Fact Check: ಮೋದಿಯವರ ಕಾಲದಲ್ಲಿ ನಿರ್ಮಿತವಾದ ಮುಂಬೈ ಸೇತುವೆ ಎಂದು ಚೀನಾದ ಪೋಟೋ ಹಂಚಿಕೊಳ್ಳಲಾಗುತ್ತಿದೆ

ಮುಂಬೈ ಸೇತುವೆ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಸಮಯದಿಂದಲೂ ಸಹ ಬೇರೆ ದೇಶಗಳ ಪೋಟೋ ಮತ್ತು ವಿಡಿಯೋಗಳನ್ನು ಬಳಿಸಿ ಭಾರತದ್ದು ಮತ್ತು ಮೋದಿಯವರು ನಿರ್ಮಾಣ ಮಾಡಿರುವುದು ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಇದರಲ್ಲಿ ಬೆರಳಣಿಕೆಯಷ್ಟು ನಿಜವಿದ್ದರೆ ಬಹುತೇಕ ಸುಳ್ಳಾಗಿರುತ್ತವೆ. ಗುಜರಾತ್ ಮೋಡೆಲ್ ಎಂದು ಭಾರತದಾದ್ಯಂತ ಹರಿದಾಡಿದ ಹಲವಾರು ರಸ್ತೆ, ಹೆದ್ದಾರಿ, ಸೇತುವೆ ಮತ್ತು ಕಟ್ಟಡ ನಿರ್ಮಾಣದ ಚಿತ್ರಗಳು ಅಭಿವೃದ್ಧಿ ಹೊಂದಿದ ಇತರೆ ರಾಷ್ಟ್ರಗಳದ್ದಾಗಿವೆ.

ಈಗ ಅದೇ ರೀತಿ, “ಇದು ಅಮೇರಿಕಾ ಅಥವಾ ಚೀನಾ ಅಲ್ಲ, ಇದು ಮುಂಬೈನ ಹೆದ್ದಾರಿ, ನೋಡಿ! ಮೋದಿ ಭಾರತ.” ಎಂದು ಪ್ರತಿಪಾದಿಸಿದ ಹೆದ್ದಾರಿಯೊಂದರ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದು ನರೇಂದ್ರ ಮೋದಿಯವರ ಕಾಲದಲ್ಲಿ ಉದ್ಘಾಟನೆಗೊಂಡ ಮುಂಬೈನ ಹೆದ್ದಾರಿ ಎಂದು ಪವನ್ ತಿವಾರಿ ಎಂಬ ಬಿಜೆಪಿ ಕಾರ್ಯಕರ್ತ ಹಂಚಿಕೊಂಡಿದ್ದಾರೆ. ಈ ಪೋಟೋ ನಿಜವೆಂದು ನಂಬಿ 74 ಸಾವಿರ ಜನ ಇಷ್ಟ ಪಟ್ಟಿದ್ದಾರೆ ಮತ್ತು 7, 200 ಜನ ಕಮೆಂಟ್ ಮಾಡಿದ್ದಾರೆ.

ಇದೇ ಪೋಟೋವನ್ನು ಪೋಸ್ಟ್‌ಕಾರ್ಡ್‌ ನ್ಯೂಸ್, ಮತ್ತು ಅನೇಕರು ತನ್ನ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌: ಈ ಮೇಲ್ಸೇತುವೆ ಹೆದ್ದಾರಿ ಮುಂಬೈನದ್ದಲ್ಲ. ಈ ಚಿತ್ರವು ಚೀನಾದಲ್ಲಿನ ಶಾಂಡೋಂಗ್ ಪೂರ್ವ ಪ್ರಾಂತ್ಯದಲ್ಲಿರುವ ಜಿಯಾಝೌ ಬೇ ಸೇತುವೆಯಾಗಿದೆ. ಇದು 26 ಮೈಲುಗಳಷ್ಟು ಉದ್ದ ಮತ್ತು ಚೀನಾದ ಪೂರ್ವ ಬಂದರು ನಗರವಾದ ಕಿಂಗ್ಡಾವೊದಿಂದ ಹುವಾಂಗ್ಡಾವೊ ದ್ವೀಪಕ್ಕೆ ಸಂಪರ್ಕಿಸುತ್ತದೆ.

ಅಲಾಮಿ ಸ್ಟಾಕ್ ಫೋಟೋ ಹೆಸರಿನ ಸ್ಟಾಕ್ ಇಮೇಜ್ ಪ್ಲಾಟ್‌ಫಾರ್ಮ್‌ನಲ್ಲಿ ಇದೇ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ಸುಮಾರು ಒಂದು ದಶಕದ ಹಿಂದೆ, ಜೂನ್ 27, 2011 ರಂದು ಅಪ್‌ಲೋಡ್ ಮಾಡಲಾಗಿದೆ. ಚಿತ್ರದ ಜೊತೆಗಿನ ವಿವರಣೆಯು ಜಿಯಾಝೌ ಬೇ ಸೇತುವೆಯನ್ನು ನ್ಯಾವಿಗೇಟ್ ಮಾಡುವ ವಾಹನಗಳನ್ನು ಚಿತ್ರಿಸುತ್ತದೆ ಎಂದು ಸ್ಪಷ್ಟಪಡಿಸಿದೆ, ಇದನ್ನು ಕ್ಯೂ ಕಿಂಗ್‌ಡಾವೊ ಗಲ್ಫ್ ಸೇತುವೆ ಎಂದು ಗುರುತಿಸಲಾಗಿದೆ, ಇದು ಚೀನಾದ ಶಾಂಡಾಂಗ್ ಪೂರ್ವ ಪ್ರಾಂತ್ಯದ ಕ್ಯೂ ಕಿಂಗ್‌ಡಾವೊ ನಗರದಲ್ಲಿದೆ.

ಇದಲ್ಲದೆ, ಜೂನ್ 7, 2023 ರಂದು ಚೀನಾ ಮಾಧ್ಯಮ ಔಟ್ಲೆಟ್ CCTV ಯ ಅಧಿಕೃತ ಫೇಸ್ಬುಕ್ ಪುಟದಲ್ಲಿ ವೈರಲ್ ಸೇತುವೆಯ ದೃಶ್ಯಗಳಲ್ಲಿ ನಾವು ಕಾಣಬಹುದು. ಪೋಸ್ಟ್‌ನ ಶೀರ್ಷಿಕೆಯಲ್ಲಿ ಚಿತ್ರವು ಮುಂಬೈನ ಸೇತುವೆಯ ಚಿತ್ರವಲ್ಲ, ಬದಲಿಗೆ ಚೀನಾದ್ದು ಎಂದು ಸ್ಪಷ್ಟಪಡಿಸುತ್ತದೆ.

ಇಲ್ಲಿ ವೈರಲ್ ಚಿತ್ರ ಮತ್ತು ಮೂಲ ಚಿತ್ರಗಳೆರಡರ ವ್ಯತ್ಯಾಸಗಳನ್ನು ಕಂಡುಕೊಳ್ಳಬಹುದು. ಎರಡೂ ಚಿತ್ರಗಳಲ್ಲಿರುವ ಕಮಾನುಗಳು ಒಂದೇ ರೀತಿ ಇರುವುದನ್ನು ನೋಡಬಹುದು.

ಆದ್ದರಿಂದ ಇದು ಮುಂಬೈ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ನಿರ್ಮಿತವಾದ ಸೇತುವೆ ಅಲ್ಲ.


ಇದನ್ನು ಓದಿ: ಮಣಿಪುರದಲ್ಲಿ ನಡೆದ ಗಲಾಟೆ ನಕಲಿ ಮತದಾನಕ್ಕೆ ಸಂಬಂಧಿಸಿದ್ದಾಗಿದೆ


ವಿಡಿಯೋ ನೋಡಿ: ರಾಹುಲ್‌ ಗಾಂಧಿ ರಹಸ್ಯ ವಿವಾಹ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *