ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ಜರುಗಿದೆ. ಆದರೆ ಕಳೆದ ಕೆಲವು ವಾರಗಳಿಂದ ಅನೇಕ ಹಳೆಯ ವಿಡಿಯೋಗಳನ್ನು ಇತ್ತೀಚಿನದು ಎಂದು ಬಿಂಬಿಸಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಣಿಪುರದಲ್ಲಿ ಮತ ಕೇಳಲು ಹೋದ ಬಿಜೆಪಿ ನಾಯಕರನ್ನು ತಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನಲ್ಲಿ ನಡೆದ ಹಳೆಯ ಘಟನೆಯನ್ನು ಹಂಚಿಕೊಳ್ಳಲಾಗುತ್ತಿತ್ತು.
ಈಗ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕನಿಗೆ ಜನರು ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ. ಎಂಬ ವಿಡಿಯೋ ಒಂದು ಎಕ್ಸ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು ಬಿಜೆಪಿ ನಾಯಕನೊಬ್ಬನಿಗೆ ಚಪ್ಪಲಿ ಹಾರ ಹಾಕುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ 2018 ರ ಜನವರಿ 7 ರಂದು ಮಧ್ಯಪ್ರದೇಶದ ಧಮನೋದ್ ಸಿವಿಕಲ್ ಚುನಾವಣೆಗೆ ಸಂಬಂಧಿಸಿದ್ದಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಅವರು ಮನೆ ಮನೆ ಪ್ರಚಾರ ನಡೆಸುವ ವೇಳೆ ವೃದ್ದರೊಬ್ಬರು ಅವರಿಗೆ ಚಪ್ಪಲಿ ಹಾರ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ANI, APB.Live, ಜೀ ನ್ಯೂಸ್ ವರದಿ ಮಾಡಿದ್ದಾರೆ.
ಈ ಕುರಿತು ANI ಗೆ ಪ್ರತೀಕ್ರಯಿಸಿರುವ ಧಮನೋದ್ ಸಿವಿಕ್ ಚುನಾವಣಾ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಅವರು, “ಅವರು ನಮ್ಮೊಳಬ್ಬೊಬ್ಬರಿದ್ದಾರೆ. ಅವರಿಗೆ ಅಸಮಾಧಾನವನ್ನುಂಟುಮಾಡುವ ಏನಾದರೂ ನಡೆದಿರಬಹುದು ಆಗಾಗಿ ಆತ ಹಾಗೆ ವರ್ತಿಸಿದ್ದಾನೆ. ನಾವು ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ” ಎಂದು ತಿಳಿಸಿದ್ದಾರೆ.
ಚಪ್ಪಲಿ ಹಾರ ತೊಡಿಸಿದ ವ್ಯಕ್ತಿ “ನಮ್ಮ ಪ್ರದೇಶದಲ್ಲಿ ತೀವ್ರವಾದ ನೀರಿನ ಸಮಸ್ಯೆ ಇದ್ದು ಅದನ್ನು ಬಗೆ ಹರಿಸದಿದ್ದಕ್ಕೆ ಹಾಗೆ ಮಾಡಿದೆ. ನನ್ನ ಹೆಂಡತಿ ಈ ಕುರಿತು ದೂರು ನೀಡಲು ಅಂದಿನ ಅಧ್ಯಕ್ಷರ ಬಳಿಗೆ ಹೋದರು ಆದರೆ ಆಕೆಯ ವಿರುದ್ಧ ದೂರು ದಾಖಲಿಸಲಾಗಿದೆ. ರಾತ್ರಿಯೂ ಸಹ ನಮ್ಮನ್ನು ಅನೇಕ ಬಾರಿ ಠಾಣೆಗೆ ಕರೆಸಿಕೊಂಡು ಹಿಂಸೆ ನೀಡಿದ್ದಾರೆ” ಎಂದು ANI ಗೆ ತಿಳಿಸಿದ್ದಾರೆ.
ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ವಿಡಿಯೋ ಹಳೆಯದಾಗಿದ್ದು ಲೋಕಸಭಾ ಚುನಾವಣೆಗೆ ಸಂಬಂದಿಸಿದ್ದಲ್ಲ.
ಇದನ್ನು ಓದಿ: Fact Check: ನಟ ರಣವೀರ್ ಸಿಂಗ್ ಮೋದಿಯವರನ್ನು ಟೀಕಿಸಿದ್ದಾರೆ ಎಂಬುದು ಡೀಪ್ ಫೇಕ್ ವಿಡಿಯೋ
ವಿಡಿಯೋ ನೊಡಿ: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ