರಿ ಹಿಂದೂ ರಾಷ್ಟ್ರೀಯವಾದಿಗಳು” ಎಂಬ ತಲೆಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್‌: ಮಾಜಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ ಅವರ ನಿಧನದ ನಂತರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ. ಇಬ್ಬರೂ ನಾಯಕರು ಅಂತ್ಯಸಂಸ್ಕಾರಕ್ಕೆ ತೆರಳಿ ಅವರ ಕುಟುಂಬವನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದರು. ಅದೇ ಫೋಟೋವನ್ನು ಆಗಸ್ಟ್ 27, 2019 ರಂದು ನ್ಯೂಸ್ 18 ವರದಿಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದೇ ದಿನ ‘ಪ್ರಧಾನಿ ಮೋದಿ, ಅಮಿತ್ ಶಾ ಅವರು ಅರುಣ್ ಜೇಟ್ಲಿ ಅವರ ಕುಟುಂಬವನ್ನು ಭೇಟಿಯಾಗಿ ಸಂತಾಪ ಸೂಚಿಸಿದ್ದಾರೆ’ ಎಂಬ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ನಾಯಕರು ಜೇಟ್ಲಿ ಅವರ ಮನೆಯಿಂದ ಹೊರಡುವಾಗ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ.

chrome
17-07-2020 , 15:55:37
PM Modi, Amit Shah Meet Arun Jaitley’s Family to Offer Condolences – Photogallery – Google Chrome

ಮೂಲ ಫೋಟೊದಲ್ಲಿ ಟೋಪಿ ಇಲ್ಲದಿರುವುದನ್ನು ಕಾಣಬಹುದು. ಈ ಚಿತ್ರವು ಪಿಟಿಐ ಆರ್ಕೈವ್ ನಲ್ಲಿಯೂ ಸಹ ಲಭ್ಯವಿದೆ. ಅದನ್ನು ಎಡಿಟ್ ಮಾಡಿ ಟೋಪಿ ಧರಿಸಿರುವ ರೀತಿ ಚಿತ್ರಿಸಲಾಗಿದೆ.

ನರೇಂದ್ರ ಮೋದಿಯವರು ಸಹ ಜೆಟ್ಲಿ ಅವರ ಮನೆಯವರನ್ನು ಭೇಟಿಯಾದ ಚಿತ್ರಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದ್ದರಿಂದ  ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿದ್ದರು ಎಂಬುದು ಸುಳ್ಳು, ಮತ್ತು ಇದು ಎಡಿಟೆಡ್ ಫೋಟೊ.

 


ಇದನ್ನು ಓದಿ: Fact Check: ತಮ್ಮ ಸ್ವಂತ ಮನೆಗೆ ಪುಲ್ಕಿತ್ ಕೇಜ್ರಿವಾಲ್ 10 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ಮುಸ್ಲಿಂ ಮತಗಳು ಸಾಕು, ಹಿಂದೂಗಳು ಬೇಡ ಎಂದು ಸಿದ್ದರಾಮಯ್ಯನವರು ಹೇಳಿಲ್ಲ. ಎಡಿಡೆಟ್ ಫೇಕ್ ನ್ಯೂಸ್ ಹಂಚಿಕೊಂಡ ಬಿಜೆಪಿಗರು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *