ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..! ಸಿಡಿ ಶಿ….ಕುಮಾರನ ಸಂತತಿಗಳೇ ಹು ಶುರು ಮಾಡಿ ನೀವು HD ವಿಡಿಯೋ ರಿಲೀಸ್ ಮಾಡಿ ನಾವು FullHD ರಿಲೀಸ್ ಮಾಡ್ತೀವಿ … ಅಬ್ಬಬಾ ರುಚಿಕರ ಸಂಭಾಷಣೆ..ವಿಡಿಯೋ ತುಂಬಾ ಕಾಸ್ಟ್ಲಿ ಯಾರು ಕೇಳಬೇಡಿ ಅವರು ಬಿಟ್ಟರೆ ನಾವು ಬಿಡೋಣ ಈಗಲೇ ಬಿಟ್ಟರೆ ಏನು ಮಜ…ಬಿಡ್ರೋ ಬಿಡ್ರಿ ನೋಡೋಣ…” ಎಂದು ಜೆಡಿಎಸ್ ಯುವ ಘಟಕ ಫೋಟೋವೊಂದನ್ನು ಹಂಚಿಕೊಂಡಿದೆ.
ಈ ಫೋಟೋದಲ್ಲಿ “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..!” ಎಂದು ಶೀರ್ಷಿಕೆ ನೀಡಿರುವ ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ನೇರವಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆರೋಪವನ್ನು ಮಾಡಿದೆ. ಇದನ್ನೇ ನಂಬಿದ ಸಾಕಷ್ಟು ಮಂದಿ ಇದು ನಿಜವಾಗಿಯೂ ಡಿ.ಕೆ. ಶಿವಕುಮಾರ್ ಎಂದು ನಂಬಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಫೋಟೋದಲ್ಲಿರುವ ವ್ಯಕ್ತಿ ನಿಜವಾಗಿಯೂ ಡಿ.ಕೆ.ಶಿವಕುಮಾರ್ ಅವರೇ ಎಂದು ಈ ಅಂಕಣದಲ್ಲಿ ಪರಿಶೀಲಿಸೋಣ..
ಪ್ಯಾಕ್ಟ್‌ಚೆಕ್
ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್ ಅನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಇದೇ ಫೋಟೋಗೆ ಹೋಲುವ ಹಲವು ಫೋಟೋಗಳು ಕೂಡ ಕಂಡು ಬಂದವು. ಮತ್ತಷ್ಟು ಪರಿಶೀಲನೆ ನಡೆಸಿದಾಗ, 3 ನವೆಂಬರ್ 2019ರಲ್ಲಿ democraticaccent.com ಎಂಬ ಸುದ್ದಿ ತಾಣ ಮಾಡಿದ ವರದಿಯೊಂದು ಲಭ್ಯವಾಗಿದೆ.
ವರದಿಯ ಪ್ರಕಾರ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ಅವರು ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರೇ ಖುದ್ದು ಗೋಪಾಲ್‌ರವರ ರಾಜಿನಾಮೆಯನ್ನು ಸ್ವೀಕರಿಸಿದ್ದರು
ಈಗ ಆ ಫೋಟೋಗಳನ್ನು ಡಿ.ಕೆ. ಶಿವಕುಮಾರ್ ಅವರದ್ದೇ ಎಂಬಂತೆ ಬಿಂಬಿಸಿ ಹರಿಬಿಡಲಾಗುತಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಇನ್ನು ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್ ಈ ಬಗ್ಗೆ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆ (ಈ ಹಿಂದಿನ ಟ್ವಿಟರ್)ಯಲ್ಲಿ ಹಂಚಿಕೊಂಡಿದ್ದಾರೆ.
Mischief mongers of the bjp, fyi we have filed legal cases. pic.twitter.com/8pKzZcj2Fm
— Lavanya Ballal Jain (@LavanyaBallal) April 30, 2024
ಒಟ್ಟಾರೆಯಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಲು ಹೋಗಿ ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಮುಜುಗರಕ್ಕೆ ಒಳಗಾಗಿದೆ.
ಇದನ್ನೂ ಓದಿ : ರಾಹುಲ್ ಗಾಂಧಿ ರಹಸ್ಯ ವಿವಾಹ ಎಂಬುದು ಸುಳ್ಳು | @rahulgandhi | Congress | INC | Kannada Fact check
ಈ ವಿಡಿಯೋ ನೋಡಿ : ರಾಹುಲ್ ಗಾಂಧಿ ರಹಸ್ಯ ವಿವಾಹ ಎಂಬುದು ಸುಳ್ಳು | @rahulgandhi | Congress | INC | Kannada Fact check