Fact Check: ನಟ ರಣವೀರ್ ಸಿಂಗ್ ಮೋದಿಯವರನ್ನು ಟೀಕಿಸಿದ್ದಾರೆ ಎಂಬುದು ಡೀಪ್ ಫೇಕ್ ವಿಡಿಯೋ

ರಣವೀರ್ ಸಿಂಗ್

ನೆನ್ನೆ ಲೋಕಸಭಾ 2024ರ ಮೊದಲ ಹಂತದ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗ ಕೆಲವು ಬಾಲಿವುಡ್‌ ನಟರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದರಲ್ಲಿ ನಟರು ಕಳೆದ ಹತ್ತುವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಹಾಗಾಗಿ ಯಾರು ಅಭಿವೃದ್ದಿ ಮಾಡುತ್ತಾರೆ ಅವರಿಗೆ ಮತ ನೀಡಿ ಎಂದು ಜನರನ್ನು ಕೇಳಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿದ್ದವು.

ಇತ್ತೀಚೆಗೆ “ಅಮಿರ್ ಖಾನ್ ಅವರು ನಿಮ್ಮ 25 ಲಕ್ಷ ಹಣ ಎಲ್ಲಿ ಹೋಯ್ತು?” ಎಂದು ಸಾರ್ವಜನಿಕರನ್ನು ಕೇಳಿದ್ದಾರೆ. ಹಾಗಾಗಿ ಸುಳ್ಳು ಭರವಸೆ ನೀಡುವವರಿಗೆ ನಿಮ್ಮ ಮತ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ ಎಂದು AI ಧ್ವನಿ ಕ್ಲೋನ್ ಬಳಸಿ ಮಾಡಿದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿತ್ತು.

ಈಗ, “ಇದು ಮೋದಿಜಿಯವರ ಉದ್ದೇಶ. ನಮ್ಮ ದುಃಖದ ಜೀವನ, ನಮ್ಮ ಭಯ, ನಮ್ಮ ನಿರುದ್ಯೋಗ ಮತ್ತು ಹಣದುಬ್ಬರವನ್ನು ಆಚರಿಸುವುದು ಅವರ ಉದ್ದೇಶವಾಗಿತ್ತು. ಏಕೆಂದರೆ ನಮ್ಮ ಭಾರತವು ಈಗ ಅಂತಹ ವೇಗದಲ್ಲಿ ಅನ್ಯಾಯದ ಸಮಯದತ್ತ ಸಾಗುತ್ತಿದೆ, ಆದ್ದರಿಂದ ನಾವು ನಮ್ಮ ಅಭಿವೃದ್ಧಿ ಮತ್ತು ನ್ಯಾಯಕ್ಕಾಗಿ ಬೇಡಿಕೆಯಿಡುವುದನ್ನು ಎಂದಿಗೂ ನಿಲ್ಲಿಸಬಾರದು, ಅದಕ್ಕಾಗಿಯೇ ನಾವು ಯೋಚಿಸಬೇಕು ಮತ್ತು ಮತ ಚಲಾಯಿಸಬೇಕು” ಎಂದು ನಟ ರಣವೀರ್ ಸಿಂಗ್ ಹೇಳಿದ್ದಾರೆ ಎಂಬ ವಿಡಿಯೋವೊಂದನ್ನು ಕಾಂಗ್ರೆಸ್‌ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. 

ಫ್ಯಾಕ್ಟ್‌ಚೆಕ್: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜೋಧ್‌ಪುರ ಅಭಿವೃದ್ಧಿಪಡಿಸಿದ ಡೀಪ್‌ಫೇಕ್ ಪತ್ತೆ ಸಾಧನವಾದ ಇಟಿಸಾರ್ ಅನ್ನು ಬಳಸಿಕೊಂಡು ಈ ವೀಡಿಯೊ ಪರಿಶೀಲಿಸಿದಾಗ ವೀಡಿಯೊವು AI ಧ್ವನಿ ಕ್ಲೋನ್ ಅನ್ನು ಹೊಂದಿರುವುದು ಪತ್ತೆಯಾಗಿದೆ.

ಇದೇ ವಿಡಿಯೋವನ್ನು ANI ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ ಏಪ್ರಿಲ್ 14, 2024 ರಂದು ಪೋಸ್ಟ್ ಮಾಡಲಾಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ಕೃತಿ ಸನನ್ ಕಾಶಿಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ANI ಹಂಚಿಕೊಂಡ ಮೂಲ 2 ನಿಮಿಷ ಮತ್ತು 33 ಸೆಕೆಂಡುಗಳ ಸುದೀರ್ಘ ಸಂದರ್ಶನದಲ್ಲಿ, ರಣವೀರ್ ಸಿಂಗ್ ಅವರು ANI ವರದಿಗಾರರೊಂದಿಗೆ ಕಾಶಿಗೆ ಭೇಟಿ ನೀಡಿದ ಬಗ್ಗೆ ಮಾತನಾಡುತ್ತಾ, “ಮೇಡಂ, ನಾನು ಏನನ್ನಾದರೂ ಹಂಚಿಕೊಳ್ಳುತ್ತೇನೆ.. ನಾನು ಮಾತನಾಡಲು ಪ್ರಾರಂಭಿಸಿದಾಗ, ನನ್ನ ಮಾತುಗಳು ಸ್ವಯಂಪ್ರೇರಿತವಾಗಿ ಹರಿಯುತ್ತವೆ. ನಾನು ಇಂದು ಅನುಭವಿಸಿದ್ದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ನನ್ನ ಜೀವನದುದ್ದಕ್ಕೂ ಶಿವನ ಭಕ್ತನಾಗಿದ್ದೇನೆ ಮತ್ತು ಮೊದಲ ಬಾರಿಗೆ ನಾನು ಕಾಶಿಗೆ ಭೇಟಿ ನೀಡಲು ಬಂದಿದ್ದೇನೆ, ನನ್ನ ತಾಯಿ ಮತ್ತು ನನ್ನ ಹೆಂಡತಿಯನ್ನು ಕರೆತರಲು ನಾನು ಬಯಸುತ್ತೇನೆ, ಒಂದು ವಿಭಿನ್ನವಾದ ಕಂಪನವಿತ್ತು, ಆರತಿಯ ಸಮಯದಲ್ಲಿ ಪಂಡಿತರು (ಪುರೋಹಿತರು) ಮಂತ್ರಗಳನ್ನು ಪಠಿಸಿದಾಗ, ಅವರ ಕಣ್ಣುಗಳಲ್ಲಿ ಒಂದು ವಿಶಿಷ್ಟವಾದ ಶಕ್ತಿ ಮತ್ತು ಶಕ್ತಿಯು ಮಿಂಚುತ್ತದೆ, ಮತ್ತು ಅವರ ಸುತ್ತಲೂ ಒಂದು ಸೆಳವು ಇದೆ… ಎತ್ತಿದ ಕೈಗಳಿಂದ ‘ಹರ್ ಹರ್ ಮಹಾದೇವ್’ ಎಂದು ಜಪಿಸುತ್ತಿದ್ದಾರೆ.”

“ಇದೆಲ್ಲವನ್ನೂ ನೋಡಿ ನಾನು ಸಂತೋಷದಿಂದ ತುಂಬಿದ್ದೇನೆ. ಇದು ಮೋದಿಜಿಯವರ ದೃಷ್ಟಿ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವುದು. ಭಾರತವು ಗಮನಾರ್ಹ ವೇಗದಲ್ಲಿ ಆಧುನಿಕತೆಯತ್ತ ಸಾಗುತ್ತಿದೆ, ಆದರೆ ನಾವು ಎಂದಿಗೂ ನಮ್ಮ ಬೇರುಗಳು ಮತ್ತು ಸಾಂಸ್ಕೃತಿಕ ಪರಂಪರೆ ಮರೆಯಬಾರದು. ಅದಕ್ಕಾಗಿಯೇ ಪರಂಪರೆಯೊಂದಿಗೆ ಅಭಿವೃದ್ಧಿಯು ನಿರ್ಣಾಯಕವಾಗಿದೆ – ಇದು ಹಿಂದಿನ ಮತ್ತು ಭವಿಷ್ಯದ ಮಿಶ್ರಣವಾಗಿದೆ. ಇತಿಹಾಸ ಮತ್ತು ಸಂಪ್ರದಾಯಕ್ಕಿಂತ ಹಳೆಯದಾದ, ಅಭಿವೃದ್ಧಿಗೆ ಸಾಕ್ಷಿಯಾಗಿರುವ ಕಾಶಿ ಒಂದು ಸಂಪೂರ್ಣ ವಿಸ್ಮಯವಾಗಿದೆ. ಈ ಅದ್ಭುತ ಸ್ಥಳದಲ್ಲಿ ಹಿಂದಿನ ಮತ್ತು ವರ್ತಮಾನದ ಏಕೀಕರಣವನ್ನು ನೋಡುವುದು ಒಂದು ಸಂಪೂರ್ಣ ಅದ್ಭುತವಾಗಿದೆ. ನಾನು ಕೆಲವು ವಿದೇಶಿಯರನ್ನು ಭೇಟಿಯಾಗಿ ಸ್ವಾಗತಿಸುವ ಸಂತೋಷವನ್ನು ಹೊಂದಿದ್ದೇನೆ.” ಎಂದಿದ್ದಾರೆ.

ಆದ್ದರಿಂದ ನಟ ರಣವೀರ್ ಸಿಂಗ್ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ ಎಂಬ ವೈರಲ್ ವಿಡಿಯೋ ಸುಳ್ಳು ಮತ್ತು ಇದು ಡೀಪ್‌ಫೇಕ್ ವಿಡಿಯೋ ಆಗಿದೆ.


ಇದನ್ನು ಓದಿ: Fact Check: NDA ಸರ್ಕಾರದ ಅವಧಿಗಿಂತ UPA ಸರ್ಕಾರದ ಅವಧಿಯಲ್ಲಿಯೇ ಗ್ಯಾಸ್ ಬೆಲೆ ಹೆಚ್ಚಾಗಿತ್ತು ಎಂಬುದು ಸುಳ್ಳು


ವಿಡಿಯೋ ನೋಡಿ: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *