Fact Check | ಪ್ರಧಾನಿ ಮೋದಿಯವರಿಗೆ ಕೈಯಿಂದ ಅಶ್ಲೀಲ ಚಿಹ್ನೆ ತೋರಿಸಲಾಗಿದೆ ಎಂಬ ಫೋಟೋ ಎಡಿಟೆಡ್ ಆಗಿದೆ

“ಈ ಫೋಟೋ ನೋಡಿ ಪ್ರಧಾನಿ ಮೋದಿ ಅವರಿಗೆ ವ್ಯಕ್ತಿಯೊಂಬ್ಬ ತನ್ನ ಕೈಯಿಂದ ಅಶ್ಲೀಲ ಚಿಹ್ನೆಯನ್ನು ತೋರಿಸಿದ್ದಾನೆ. ಆ ಮೂಲಕ ಪ್ರಧಾನಿ ಮೋದಿ ಅವರಿಗೆ ಅಗೌರವವನ್ನು ತೋರಿಸಿದ್ದಾನೆ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರಿನಿಂದ ಕೈ ಬೀಸುತ್ತಿರುವುದನ್ನು ನೋಡಬಹುದಾಗಿದೆ.

ಆದರೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಆಕ್ಷೇಪಾರ್ಹ ಸನ್ನೆ ಮಾಡಿರುವುದು ಪತ್ತೆಯಾಗಿದ್ದು,, ಈ ಫೋಟೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು,  ಬಿಜೆಪಿ ಬೆಂಬಲಿಗರು ವಿಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಇದೊಂದು ನಕಲಿ ಫೋಟೋ ಮತ್ತು ಪ್ರಧಾನಿಗೆ ಯಾರು ಕೂಡ ಈ ರೀತಿಯ  ಸನ್ನೆ ಮಾಡುವ ಧೈರ್ಯವನ್ನು ತೋರಿಸುವುದಿಲ್ಲ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ವೈರಲ್‌ ಫೋಟೋದಲ್ಲಿನ ಅಸಲಿಯತ್ತು ಏನು ಅನ್ನೋದನ್ನ ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಚಿತ್ರವನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಗಿತ್ತು. ಇದಕ್ಕಾಗಿ ವೈರಲ್‌ ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಟೋದಂತೆ ಹಲವು ಫೋಟೋಗಳು ಕೂಡ ಕಂಡು ಬಂದಿವೆ. ಈ ಫೋಟೋಗಳು ವೈರಲ್‌ ಫೋಟೋಗಿಂತ ಕೊಂಚ ಭಿನ್ನವಾಗಿದೆ. ಇದೇ ಫೋಟೋವನ್ನು ಬಳಸಿಕೊಂಡು ಬೇರೆ ಬೇರೆ ಮಾಧ್ಯಮಗಳು ವರದಿಯನ್ನು ಕೂಡ ಪ್ರಕಟ ಮಾಡಿವೆ.

ಈ ಬಗ್ಗೆ ಇನ್ನಷ್ಟು ಹುಡುಕಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದ ಮೂಲ ಫೋಟೋ 17 ಮೇ 2019 ರಲ್ಲಿ ಹಿಂದೂಸ್ತಾನ್‌ ಟೈಮ್ಸ್‌ನ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ಕೂಡ ಕಾಣಬಹುದಾಗಿ . ಈ ಮೂಲ ಫೋಟೋದಲ್ಲಿ ಎಲ್ಲಿಯೂ ಕೂಡ ಅಸಭ್ಯ ಚಿಹ್ನೆಯನ್ನು ತೋರಿಸುವ ಕೈ ಕಂಡು ಬಂದಿಲ್ಲ.

ಹಾಗಾಗಿ ಮೂಲ ಫೋಟೋವನ್ನು ಡಿಜಿಟಲ್ ಎಡಿಟ್ ಮಾಡಿದ ಆವೃತ್ತಿಯಾಗಿದೆ. ಮತ್ತು ವೈರಲ್‌ ಆಗಿರುವ ಫೋಟೋ ಒಂದು ವೇಳೆ ನಿಜವೇ ಆಗಗಿದ್ದರೆ ಈ ಕುರಿತು ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಬೇಕಾಗಿತ್ತು. ಹಾಗೂ ಇದು ರಾಷ್ಟ್ರ ಮಟ್ಟದ ಅತಿ ದೊಡ್ಡ ವಿವಾದವಾಗಿ ಪರಿಣಮಿಸಿಬೇಕಾಗಿತ್ತು. ಆದರೆ ಈ ವೈರಲ್‌ ಫೋಟೋ ಕುರಿತು ಅಂತಹ ಯಾವುದೇ ಘಟನೆಗಳು ನಡೆದಿಲ್ಲ.

ಒಟ್ಟಾರೆಯಾಗಿ ಹೆಳುವುದಾದರೆ ವೈರಲ್‌ ಆಗಿರುವ ಫೋಟೋಗೆ ಅಶ್ಲೀಲ ಚಿಹ್ನೆಯನ್ನು ಹೊಂದಿರುವ ಕೈಯೊಂದನ್ನು ಎಡಿಟ್‌ ಮಾಡಿ ಸೇರಿಸಲಾಗಿದ್ದು. ಇದು ನಿಜವಾಗಿ ನಡೆದ ಘಟನೆಯಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಮಾಡಲಾದ ಆರೋಪ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ಈ ವಿಡಿಯೋ ನೋಡಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *